ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ashwini Gowda: ಸುದೀಪ್‌ ಅವರು ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ! ಅಶ್ವಿನಿ ಗೌಡ

Sudeep: ಬಿಗ್‌ ಬಾಸ್‌ ಸೀಸನ್‌ 12ರ ವಿನ್ನರ್‌ (Winner) ಗಿಲ್ಲಿ ಆಗಿದ್ದಾರೆ. ಬಿಗ್‌ ಬಾಸ್‌ ಶುರು ಆದಾಗಿನಿಂದಲೂ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ,ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಅಶ್ವಿನಿ ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. BBK 12ರ ಒಟ್ಟಾರೆ ವೋಟ್​​​ ನಂಬರ್ ಆಚೆ ಬಂದರೆ ನಾನೇ ವಿನ್ನರ್ ಎಂದು ಅಶ್ವಿನಿ ಗೌಡ ಸವಾಲು ಹಾಕಿದ್ದಾರೆ. ಗಿಲ್ಲಿಯನ್ನು ವಿನ್ನರ್ ಎಂದು ಒಪ್ಪಿಕೊಳ್ಳಲು ಅಶ್ವಿನಿ ಗೌಡ ಅವರು ಸಿದ್ಧವಾಗಿಲ್ಲ. ಗಿಲ್ಲಿ ಬಗ್ಗೆ ಅಸಮಾಧನ ಹೊರ ಹಾಕಿದ್ದಾರೆ.

ಅಶ್ವಿನಿ ಗೌಡ

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ವಿನ್ನರ್‌ (Winner) ಗಿಲ್ಲಿ(Gilli Nata) ಆಗಿದ್ದಾರೆ. ಬಿಗ್‌ ಬಾಸ್‌ ಶುರು ಆದಾಗಿನಿಂದಲೂ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ,ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಅಶ್ವಿನಿ ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. BBK 12ರ ಒಟ್ಟಾರೆ ವೋಟ್​​​ ನಂಬರ್ ಆಚೆ ಬಂದರೆ ನಾನೇ ವಿನ್ನರ್ ಎಂದು ಅಶ್ವಿನಿ ಗೌಡ (Ashwini Gowda) ಸವಾಲು ಹಾಕಿದ್ದಾರೆ. ಗಿಲ್ಲಿಯನ್ನು ವಿನ್ನರ್ ಎಂದು ಒಪ್ಪಿಕೊಳ್ಳಲು ಅಶ್ವಿನಿ ಗೌಡ ಅವರು ಸಿದ್ಧವಾಗಿಲ್ಲ. ಗಿಲ್ಲಿ ಬಗ್ಗೆ ಅಸಮಾಧನ ಹೊರ ಹಾಕಿದ್ದಾರೆ.

ನಾನೇ ವಿನ್ನರ್‌ ಆಗಬೇಕಿತ್ತು

ಮಾಧ್ಯಮವೊಂದಕ್ಕೆ ಅಶ್ವಿನಿ ಗೌಡ ಮಾತನಾಡಿ, ನನಗೆ ಬಂದಿರೋ ಮಾಹಿತಿ ಪ್ರಕಾರ, ವೋಟ್‌ಗಳಲ್ಲಿ ತುಂಬಾ ಅಜಗಜಾಂತರ ವ್ಯತ್ಯಾಸ ಇದೆ. ಇದೆಲ್ಲ ನೋಡಿದ್ರೆ ನಾನೇ ವಿನ್ನರ್‌ ಆಗಬೇಕಿತ್ತು. ನನಗೂ, ಗಿಲ್ಲಿಗೂ ಬಂದ ಮತಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ. ಆ ಸಂಖ್ಯೆ ಹೊರಹಾಕಿದೆ ನಾನೇ ವಿನ್ನರ್’ ಎಂದು ಅಶ್ವಿನಿ ಹೇಳಿದ್ದಾರೆ.

ಇದನ್ನೂ ಓದಿ: Priyanka Achar: ಕಿಚ್ಚ ಸುದೀಪ್ ಶಿಷ್ಯನ ಚೊಚ್ಚಲ ಸಿನಿಮಾಗೆ 'ಏಳುಮಲೆ' ಪ್ರಿಯಾಂಕಾ ನಾಯಕಿ!

ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ

ಇದು ಕಾಮಿಡಿ ಶೋ ಅಲ್ಲ. ವ್ಯಕ್ತಿತ್ವದ ಆಟ. ಇದು ಯಾವ ಮಾನದಂಡದ ಮೇಲೆ ಒಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಮನಸ್ಸಿಗೂ ಗಾಯ ಆಗಿದೆ. ವ್ಯಕ್ತಿತ್ವಕ್ಕೂ ಗಾಯ ಆಗಿದೆ. ಇದು ಯಾವುದೂ ಲೆಕ್ಕಕ್ಕೆ ಬರಲಿಲ್ಲ.

ಬಿಗ್‌ ಬಾಸ್‌ಗೆ ಹೇಗೆ ಟಫ್‌ ಆಗಿರಬೇಕು ಹಾಗೇ ಇದ್ದೆ. ಇಲ್ಲಿಯವರೆಗೂ ಯಾರು ನನ್ನ ಥರ ಟಫ್‌ ಕಂಟೆಸ್ಟಂಟ್‌ ಬಂದಿಲ್ಲ. ಇನ್ಮುಂದೆ ಬರ್ತಾರೆ ಅಂದ್ರೆ ನನ್ನ ಮೀರಿ ಹೋಗಬೇಕು. . ‘ಸುದೀಪ್ ಅವರು ಈ ಬಾರಿಯಾದರೂ ಮಹಿಳೆಯರ ಕೈ ಎತ್ತುತ್ತಾರೆ ಎಂದುಕೊಂಡಿದ್ದೆ. ಆದರೆ, ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ’ ಎಂದು ಅಶ್ವಿನಿ ಹೇಳಿದ್ದಾರೆ.



ಇತಿಹಾಸವೇ ಕ್ರಿಯೇಟ್‌ ಮಾಡಿದೆ

ನಾವು ಈ ಸೀಸನ್‌ನಲ್ಲಿ ಇದ್ವಿ ಅನ್ನೋದೆ ನಮ್ಮ ಪುಣ್ಯ. ಅಶ್ವಿನಿ ಗೌಡ ವರ್ಸಸ್‌ ಗಿಲ್ಲಿ ಅನ್ನೋ ರೀತಿ ಇತ್ತು. ಇಲ್ಲಿಯವರೆಗೂ ನಾನು ಬಂದಿದ್ದೀನಿ ಅಂತಂದರೆ ನಾನು ಗೆದ್ದಿದ್ದೀನಿ ಅಂತಲೇ ಅರ್ಥ. ನನ್ನ ಬಗ್ಗೆ ತುಂಬಾ ಹೆಮ್ಮೆ ಇದೆ. ಹಿಂದೆ ಈ ತರಹ ಸೀಸನ್‌ ಬಂದಿಲ್ಲ. ಮುಂದೆ ಬಿಗ್‌ ಬಾಸ್‌ನ ಬೆಟ್ಟರ್‌ ವರ್ಷನ್‌ ನೋಡೋದಕ್ಕೆ ಕಾಯ್ತಿದ್ದೇನೆ. ಯಾಕೆಂದರೆ, ಒಂದು ಇತಿಹಾಸವೇ ಕ್ರಿಯೇಟ್‌ ಮಾಡಿದೆ” ಎಂದರು ಅಶ್ವಿನಿ ಗೌಡ.

ಇದನ್ನೂ ಓದಿ: Siddu Moolimani: ಹಾರರ್ ಕಾಮಿಡಿ ಸಸ್ಪೆನ್ಸ್ 'ಸೀಟ್ ಎಡ್ಜ್' ಟ್ರೈಲರ್‌ ಔಟ್‌! ಒಂದೊಳ್ಳೆ ಯೂಟ್ಯೂಬರ್‌ ಕತೆ

ಬಿಗ್‌ ಬಾಸ್‌ ಸೀಸನ್‌ 12ರ ಟ್ರೋಪೀಯನ್ನು ಗೆದ್ದು ಬೀಗಿದ್ದಾರೆ ಗಿಲ್ಲಿ ನಟ. ಗಿಲ್ಲಿ ಕ್ರೇಜ್‌ ಜೋರಾಗಿದೆ. ಅಷ್ಟೇ ಅಲ್ಲ ಕೈಗೆ ಸಿಗಲಾರದಷ್ಟು ಬ್ಯುಸಿ ಆಗಿದ್ದಾರೆ ಗಿಲ್ಲಿ. ನಟನ ಹುಟ್ಟೂರಿನಲ್ಲಿ ಮೆರವಣಿಗೆಯೂ ಜೋರಾಗಿ ಆಗಿದೆ. ಇದರ ಬೆನ್ನಲ್ಲೇ ಅಶ್ವಿನಿ ಗೌಡ ಅವರು ಬಡವರ ಮಕ್ಕಳು ಬೆಳೆಯಬೇಕು ನಿಜ. ಆದರೆ ಗಿಲ್ಲಿ ಬಡವ ಅಲ್ಲ, ಬಡವರ ಥರ ಗೆಟಪ್ ಹಾಕಿಕೊಂಡು ಆಟ ಆಡಿದ ಎಂದು ಅಶ್ವಿನಿ ಹೇಳಿದ್ದರು.

Yashaswi Devadiga

View all posts by this author