Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್, ರನ್ನರ್! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ
Rakshitha Shetty: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ರನ್ನರ್ ಅಪ್ ರಕ್ಷಿತಾ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ದಾಖಲೆಯ ವೋಟ್ ವಿನ್ನರ್ ಸ್ಪರ್ಧಿ ಪಡೆದುಕೊಂಡಿದ್ದರೆ, ರನ್ನರ್ ಅಪ್ ಕೂಡ ಸ್ಪಲ್ಪ ಅಂತದರಲ್ಲಿ ಇದ್ದಾರೆ ಎಂದಿದ್ದರು. ಅದರಂತೆ ರಕ್ಷಿತಾ ಸಖತ್ ವೋಟ್ ಪಡೆದು ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12 Runner Up) ಗ್ರ್ಯಾಂಡ್ ಫಿನಾಲೆ (Grand Finale) ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್ ವಿನ್ನರ್ (Gilli Nata Winner) ಆಗಿ ಹೊರಹೊಮ್ಮಿದ್ದಾರೆ. ರನ್ನರ್ ಅಪ್ ರಕ್ಷಿತಾ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ದಾಖಲೆಯ ವೋಟ್ ವಿನ್ನರ್ ಸ್ಪರ್ಧಿ ಪಡೆದುಕೊಂಡಿದ್ದರೆ, ರನ್ನರ್ ಅಪ್ (Runner Up) ಕೂಡ ಸ್ಪಲ್ಪ ಅಂತದರಲ್ಲಿ ಇದ್ದಾರೆ ಎಂದಿದ್ದರು. ಅದರಂತೆ ರಕ್ಷಿತಾ ಸಖತ್ ವೋಟ್ ಪಡೆದು ರನ್ನರ್ ಅಪ್ ಆಗಿದ್ದಾರೆ. 25 ಲಕ್ಷ ಹಣ ಪಡೆದುಕೊಂಡಿದ್ದಾರೆ.
ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು. ಖುದ್ದು ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಅದಾದ ಬಳಿಕ ಜಾರ್ ಅಪ್ಲಿಕೇಶನ್ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು.
ಲೇಟಾಗಿ ಲೇಟೆಸ್ಟ್ ಆಗಿ ಎಂಟ್ರಿ
ರಕ್ಷಿತಾ ಬಿಗ್ ಬಾಸ್ ಮನೆಗೆ ಒಂದು ವಾರದ ಬಳಿಕ ಎಂಟ್ರಿ ಕೊಟ್ಟವರು. ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಲೇಟಾಗಿ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು. ರಕ್ಷಿತಾ ಶೆಟ್ಟಿ ಮನೆಯೊಳಗೆ ಕಾಲಿಟ್ಟ ಮರುಕ್ಷಣವೇ ಮನೆಯೊಳಗಿದ್ದ 18 ಕಂಟೆಸ್ಟೆಂಟ್‌ಗಳಿಗೆ ಭಾರೀ ಕ್ಲಾಸ್ ತೆಗೆದುಕೊಂಡಿದ್ದರು,ಮೊದಲ ದಿನವೇ ನಾಮಿನೇಷನ್ ಮಾಡಿ ತುಳುನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಅವರನ್ನು ಹೊರಗೆ ಕಳುಹಿಸಿದ್ದು ಬಿಗ್ ಬಾಸ್ ವೀಕ್ಷಕರಿಗೆ ತೀವ್ರ ಬೇಸರ ತಂದಿತ್ತು.
ಇದನ್ನೂ ಓದಿ: Bigg Boss Kannada 12: ಈ ಸೀಸನ್ ವಿನ್ನರ್‌ಗೆ ಬಂದಿದೆ ಬರೋಬ್ಬರಿ 37 ಕೋಟಿಗೂ ಅಧಿಕ ವೋಟುಗಳು! ಯಾರದು?
ಈ ನಿರ್ಧಾರ ತಪ್ಪು ಎಂದು ಹಲವು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.ರಕ್ಷಿತಾ ಟಾಸ್ಕ್ ಅಂತ ಬಂದರೆ ಸಖತ್ ಆಕ್ಟಿವ್ ಆಗಿ ಆಡಿದ್ದರು. ಮಾರ್ನಿಂಗ್ ಸಾಂಗ್ ಪ್ಲೇ ಆದ್ರೆ ಸಾಕು ಸಖತ್ ಸ್ಟೆಪ್ಟ್ ಇಡುವ ರಕ್ಷಿತಾ, ಮನೆಯಯಲ್ಲಿ ಮನರಂಜನೆಯನ್ನೂ ನೀಡಿದವರು .
ಆರಂಭದಲ್ಲೇ ರಕ್ಷಿತಾ ಶೆಟ್ಟಿ ಅವರನ್ನ ಅಶ್ವಿನಿ ಗೌಡ ಹಾಗೂ ಜಾಹ್ನವಿ ಟಾರ್ಗೆಟ್ ಮಾಡಿದರು. ಗೆಜ್ಜೆ ಮ್ಯಾಟರ್‌ನಲ್ಲಿ ರಕ್ಷಿತಾ ಶೆಟ್ಟಿ ಅವರನ್ನ ಬಕ್ರಾ ಮಾಡಲು ಮುಂದಾದರು. ಈ ಘಟನೆಯಲ್ಲಿ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಆಕ್ಷೇಪಾರ್ಹ ಪದಗಳನ್ನ ಬಳಸಿದ್ದರು. ಅದು ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಬಹುದೊಡ್ಡ ಹೊಡೆತ ಬಿತ್ತು. ಇದೇ ಘಟನೆಯಿಂದ ರಕ್ಷಿತಾ ಶೆಟ್ಟಿಗೆ ದೊಡ್ಡ ಮಟ್ಟದಲ್ಲಿ ಸಿಂಪಥಿ ಕ್ರಿಯೇಟ್ ಆಯ್ತು.
ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿಯದ್ದೇ ಹವಾ
ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್ ಮಾಡಿ, ಹೊರಗೆ ಕಳುಹಿಸಲಾಗಿತ್ತು. ಆದರೆ ಉಳಿದ ಸದಸ್ಯರಿಗೆ ಗೊತ್ತಿಲ್ಲದಂತೆ ಅವರಿಬ್ಬರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿದ್ದರು ಬಿಗ್ ಬಾಸ್. ಬಹಳ ಸೀಸನ್‌ಗಳ ಬಳಿಕ ಈ ಟಾಸ್ಕ್ ಮಾಡಿಸಲಾಗಿತ್ತು. ಆದರೆ ಧ್ರುವಂತ್ ಜೊತೆಗೆ ಇರಲಾರದೇ, ವಾಪಸ್ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಗೋಳಾಡಿದ್ದರು ರಕ್ಷಿತಾ. ಆದರೂ ಛಲ ಬಿಡದ ರಕ್ಷಿತಾ ಅಲ್ಲಿಯೂ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದರು.
ಗಿಲ್ಲಿ ಮೇಲೆ ಪುಟ್ಟಿಗೆ ಕ್ರಶ್!
ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ, ಗಿಲ್ಲಿ–ರಕ್ಷಿತಾ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಗಿಲ್ಲಿ ಜೊತೆ ಹೆಚ್ಚು ಸಮಯ ಕಳೆಯಲು ರಕ್ಷಿತಾ ಆಸಕ್ತಿ ತೋರಿಸುತ್ತಿದ್ದರು. ಗಿಲ್ಲಿ ಕಾವ್ಯಾ ಅಥವಾ ಇತರರ ಜೊತೆ ಮಾತನಾಡಿದರೆ ಬೇಸರಪಡುತ್ತಿದ್ದ ದೃಶ್ಯಗಳು ಕೂಡ ಮನೆಯಲ್ಲಿ ಕಂಡುಬಂದಿದ್ದವು.
ಒಮ್ಮೆ ಗಿಲ್ಲಿಯಂತ ಬಾಯ್‌ಫ್ರೆಂಡ್ ಬೇಕು ಎಂದು ರಕ್ಷಿತಾ ಹೇಳಿದ್ದ ಮಾತು ಕೂಡ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆಗೆ ಬಂದಿತ್ತು.ಗಿಲ್ಲಿ ನನಗೆ ಇಷ್ಟವಿಲ್ಲ, ನನ್ನ ಬಾಯ್‌ಫ್ರೆಂಡ್ ಅಥವಾ ಪತಿ ಆಗುವ ಅರ್ಹತೆಯೇ ಅವರಿಗೆ ಇಲ್ಲ ಎಂದು ರಕ್ಷಿತಾ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಾತುಗಳು ಗಿಲ್ಲಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.