‘ಮದರ್ ಪ್ರಾಮಿಸ್’ ಸಿನಿಮಾ (Mother Promise Cinema) ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಶೋಗಳು ಸಹ ಚೆನ್ನಾಗಿ ಹೌಸ್ ಫುಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಸಹ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಹರಿದಾಡುತ್ತಿವೆ. ಕೆಲವರು ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು (Nagative) ಸಹ ಹಂಚಿಕೊಂಡಿದ್ದಾರೆ. ಡಾಲಿ ಧನಂಜಯ್ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
‘ಜನ ಸಿನಿಮಾ ನೋಡುವ ಮುಂಚೆಯೇ ಆ ಸಿನಿಮಾವನ್ನು ಇಲ್ಲದ ಹಾಗೆ ಮಾಡುವುದೇ ಕೆಲವರ ಗುರಿ ಆಗಿದೆ. ನೀವು ರೇಟಿಂಗ್ಸ್ ಬೇಕಾದರೆ ಬದಲಾವಣೆ ಮಾಡಬಹುದು ಆದರೆ ಜನರ ಭಾವನೆಗಳನ್ನು, ಅವರ ಪ್ರೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. ‘ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಮೊದಲು ನೀವು ಸಿನಿಮಾ ನೋಡಿ, ನಿಮ್ಮ ಅಭಿಪ್ರಾಯ ಸ್ವಂತವಾಗಿ ರೂಪಿಸಿಕೊಳ್ಳಿ’ ಎಂದಿದ್ದಾರೆ ಡಾಲಿ.
ಇದನ್ನೂ ಓದಿ: Kulavadhu Actress : ಡಿವೋರ್ಸ್ ತಪ್ಪಲ್ಲ , ಅದು ಒಳ್ಳೆದೇ! ನಟಿ ಧನ್ಯಾ ದೀಪಿಕಾ
‘ತುಂಬಾ ಜನಕ್ಕೆ ‘ಮದರ್ ಪ್ರಾಮಿಸ್’ ಸಿನಿಮಾ ಇಷ್ಟ ಆಗುತ್ತಿದೆ. ಕೆಲವರಿಗೆ ಇಷ್ಟ ಆಗದೆ ಕೂಡ ಇರಬಹುದು, ಅದನ್ನ ಹೇಳಿದರೆ ನಾವು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಳ್ಳುತ್ತೇವೆ. ವಿಮರ್ಶೆಗಳ ಸಾಮಾನ್ಯ. ಆದರೆ ಉದ್ದೇಶಪೂರ್ವಕವಾಗಿ, ಚೆನ್ನಾಗಿ ಓಡುತ್ತಿರುವ ಸಿನಿಮಾನ ಸಾಯಿಸೋಕೆ, ಒಂದು ದ್ವೇಷಪೂರಿತ ಪ್ರಯತ್ನ ಮಾಡೋದು, ಚಿತ್ರರಂಗಕ್ಕೆ ಒಳ್ಳೆಯದಲ್ಲ. ಇದು ಚೆನ್ನಾಗಿ ಓಡುವ ಎಲ್ಲ ಸಿನಿಮಾಗಳಿಗೂ ಆಗುತ್ತಾ ಇದೆ. ಇದೇ ಕಾರಣಕ್ಕೆ ಎಲ್ಲ ನಿರ್ಮಾಪಕರು ನ್ಯಾಯಾಲಯದಿಂದ ಇಂದ ಆದೇಶ ತಂದು ಬುಕ್ ಮೈ ಶೋನಲ್ಲಿ ರೇಟಿಂಗ್ಸ್ ಮತ್ತು ಕಮೆಂಟ್ಸ್ ನ ತೆಗೆದು ಹಾಕಿಸುತ್ತಿದ್ದಾರೆ. ಅದರಿಂದ ಪ್ರಾಮಾಣಿಕ ವಿಮರ್ಶೆಗಳಿಗೂ ತಡೆಯೊಡ್ಡಿದಂಗೆ ಆಗತ್ತೆ. ಒಂದು ಆರೋಗ್ಯಕರ ವ್ಯವಸ್ಥೆ ನಿರ್ಮಾಣ ಆಗಬೇಕು. ಈ ಕೆಟ್ಟ ಸಂಸ್ಕೃತಿ ನಿಲ್ಲಬೇಕು’ ಎಂದಿದ್ದಾರೆ ಡಾಲಿ.
ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಸೇರಿದಂತೆ ನಟ ನಾಗಭೂಷಣ್, ಹಿರಿಯ ನಟಿ ವಿನಯಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ. ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ: Actor Arya: ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲು
ನಿರ್ದೇಶನದ ಜವಾಬ್ದಾರಿ ಪೂರ್ಣ ವಹಿಸಿಕೊಂಡಿದ್ದು, ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ನಿರ್ದೇಶಕ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಈ ಸಿನಿಮಾಗೆ ಕೆಲಸ ಮಾಡಿದ್ದಾರೆ. ರಾಹುಲ್ ರಾಯ್ ಕ್ಯಾಮೆರಾ, ನವನೀತ್ ಶ್ಯಾಮ್ ಸಂಗೀತಾ ನಿರ್ದೇಶನ ಈ ಚಿತ್ರಕ್ಕಿದೆ.