Kulavadhu Actress : ಡಿವೋರ್ಸ್ ತಪ್ಪಲ್ಲ , ಅದು ಒಳ್ಳೆದೇ! ನಟಿ ಧನ್ಯಾ ದೀಪಿಕಾ
Kulavadhu Actress : ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದ 'ಕುಲವಧು' (Kulavadhu Serial) ಧಾರಾವಾಹಿ ದೀಪಿಕಾಗೆ ಹೆಚ್ಚಿನ ಪ್ರಖ್ಯಾತಿ ತಂದುಕೊಟ್ಟಿತ್ತು. 7 ವರ್ಷಗಳ ಹಿಂದೆ ನಟ ಆಕರ್ಷ್ ಜೊತೆ ಆಕೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಏಕಾಏಕಿ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ದೀಪಿಕಾ ವೈಯಕ್ತಿಕ ಜೀವನದ ಬಗ್ಗೆ ಹೇಳೋದಾದರೆ ಲವ್ ಮ್ಯಾರೆಜ್ ಆಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಆಕರ್ಷ್ ಹಾಗೂ ದೀಪಿಕಾ ನಟಿಸಿದ್ದರು. ಆಗ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿ ಮದುವೆಯ ಬಂಧಕ್ಕೆ ಒಳಗಾಗಿದ್ದರು.
ಧನ್ಯಾ ದೀಪಿಕಾ -
ಸ್ಟಾರ್ ಸುವರ್ಣ ವಾಹಿನಿಯ (Star Suvarna) 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ದೀಪಿಕಾ ನಟಿಸುತ್ತಿದ್ದರು. ಆ ಬಳಿಕ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದ 'ಕುಲವಧು' (Kulavadhu Serial) ಧಾರಾವಾಹಿ ದೀಪಿಕಾಗೆ ಹೆಚ್ಚಿನ ಪ್ರಖ್ಯಾತಿ ತಂದುಕೊಟ್ಟಿತ್ತು. 7 ವರ್ಷಗಳ ಹಿಂದೆ ನಟ ಆಕರ್ಷ್ ಜೊತೆ ಆಕೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಏಕಾಏಕಿ ಡಿವೋರ್ಸ್ (Divorce) ಬಗ್ಗೆ ಮಾತನಾಡಿದ್ದಾರೆ.
ಅವಶ್ಯಕತೆಗಳು ಗೊತ್ತೇ ಇರುವುದಿಲ್ಲ
ನಟಿ ಮಾತನಾಡಿ, ʻಅರೆಂಜ್ ಮ್ಯಾರೆಜ್ ಅಲ್ಲಿ ಯಾರೂ ಯಾರ ಬಗ್ಗೆ ಗೊತ್ತೇ ಇರುವುದಿಲ್ಲ. ಅವರ ಅವಶ್ಯಕತೆಗಳು ಗೊತ್ತೇ ಇರುವುದಿಲ್ಲ. ನಮ್ಮ ಜೀವನದಲ್ಲಿ ಯಾರು ಬರಬೇಕು, ಯಾರು ಇರಬೇಕು, ಯಾರು ಹೋಗಬೇಕು ಎನ್ನುವುದು ಮೊದಲೇ ನಿಶ್ಚಯವಾಗಿರುತ್ತದೆ. ಇನ್ನು ಮದುವೆ ಅನ್ನೋದು ಒಂದು ಜೋಡಿಯ ಜೀವನ ಹಾಳು ಮಾಡಿರುವಂತೆ ಇರಬಾರದುʼ ಎಂದಿದ್ದಾರೆ.
ಇದನ್ನೂ ಓದಿ: Singer S Janaki: ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು!
ʻಡಿವೋರ್ಸ್ ಕೂಡ ಅಷ್ಟೆ. ಮದುವೆ ಜೀವನ ಅನ್ನುವುದು ನಿಮಗೆ ಅಲ್ಲಿಗೆ ಕೊನೆ ಅನ್ನಿಸುತ್ತೆ. ಅದು ಬಿಟ್ಟು ಹಂಗಾಯ್ತು, ಹಿಂಗಾಯ್ತು ಎಂದು ತಲೆಕೆಡಿಸಿಕೊಳ್ಳಬಾರದು. ಒಬ್ಬ ವ್ಯಕ್ತಿ ಬಿಟ್ಟು ಹೋದ ಮಾತ್ರಕ್ಕೆ ಸೂಸೈಡ್ ಮಾಡಿಕೊಳ್ಳುವುದಲ್ಲ. ನೀವು ಹುಟ್ಟಿದ್ದೇಕೆ? ಏನು ಸಾಧನೆ ಮಾಡಬೇಕು ಅದು ಮಾಡಿ. ಮದುವೆ, ಸಂಸಾರ ಇಷ್ಟೇ ಜೀವನ ಅಲ್ಲ. ಸಂಸಾರ ಅಂದ್ರೆ ಹೊಂದಾಣಿಕೆʼ ಎಂದರು.
ʻಗಂಡ-ಹೆಂಡತಿ ಇಬ್ಬರೂ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಬೇರೆಯವರು ನಡುವೆ ಬರಬಾರದು. ಇದು ಹೇಳುವುದು ಸುಲಭ, ಅನುಸರಿಸುವುದು ಕಷ್ಟ. ಅದಕ್ಕೆ ಮೆಡಿಟೇಷನ್ ಮಾಡಿ ಅದರಿಂದ ಪ್ರಯೋಜನವಾಗುತ್ತದೆ ಎಂದಿದ್ದಾರೆ. ಹಳೇ ಕಾಲದಲ್ಲಿ ಮಕ್ಕಳು ಜಾಸ್ತಿ ಇರ್ತಿದ್ರು. ಒಬ್ಬಳು ಡಿವೋರ್ಸ್ ತಗೊಂಡು ಬಂದು ಮನೆಯಲ್ಲಿ ಕೂತ್ರೆ ಉಳಿದವರ ಮದುವೆ ಮಾಡುವುದು ಕಷ್ಟ ಅಂತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಹುಡುಗಿ ಕೂಡ ಹುಡುಗನ ರೀತಿ ದುಡಿಯುತ್ತಾಳೆ. ಇಬ್ಬರು ಮನೆಯ ಕೆಲಸಗಳನ್ನು ಹಂಚಿಕೊಳ್ಳಬೇಕು. ಬಹಳ ಸಣ್ಣ ವಿಷಯಕ್ಕೆ ಡಿವೋರ್ಸ್ ಆಗುತ್ತದೆʼ ಎಂದು ದೀಪಿಕಾ ವಿವರಿಸಿದ್ದಾರೆ.
ಇನ್ನು ದೀಪಿಕಾ ವೈಯಕ್ತಿಕ ಜೀವನದ ಬಗ್ಗೆ ಹೇಳೋದಾದರೆ ಲವ್ ಮ್ಯಾರೆಜ್ ಆಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಆಕರ್ಷ್ ಹಾಗೂ ದೀಪಿಕಾ ನಟಿಸಿದ್ದರು. ಆಗ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿ ಮದುವೆಯ ಬಂಧಕ್ಕೆ ಒಳಗಾಗಿದ್ದರು.
ಇದನ್ನೂ ಓದಿ: Ramayana Movie: ‘ರಾಮಾಯಣ’ ಚಿತ್ರದ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್!
ಇವರ ಮದುವೆಗೆ ಸ್ಯಾಂಡಲ್‌ವುಡ್‌ನ ಅನೇಕ ನಟ-ನಟಿಯರು ಆಗಮಿಸಿದ್ದರು.ಸಸ ನಟಿಯಾಗಿ ಮಾತ್ರವಲ್ಲದೇ ಧನ್ಯಾ ಈಗ ಮೇಕಪ್ ಆರ್ಟಿಸ್ಟ್ ಆಗಿ ಕೂಡ ಗುರ್ತಿಸಿಕೊಂಡಿದ್ದಾರೆ.