ರಾಜ್ ಬಿ ಶೆಟ್ಟಿ (Raj B Shetty) ಅವರು ಹಿಂದಿಯಲ್ಲಿ ನಟಿಸಿರುವ ಮೊದಲ ಸಿನಿಮಾದ ಟ್ರೈಲರ್ (Trailer) ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಬಾಬಿ ಡಿಯೋಲ್ , ಸನ್ಯಾ ಮಲ್ಹೋತ್ರಾ , ರಾಜ್ ಬಿ ಶೆಟ್ಟಿ, ಸಪ್ನಾ ಪಬ್ಬಿ, ಸಬಾ ಆಜಾದ್, ರಿದ್ಧಿ ಸೇನ್, ಜಿತೇಂದ್ರ ಜೋಶಿ, ಇಂದ್ರಜೀತ್ ಮತ್ತು ನಾಗೇಶ್ ಭೋಂಸ್ಲೆ ನಟಿಸಿರುವ 'ಬಂದರ್' (Bandar) ಈಗ ಸುದ್ದಿಯಲ್ಲಿದೆ. ಸಿನಿಮಾವನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ರಾಜ್ ಬಿ ಶೆಟ್ಟಿ ಪಾತ್ರ ಆದ್ರೂ ಏನು?
ರಾಜ್ ಬಿ ಶೆಟ್ಟಿ ಅವರು ಜೈಲಿನಲ್ಲಿ ಸಹ ಖೈದಿಯೊಬ್ಬನ ಜೊತೆಗೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ಸಣ್ಣ ತುಣುಕು ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: Vijay Deverakonda: ಫ್ಯಾನ್ಸ್ ತಂದಿದ್ದ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ವಿಜಯ್ ದೇವರಕೊಂಡ
ಅನುರಾಗ್ ಕಶ್ಯಪ್ ಈ ಹಿಂದೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಂದಾಗ ರಾಜ್ ಬಿ ಶೆಟ್ಟಿಯನ್ನು ಹಾಡಿ ಹೊಗಳಿದ್ದರು. ಸೆಲೆಬ್ರಿಟಿಯಾಗಿರುವ ಬಾಬಿ ಡಿಯೋಲ್ ಡೇಟಿಂಗ್ ಆಪ್‌ನಿಂದಾಗಿ ಜೈಲು ಸೇರುವ ಕತೆಯಿದು. ನೋಡುವುದಕ್ಕೆ ಡಾರ್ಕ್ ಹ್ಯೂಮರ್ ಶೈಲಿಯ ಸಿನಿಮಾ ಎನಿಸುತ್ತಿದ್ದು, ರಾಜ್ ಪಾತ್ರ ಕುತೂಹಲವನ್ನು ಕೆರಳಿಸಿದೆ.
ಇದು ಸಪ್ನಾ ಪಬ್ಬಿ, ಸನ್ಯಾ ಮಲ್ಹೋತ್ರಾ, ಮಲಯಾಳಂ ನಟ ಇಂದ್ರಜೀತ್ ಝಲಕ್‌ಗಳನ್ನು ಸಹ ಒಳಗೊಂಡಿದೆ.
'ಪಾತಾಲ್ ಲೋಕ್', 'ಕೊಹ್ರಾ' ಮತ್ತು 'ಉಡ್ತಾ ಪಂಜಾಬ್' ಚಿತ್ರಗಳಿಗೆ ಹೆಸರುವಾಸಿಯಾದ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಬರೆದ 'ಬಂದರ್' ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ.
ಈ ಚಿತ್ರವನ್ನು ನಿಖಿಲ್ ದ್ವಿವೇದಿ ಅವರು ಸ್ಯಾಫ್ರನ್ ಮ್ಯಾಜಿಕ್‌ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಜೀ ಸ್ಟುಡಿಯೋಸ್ ಜೊತೆ ನಿರ್ಮಿಸಿದ್ದಾರೆ ಮತ್ತು ಜೂನ್ 5, 2026 ರಂದು ವಿಶ್ವಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ಆಗಲಿದೆ. ರಾಜ್ ಬಿ ಶೆಟ್ಟಿ ಟ್ಯಾಲೆಂಟ್ ಕನ್ನಡ ಅಲ್ಲದೇ ಮಲಯಾಳಂ ಚಿತ್ರರಂಗಕ್ಕೂ ಗೊತ್ತಿದೆ.
ಇದನ್ನೂ ಓದಿ: Drishyam 3 trailer out: ದೃಶ್ಯಂ 3 ಟ್ರೈಲರ್ ಔಟ್! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?
ಹೀಗಾಗಿ ಈಗಾಗಲೇ ರಾಜ್ ಬಿ ಶೆಟ್ಟಿ ಮಲಯಾಳಂ ಸೂಪರ್‌ಸ್ಟಾರ್‌ಗಳ ಜೊತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಬಾಬಿ ಡಿಯೋಲ್ ಅವರಿಗೆ ಈ ಸಿನಿಮಾ ಮೂಲಕ ಮತ್ತೊಂದು ಸಕ್ಸಸ್ ಸಿಗುವ ನಿರೀಕ್ಷೆ ಇದೆ.