ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ರಕ್ಕಸಪುರದೋಳ್' ಟ್ರೇಲರ್ ನೋಡಿ ಸಲ್ಮಾನ್ ಖಾನ್ ಫಿದಾ; ಬಾಲಿವುಡ್‌ಗೆ ಹೋಗಲಿದೆಯಾ ರಾಜ್ ಬಿ ಶೆಟ್ಟಿ ಸಿನಿಮಾ? ಚಿತ್ರತಂಡಕ್ಕೆ ʻಭಾಯ್‌ಜಾನ್‌ʼ ಹೇಳಿದ್ದೇನು?

ರಾಜ್‌ ಬಿ ಶೆಟ್ಟಿ ಅವರ ರಕ್ಕಸಪುರದೋಳ್‌ ಸಿನಿಮಾವು ನಟ ಸಲ್ಮಾನ್ ಖಾನ್ ಅವರ ಗಮನ ಸೆಳೆದಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ಮಾಣದ ಮೊದಲ ಚಿತ್ರ ಇದಾಗಿದ್ದು, ಅದರ ಟ್ರೇಲರ್ ವೀಕ್ಷಿಸಿದ ಸಲ್ಮಾನ್ ಖಾನ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರವಿವರ್ಮಗೆ ಒಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.

Raj B Shetty: ʻರಕ್ಕಸಪುರದೋಳ್ʼ‌ ಟ್ರೇಲರ್‌ ನೋಡಿ ಸಲ್ಮಾನ್‌ ಏನಂದ್ರು?

-

Avinash GR
Avinash GR Feb 15, 2026 11:19 AM

ರಾಜ್‌ ಬಿ. ಶೆಟ್ಟಿ ಅಭಿನಯದ ʻರಕ್ಕಸಪುರದೋಳ್ʼ‌ ಸಿನಿಮಾವು ಫೆ.6ರಂದು ತೆರೆಕಂಡು ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ರವಿ ಸಾರಂಗ ಮೊದಲ ಬಾರಿಗೆ ನಿರ್ದೇಶಿಸಿರುವ, ಸಾಹಸ ನಿರ್ದೇಶಕ ರವಿವರ್ಮ ಅವರು ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಇದೀಗ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಮೆಚ್ಚಿಕೊಂಡಿದ್ದಾರೆ. ಟ್ರೇಲರ್‌ ನೋಡಿ ಖುಷಿಯಾದ ಅವರು, ನಿರ್ಮಾಪಕ ರವಿವರ್ಮ ಬಳಿ ಒಂದು ಬೇಡಿಕೆಯನ್ನು ಕೂಡ ಇಟ್ಟಿದ್ದಾರೆ. ಏನದು? ಮುಂದೆ ಓದಿ.

ಹಿಂದಿಯಲ್ಲಿ ಬರಲಿದೆ ರಕ್ಕಸಪುರದೋಳ್

ನಟ ಸಲ್ಮಾನ್‌ ಖಾನ್‌ ಅವರು ಟ್ರೇಲರ್‌ ನೋಡಿ ಖುಷಿಪಟ್ಟಿದ್ದಲ್ಲದೇ, "ಈ ಚಿತ್ರದ ಹಿಂದಿ ವರ್ಷನ್‌ ಅನ್ನು ನನಗೆ ಯಾವಾಗ ತೋರಿಸುವೆ" ಎಂದು ರವಿವರ್ಮ ಬಳಿ ಕೇಳಿದ್ದಾರೆ. ಸದ್ಯ ರಾಜ್ಯಾದ್ಯಂತ ಎರಡನೇ ವಾರ ಪ್ರದರ್ಶನ ಕಾಣುತ್ತಿರುವ ರಕ್ಕಸಪುರದೋಳ್‌ ಚಿತ್ರಕ್ಕೆ ಸಲ್ಮಾನ್‌ ಖಾನ್‌ ಅವರ ಈ ಬೆಂಬಲ ದೊಡ್ಡ ಬೂಸ್ಟ್‌ ನೀಡಿದಂತೆ ಆಗಿದೆ.

Rakkasapuradhol Official Trailer: ಮಾಸ್ ಪೊಲೀಸ್ ಅಧಿಕಾರಿಯಾಗಿ ಬಂದ್ರು ರಾಜ್ ಬಿ ಶೆಟ್ರು ! ಹೇಗಿದೆ ರಕ್ಕಸಪುರದೋಳ್ ಟ್ರೈಲರ್‌?

ದೊಡ್ಡ ನಂಟು ಹೊಂದಿರುವ ರವಿವರ್ಮ

ರವಿವರ್ಮ ಈಗ ಭಾರತದ ಟಾಪ್‌ ಸಾಹಸ ನಿರ್ದೇಶಕರಲ್ಲಿ ಒಬ್ಬರು. ತೆಲುಗು, ಹಿಂದಿ, ತಮಿಳು ಅಂತ ವಿವಿಧ ಭಾಷೆಗಳಲ್ಲಿ ರವಿವರ್ಮ ಬ್ಯುಸಿ ಆಗಿದ್ದಾರೆ. ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಅಜಯ್‌ ದೇವ್‌ಗನ್‌, ರಾಮ್‌ ಚರಣ್‌, ಅಲ್ಲು ಅರ್ಜುನ್‌, ರವಿ ತೇಜ, ಸನ್ನಿ ಡಿಯೋಲ್‌, ನಾನಿ ಮುಂತಾದ ಅನೇಕ ಬಿಗ್‌ ಸ್ಟಾರ್‌ಗಳ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ರವಿವರ್ಮ ಕೆಲಸ ಮಾಡಿದ್ದಾರೆ. ಅವರಿಗೆ ಪರಭಾಷೆಯ ಬಹುತೇಕ‌ ಸ್ಟಾರ್ ಕಲಾವಿದರ ಜೊತೆ ನಂಟು ಇದೆ. ಸಲ್ಮಾನ್‌ ಖಾನ್‌ ಅವರ ಜೈ ಹೋ ಸೇರಿದಂತೆ ಅನೇಕ ಸಿನಿಮಾಗಳಿಗೆ ರವಿವರ್ಮ ಕೆಲಸ ಮಾಡಿದ್ದಾರೆ. ಇದೀಗ ರವಿವರ್ಮ ನಿರ್ಮಾಣದ ಮೊದಲ ಪ್ರಯತ್ನಕ್ಕೆ ಸಲ್ಮಾನ್‌ ಖಾನ್‌ ಕೈ ಜೋಡಿಸಿದ್ದಾರೆ.

Raj B Shetty: ರಾಜ್ ಬಿ ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಔಟ್‌! ರಿಲೀಸ್‌ ಡೇಟ್‌ ಕೂಡ ಅನೌನ್ಸ್‌

ರಕ್ಕಸಪುರದೋಳ್‌ ಬಗ್ಗೆ..

ರವಿ ಸಾರಂಗ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ವಾತಿಷ್ಟ ಕೃಷ್ಣನ್‌, ಅರ್ಚನಾ ಕೊಟ್ಟಿಗೆ, ಬಿ. ಸುರೇಶ, ಜಹಾಂಗೀರ್‌, ಗೌರವ್‌ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಎಂದರೆ, ಅನಿರುದ್ಧ್‌ ಭಟ್‌ ಇಲ್ಲಿ ಖಳ ಪಾತ್ರ ಮಾಡಿದ್ದು, ಸಿನಿಮಾ ವೀಕ್ಷಿಸಿದ ಎಲ್ಲರಿಗೂ ಅವರ ನಟನೆ ಬಹಳ ಇಷ್ಟವಾಗಿದೆ.