Trivikram BBK 11: ಎಲ್ಲಾ ಗೊತ್ತಿದ್ರೂ ಬಿಗ್ ಬಾಸ್ ಮನೆಯಲ್ಲಿ ಏನೂ ಗೊತ್ತಿಲ್ಲದಂತಿದ್ದ ತ್ರಿವಿಕ್ರಮ್-ಅನುಷಾ ರೈ
ಕಳೆದ ಕೆಲವು ದಿನಗಳಿಂದ ತ್ರಿವಿಕ್ರಮ್, ಭವ್ಯಾ ಗೌಡ, ಅನುಷಾ ರೈ ಹಾಗೂ ರಜತ್ ಕಿಶನ್ ರೋಡ್ ಟ್ರಿಪ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಇವರು ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಿದ್ದರು. ಇದೀಗ ತ್ರಿವಿಕ್ರಮ್ ಅವರು ಭವ್ಯಾ ಹಾಗೂ ಅನುಷಾ ಅವರನ್ನು ಕರೆದುಕೊಂಡು ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿಗೆ ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಕಾರ್ಯಕ್ರಮ ಮುಗಿದು ಒಂದು ವಾರ ಕಳೆದರೂ ಅಭಿಮಾನಿಗಳು ಇದರ ಗುಂಗಿನಿಂದ ಹೊರಬಂದಿಲ್ಲ. ಸೀಸನ್ 11 ಫಿನಾಲೆ ಸ್ಪರ್ಧಿಗಳಂತು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿ ಹೊರಬಂದಿದ್ದಾರೆ. ಇವರು ಎಲ್ಲೇ ಹೋದರು.. ಎಲ್ಲೇ ಕಾಣಿಸಿಕೊಂಡರೂ ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ಅದರಂತೆ ಕಂಟೆಸ್ಟೆಂಟ್ಗಳು ಕೂಡ ಅಭಿಮಾನಿಗಳಿಗೆ ನಿರಾಸೆ ಮಾಡದೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹನುಮಂತ ಅವರು ತಮ್ಮ ಹುಟ್ಟೂರಿನಲ್ಲಿ ಅಭಿಮಾನಿಗಳ ಜೊತೆ ಭರ್ಜರಿ ಆಗಿ ರೋಡ್ ಶೋ ಮಾಡಿದ್ದು ಗೊತ್ತೇ ಇದೆ. ಇದೀಗ ಬಿಬಿಕೆ 11ನ ರನ್ನರ್-ಅಪ್ ತ್ರಿವಿಕ್ರಮ್ ಕೂಡ ತಮ್ಮ ಹುಟ್ಟೂರಿನಲ್ಲಿ ರೋಡ್ ಶೋ ಮಾಡಿದ್ದಾರೆ. ಇದರ ಜೊತೆಗೆ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ತ್ರಿವಿಕ್ರಮ್, ಭವ್ಯಾ ಗೌಡ, ಅನುಷಾ ರೈ ಹಾಗೂ ರಜತ್ ಕಿಶನ್ ರೋಡ್ ಟ್ರಿಪ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಇವರು ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಿದ್ದರು. ಇದೀಗ ತ್ರಿವಿಕ್ರಮ್ ಅವರು ಭವ್ಯಾ ಹಾಗೂ ಅನುಷಾ ಅವರನ್ನು ಕರೆದುಕೊಂಡು ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿಗೆ ಬಂದಿದ್ದಾರೆ. ಇಲ್ಲಿ ಈ ಮೂವರು ಅಭಿಮಾನಿಗಳ ಜೊತೆಗೆ ಸಖತ್ ಎಂಜಾಯ್ ಮಾಡಿದ್ದಾರೆ. ಇದರ ಮಧ್ಯೆ ಅನುಷಾ ರೈ ಇದುವರೆಗೆ ಯಾರಿಗೂ ತಿಳಿಯದಿರುವ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.
ಅನುಷಾ ರೈ, ಭವ್ಯಾ, ತ್ರಿವಿಕ್ರಮ್ ತುಮಕೂರಿಗೆ ಟ್ರಿಪ್ ಹೊರಟಾಗಿನಿಂದ ಕಾರಿನಲ್ಲಿ ಎಂಜಾಯ್ ಮಾಡಿಕೊಂಡು ಹೋಗಿದ್ದಾರೆ. ಈ ವಿಡಿಯೋವನ್ನು ಅನುಷಾ ರೈ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಜರ್ನಿ ಸಮಯದಲ್ಲಿ ಅನುಷಾ ರೈ ಹೊಸ ವಿಚಾರವೊಂದನ್ನ ತಿಳಿಸಿದ್ದಾರೆ. ಅನುಷಾ ರೈ ತುಮಕೂರಿನ ಗುಬ್ಬಿಯವರು ಎಂಬುದು ಎಲ್ಲರಿಗೂ ಗೊತ್ತಿತ್ತು. ಬಿಗ್ ಬಾಸ್‌ನಿಂದ ಔಟ್ ಆದಾಗಲೂ ವೇದಿಕೆ ಮೇಲೆ ಹೇಳಿದ್ದರು. ಆದರೆ, ತ್ರಿವಿಕ್ರಮ್ ಕೂಡ ತುಮಕೂರಿನ ಗುಬ್ಬಿಯವರೇ ಎಂಬುದು ಅನೇಕರಿಗೆ ಈಗಷ್ಟೆ ತಿಳಿದಿದೆ. ಇದನ್ನು ಸ್ವತಃ ಅನುಷಾ ರೈ ರಿವೀಲ್ ಮಾಡಿದ್ದಾರೆ.
ತ್ರಿವಿಕ್ರಮ್ ಹಾಗೂ ಅನುಷಾ ರೈ ಅವರು ಒಂದೇ ಊರಿನವರಾಗಿದ್ದಾರೆ. ಅಂದರೆ ತ್ರಿವಿಕ್ರಮ್ ಹಾಗೂ ಅನುಷಾ ರೈ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಇಷ್ಟೇ ಅಲ್ಲ ಇವರಿಬ್ಬರು ಒಂದೇ ಶಾಲೆ ಹಾಗೂ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರಂತೆ. ಅಷ್ಟೇ ಅಲ್ಲ ತ್ರಿವಿಕ್ರಮ್ ಸೀನಿಯರ್ ಆಗಿದ್ದು, ಅನುಷಾ ರೈ ಜೂನಿಯರ್ ಆಗಿದ್ದರಂತೆ. ಈ ಬಗ್ಗೆ ಖುದ್ದು ಅನುಷಾ ರೈ ಅವರೇ ತಮ್ಮ ಯ್ಯೂಟೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದು, ಇಷ್ಟೆಲ್ಲ ಗೊತ್ತಿದ್ರೂ ಬಿಗ್ ಬಾಸ್ ಮನೆಯಲ್ಲಿ ಏನೂ ಗೊತ್ತಿಲ್ಲದಂತೆ ಇದ್ರಲ್ಲ ಎಂದು ಹೇಳುತ್ತಿದ್ದಾರೆ.
Chaithra Kundapura: ಗೋಲ್ಡ್ ಸುರೇಶ್ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಚೈತ್ರಾ ಕುಂದಾಪುರ