Chaithra Kundapura: ಗೋಲ್ಡ್ ಸುರೇಶ್ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಚೈತ್ರಾ ಕುಂದಾಪುರ
ಕಾಲು ನೋವು ಹೆಚ್ಚಾಗಿದ್ದರಿಂದ ಸುರೇಶ್ ಅವರಿಗೆ ಸರ್ಜರಿ ಅಗತ್ಯ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಡಾಕ್ಟರ್ ಸಲಹೆ ಮೇರೆಗೆ ಗೋಲ್ಡ್ ಸುರೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ. ಇದೀಗ ಸುರೇಸ್ ಅವರನ್ನು ನೋಡಲು ಆಸ್ಪತ್ರೆಗೆ ಚೈತ್ರಾ ಕುಂದಾಪುರ ಬಂದಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಸದ್ದಿಲ್ಲದೆ ಒಳಗೆ ಹೋದ ಗೋಲ್ಡ್ ಸುರೇಸ್ ಹೊರಬರುವ ಹೊತ್ತಿಗೆ ಫುಲ್ ಫೇಮಸ್ ಆಗಿ ಬಿಟ್ಟರು. ದೊಡ್ಮನೆಯೊಳಗೆ ಹೋಗುವ ಮುನ್ನ ಇವರ ಪರಿಚಯ ಕೆಲವೇ ಕೆಲವು ಮಂದಿಗಿತ್ತಷ್ಟೆ. ಆದರೆ, ಹೊರಹೋಗುವ ಹೊತ್ತಿಗೆ ಇಡೀ ಕರ್ನಾಟಕದಲ್ಲಿ ಫೇಮಸ್ ಆಗಿಬಿಟ್ಟರು. ಆದರೆ, ಬಿಗ್ ಬಾಸ್ನಲ್ಲಿ ಇವರು ಎಲಿಮಿನೇಟ್ ಆಗಿ ಆಚೆ ಬಂದವರಲ್ಲ. ವೈಯಕ್ತಿಕ ಕಾರಣದಿಂದ ಅರ್ಧಕ್ಕೆ ಬಿಗ್ ಬಾಸ್ ಜರ್ನಿಯನ್ನು ನಿಲ್ಲಿಸಿ ಹೊರಬಂದರು.
ನನ್ನನ್ನೇ ನಂಬಿ ಹಲವು ಕುಟುಂಬಗಳಿವೆ, ನಾನು ಬಿಗ್ ಬಾಸ್ ಮನೆಗೆ ಹೋದ ನಂತರ ನನ್ನ ಪತ್ನಿ ಒತ್ತಡಕ್ಕೊಳಗಾದರು, ಬಿಜಿನೆಸ್ ಮ್ಯಾನೇಜ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ, ಹೀಗಾಗಿ ಅನಿವಾರ್ಯವಾಗಿ ನಾನು ಮನೆಯಿಂದ ಹೊರ ಬರಬೇಕಾಯ್ತು ಎಂದು ಹೇಳಿದ್ದರು. ಇದರ ಜೊತೆಗೆ ಇವರ ಕಾಲಿಗೆ ಕೂಡ ಪೆಟ್ಟಾಗಿತ್ತು. ಟಾಸ್ಕ್ ಆಡುವ ಸಂದರ್ಭ ಇಂಜುರಿ ಮಾಡಿಕೊಂಡಿದ್ದರು.
ಇದರ ಪರಿಣಾಮ ಗೋಲ್ಡ್ ಸುರೇಶ್ ಈಗ ಆಸ್ಪತ್ರೆಯಲ್ಲಿದ್ದಾರೆ. ಕಾಲು ನೋವು ಹೆಚ್ಚಾಗಿದ್ದರಿಂದ ಸುರೇಶ್ ಅವರಿಗೆ ಸರ್ಜರಿ ಅಗತ್ಯ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಡಾಕ್ಟರ್ ಸಲಹೆ ಮೇರೆಗೆ ಗೋಲ್ಡ್ ಸುರೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ. ಎರಡು ದಿನಗಳ ಬಳಿಕ ಅವರು ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ನಿರೀಕ್ಷೆ ಇದೆ. ಬಳಿಕ ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ.
ಇದೀಗ ಸುರೇಸ್ ಅವರನ್ನು ನೋಡಲು ಆಸ್ಪತ್ರೆಗೆ ಚೈತ್ರಾ ಕುಂದಾಪುರ ಬಂದಿದ್ದಾರೆ. ಸುರೇಶ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ಚೈತ್ರ, ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಅವರ ತಲೆ ಸವರಿ ಧೈರ್ಯ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಆಸ್ಪತ್ರೆ ಬೆಡ್ ನಲ್ಲಿ ಮಲಗಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ಈಗ ಚೈತ್ರ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಷ್ಟು ದಿನ ಗೋಲ್ಡ್ ಸುರೇಶ್ ಅವರು ನೀ ಕ್ಯಾಪ್ ಹಾಕೊಂಡು ಓಡಾಡುತ್ತಾ ಇದ್ದರು. ಜಾಸ್ತಿ ದಿನಗಳು ಹೀಗೆ ಮುಂದುವರಿದರೆ ತೊಂದರೆಯಾಗಬಹುದು ಎಂದು ವೈದ್ಯರು ಸೂಚಿಸಿದ್ದರು. ಹೀಗಾಗಿ ಸುರೇಶ್ ಅವರ ಮೊಣಕಾಲಿನ ಆಪರೇಷನ್ ನಡೆದಿದೆ. ವೈದ್ಯರು ಇನ್ನು 2-3 ದಿನದಲ್ಲಿ ಗೋಲ್ಡ್ ಸುರೇಶ್ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.
Bhavya Gowda: ಅನುಪಮಾ ಗೌಡ ನಿರೂಪಣೆಯ Boys Vs Girls ಶೋನಿಂದ ಭವ್ಯಾ ಗೌಡ ಹೊರನಡೆದಿದ್ದೇಕೆ?: ಅಸಲಿ ಕಾರಣ ಏನು?