ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhavya Gowda, BBK 11: ಭವ್ಯಾ ಗೌಡಾಗೆ ಭರ್ಜರಿ ವೆಲ್ಕಮ್ ಮಾಡಿದ ಅಕ್ಕ-ತಂಗಿ: ವಿಡಿಯೋ ನೋಡಿ

ಬಿಗ್ ಬಾಸ್ 11 ಫಿನಾಲೆ ಸ್ಪರ್ಧಿಯಾಗಿದ್ದ ಭವ್ಯಾ ಐದನೇ ರನ್ನರ್ ಅಪ್ ಆಗಿ ಮೊದಲಿಗೆ ದೊಡ್ಮನೆಯಿಂದ ಹೊರಬಂದರು. ಇದೀಗ ಬಿಗ್ ಬಾಸ್ನಿಂದ ಆಚೆ ಬರುತ್ತಿದ್ದಂತೆ ಭವ್ಯಾ ಗೌಡಗೆ ಅಕ್ಕ ಹಾಗೂ ತಂಗಿ ಗ್ರ್ಯಾಂಡ್ ಆಗಿ ಮನೆಗೆ ಬರಮಾಡಿಕೊಂಡಿದ್ದಾರೆ. ಭವ್ಯಾ ಗೌಡ ಕೇಕ್ ಕಟ್ ಮಾಡುವ ಮೂಲಕ ಕುಟುಂಬದ ಜೊತೆ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಭವ್ಯಾ ಗೌಡಾಗೆ ಭರ್ಜರಿ ವೆಲ್ಕಮ್ ಮಾಡಿದ ಅಕ್ಕ-ತಂಗಿ: ವಿಡಿಯೋ ನೋಡಿ

Bhavya Gowda Family

Profile Vinay Bhat Jan 30, 2025 9:07 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡಿದ್ದು, ಹಳ್ಳಿ- ಹೈದ ಹನುಮಂತ ಟ್ರೋಫಿ ಎತ್ತಿ ಹಿಡಿದರೆ ತ್ರಿವಿಕ್ರಮ್ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಸದ್ಯ ಟಾಪ್ 6 ಫೈನಲಿಸ್ಟ್​ಗಳು ದೊಡ್ಮನೆಯಿಂದ ಹೊರಬಂದು ಫುಲ್ ಬ್ಯುಸಿಯಾಗಿದ್ದಾರೆ. ಕೆಲವರು ಇಂಟರ್​ವ್ಯೂ ಕೊಡುತ್ತಿದ್ದರೆ ಇನ್ನೂ ಕೆಲವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಬಿಗ್ ಬಾಸ್​ನಿಂದ ಹೊರಬಂದವರಿಗೆ ಅವರ ಮನೆಯವರು ಅದ್ಧೂರಿ ಸ್ವಾಗತ ಮಾಡುತ್ತಿದ್ದಾರೆ. ಇದೀಗ ಭವ್ಯಾ ಗೌಡಾಗೆ ಕೂಡ ಅವರ ಮನೆಯವರು ಭರ್ಜರಿ ವೆಲ್​ಕಪ್ ಮಾಡಿದ್ದಾರೆ.

ಬಿಗ್ ಬಾಸ್ 11 ಫಿನಾಲೆ ಸ್ಪರ್ಧಿಯಾಗಿದ್ದ ಭವ್ಯಾ ಐದನೇ ರನ್ನರ್ ಅಪ್ ಆಗಿ ಮೊದಲಿಗೆ ದೊಡ್ಮನೆಯಿಂದ ಹೊರಬಂದರು. ಈ ಬಾರಿಯ ಸೀಸನ್​ನಲ್ಲಿ ಮಹಿಳಾ ಸ್ಪರ್ಧಿ ಟ್ರೋಫಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದರಲ್ಲಿ ಭವ್ಯಾ ಗೌಡ ಹೆಸರು ಮುಂಚೂಣಿಯಲ್ಲೇ ಇತ್ತು. ಇವರು ಬಿಗ್ ಬಾಸ್ ಇತಿಹಾಸದಲ್ಲೇ ಮೂರು ಬಾರಿ ಕ್ಯಾಪ್ಟನ್ ಆದ ದಾಖಲೆ ಕೂಡ ಬರೆದಿದ್ದರು. ಆದರೆ, ಐದನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡು ಹೊರಬಂದರು.

ಇದೀಗ ಬಿಗ್ ​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಭವ್ಯಾ ಗೌಡಗೆ ಅಕ್ಕ ಹಾಗೂ ತಂಗಿ ಗ್ರ್ಯಾಂಡ್​ ಆಗಿ ಮನೆಗೆ ಬರಮಾಡಿಕೊಂಡಿದ್ದಾರೆ. ಭವ್ಯಾ ಗೌಡ ಕೇಕ್ ಕಟ್​ ಮಾಡುವ ಮೂಲಕ ಕುಟುಂಬದ ಜೊತೆ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಕೇಕ್​ ಮೇಲೆ ನಮ್ಮ ಕ್ಯಾಪ್ಟನ್​ ಅಂತ ಬರೆಯಲಾಗಿದೆ. ಇದೇ ವಿಡಿಯೋವನ್ನು ಭವ್ಯಾ ಗೌಡ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋದ ಜೊತೆಗೆ, ‘ನಿಜಕ್ಕೂ ವಿಶೇಷವಾಗಿತ್ತು. ಈ ನಿಮ್ಮ ಅಕ್ಕರೆ ಮತ್ತು ಪ್ರೀತಿಗೆ ನಾನು ಸದಾ ಚಿರಋಣಿ. ನನ್ನ ಸಹೋದರಿಯರಿಗೆ ನಾನು ಯಾವಾಗಲೂ ಅಬಾರಿಯಾಗಿದ್ದೇನೆ. ನನ್ನ ಕುಟುಂಬದಂತೆ ಸಹಕರಿಸಿದ ಎಲ್ಲಾ ಪ್ರೀತಿಯ ಬಂಧು-ಮಿತ್ರರಿಗೆ, ನಿರಂತರವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನ ಈ ಹಾದಿಯಲ್ಲಿ ನಿಮ್ಮೆಲ್ಲರ ಕೊಡುಗೆ ಬಹಳಷ್ಟಿದೆ’ ಎಂದು ಬರೆದುಕೊಂಡಿದ್ದಾರೆ.

5ನೇ ರನ್ನರ್ ಅಪ್ ಆಗಿ ಬಿಗ್ ಬಾಸ್​ನಿಂದ ಹೊರಬಂದ ಭವ್ಯಾ ಗೌಡ ಅವರಿಗೆ ಕಾರ್ಯಕ್ರಮದ ಜಾಹೀರಾತು ಸಂಸ್ಥೆಗಳಿಂದ ಒಟ್ಟು 3.5 ಲಕ್ಷ ರೂ. ಮೌಲ್ಯದ ಬಹುಮಾನ ಸಿಕ್ಕಿದೆ. ಇದರಲ್ಲಿ ಶ್ರೀಕೃಷ್ಣ ಹಳ್ಳಿ ತುಪ್ಪ ಸಂಸ್ಥೆಯಿಂದ ಕಡೆಯಿಂದ 2 ಲಕ್ಷ ರೂ. ನಗದು, ಸುದರ್ಶನ್ ಸಿಲ್ಕ್ಸ್ ಮಳಿಗೆಯಿಂದ 1 ಲಕ್ಷ ರೂ. ನಗದು, ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆಯಿಂದ 50 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗಿದೆ. ಈ ಹಣದ ಜೊತೆ 117 ದಿನ ಬಿಗ್ ಬಾಸ್​ ಮನೆಯಲ್ಲಿ ಕಳೆದಿರುವುದಕ್ಕೆ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದುಕೊಳ್ಳಲಿದ್ದಾರೆ.

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್