ʻಬಿಗ್ ಬಾಸ್ʼ ಮನೆಯಲ್ಲಿ ಗಿಲ್ಲಿ ನಟ ಅವರು ಮಾಡಿದ ಒಂದು ಕೆಲಸ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಗಿಲ್ಲಿ ನಟ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ. ತದನಂತರ ಮಹಿಳಾ ಆಯೋಗವು ಈ ಸಂಬಂಧ ಪೊಲೀಸರಿಗೆ ಪತ್ರ ಬರೆದಿದೆ.
ಆಯೋಗ ಬರೆದ ಪತ್ರದಲ್ಲಿ ಏನಿದೆ?
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಶ್ರೀಮತಿ ಎಚ್ ಸಿ ಕುಶಲ, ಕುಶಲ ಕಲಾವೃಂದ (ರಿ), ನಂ.09, 33ನೇ ಮುಖ್ಯರಸ್ತೆ, ಬನಶಂಕರಿ ವಾರ್ತೆ, ಇಂಚರ ಹೋಟೆಲ್ ಹಿಂಭಾಗ, ಅಬ್ಬಯ್ಯರೆಡ್ಡಿ ಲೇಔಟ್, ಅಷ್ಟಲಕ್ಷ್ಮೀ ಲೇಔಟ್, ಜೆ.ಪಿ ನಗರ, 6ನೇ ಹಂತ, ಬೆಂಗಳೂರು, ಇವರು ಆಯೋಗದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯಲ್ಲಿ ಕಲರ್ಸ್ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ಎಂಬ ಹಾಸ್ಯ ನಟನು ರಿಷಾ ಗೌಡ ಎಂಬ ಹೆಣ್ಣು ಮಗಳ ಉಡುಪನ್ನು ಬಾತ್‌ರೂಮಿನಿಂದ ತಂದು ಹೊರ ಹಾಕಿರುವುದಾಗಿ ತಿಳಿಸಿರುತ್ತಾರೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
BBK 12: ಗಿಲ್ಲಿ ನಟ ಹೇಳೋ ಮಾತಿಂದ ಅಶ್ವಿನಿ ಗೌಡಗೆ ನೋವಾಯ್ತು; ಕಣ್ಣೀರಿಟ್ಟ ರಾಜಮಾತೆಗೆ ಸಾಂತ್ವನ ಮಾಡಿದ್ಯಾರು?
ಆಯೋಗಕ್ಕೆ ವರದಿ ಕೊಡಿ
"ಹೆಣ್ಣು ಮಕ್ಕಳ ಉಡುಪನ್ನು ಮುಟ್ಟುವ ಅಧಿಕಾರ ಅವರಿಗೆ ಯಾರು ಅಧಿಕಾರ ನೀಡಿರುವುದಾಗಿ ಇದರಿಂದ ಸಮಾಜಕ್ಕೆ ಯಾವ ರೀತಿ ಸಂದೇಶವನ್ನು ಪ್ರಸಾರ ಮಾಡಲು ಹೊರಟಿರುವುದಾಗಿ ತಿಳಿಸುತ್ತಾ, ಕಲರ್ಸ್ ಶೋವನ್ನು ನಿಲ್ಲಿಸಬೇಕೆಂದು ಆಯೋಗದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿರುತ್ತಾರೆ. ಆದ್ದರಿಂದ ಅರ್ಜಿದಾರರ ಅರ್ಜಿಯಲ್ಲಿನ ವಿಷಯದ ಕುರಿತು ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಅತೀ ಜರೂರಾಗಿ ಆಯೋಗಕ್ಕೆ ಕಳುಹಿಸಿ ಕೊಡುವಂತೆ ಕೋರಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
Bigg Boss Kannada 12: ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?
ಪೊಲೀಸ್ ಇಲಾಖೆಗೆ ಪತ್ರ ಬರೆದ ಮಹಿಳಾ ಆಯೋಗ
ಗಿಲ್ಲಿ ಮಾಡಿದ ಮಿಸ್ಟೇಕ್ ಏನು?
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ರಿಷಾ ಗೌಡ ಮತ್ತು ಗಿಲ್ಲಿ ನಟನ ನಡುವೆ ಬಕೆಟ್ ವಿಚಾರಕ್ಕೆ ಜಗಳವಾಗಿತ್ತು. ಗಿಲ್ಲಿ ಎಷ್ಟೇ ಬೇಡಿಕೊಂಡರೂ ರಿಷಾ ಬಕೆಟ್ ಕೊಟ್ಟಿರಲಿಲ್ಲ. ಆಗ ಕೆರಳಿದ ಗಿಲ್ಲಿ, ರಿಷಾ ಗೌಡ ಅವರ ಬಟ್ಟೆಗಳನ್ನು ಬಾತ್ ರೂಮ್ ಏರಿಯಾದಲ್ಲಿ ತಂದುಹಾಕಿದ್ದರು. ಇದನ್ನು ಕಂಡ ರಿಷಾ ರೊಚ್ಚಿಗೆದ್ದು ಕೂಗಾಡಿ, ಗಿಲ್ಲಿಗೆ ಹೊಡೆದಿದ್ದರು.
ಬಳಿಕ ಕಿಚ್ಚ ಸುದೀಪ್ ಕೂಡ ಗಿಲ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದರು. "ರಿಷಾ ಎಷ್ಟು ತಪ್ಪು ಮಾಡಿದ್ರೋ ಅಷ್ಟೇ ತಪ್ಪು ಗಿಲ್ಲಿಯದ್ದೂ ಆಗಿದೆ. ಹೆಣ್ಣು ಮಕ್ಕಳಿಗೆ ಅವರದ್ದೇ ಆದ ಪ್ರೈವಸಿ ಇರುತ್ತದೆ. ನಾವು ಕೂಡ ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳ ಬಟ್ಟೆಗಳನ್ನು ಮುಟ್ಟುವುದಿಲ್ಲ. ಆ ಅಧಿಕಾರ ನಮಗಿಲ್ಲ" ಎಂದಿದ್ದರು. ಆದರೆ ಇದೀಗ ಇದೇ ವಿಚಾರ ಮಹಿಳಾ ಆಯೋಗಕ್ಕೆ ತಲುಪಿದೆ.