ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?

BBK 12: ಈ ಹಿಂದೆ ಬಿಗ್‌ ಬಾಸ್‌ ಮನೆಯಲ್ಲಿ ರಿಷಾ ಹಾಗೂ ಗಿಲ್ಲಿ ನಡುವೆ ಬಕೆಟ್‌ ವಿಚಾರಕ್ಕೆ ಜಗಳ ತಾರಕ್ಕೇರಿತ್ತು. ಮೊದಲಿಗೆ ಬಕೆಟ್‌ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದರು. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್‌ ರೂಮ್‌ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ. ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆಯುತ್ತಾರೆ. ಬಟ್ಟೆ ತಂದು ಬಾತ್‌ ರೂಮ್‌ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದರು. ರಿಷಾ ಬಟ್ಟೆಗಳನ್ನು ಬಾತ್‌ರೂಮ್‌ನಲ್ಲಿ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ, ದೂರು ದಾಖಲಾಗಿದೆ.

ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 17, 2025 6:21 PM

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಸಖತ್‌ ಆಕ್ಟಿವ್‌, ತಮಾಷೆ ಮಾಡುವ, ಹೈಲೈಟ್‌ ಆಗುವ ಸ್ಪರ್ಧಿ ಎಂದರೆ ಅದುವೇ ಗಿಲ್ಲಿ ನಟ (Gilli Nata). ಆದರೀಗ ನಟನ ವಿರುದ್ಧ ದೂರು ದಾಖಲಾಗಿದೆ. ರಿಷಾ (Risha) ಬಟ್ಟೆಗಳನ್ನು ಬಾತ್‌ರೂಮ್‌ನಲ್ಲಿ (Bathroom) ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ, ದೂರು ದಾಖಲಾಗಿದೆ. ಏನಿದು ಪ್ರಕರಣ?

ಏನಿದು ಪ್ರಕರಣ?

ಈ ಹಿಂದೆ ಬಿಗ್‌ ಬಾಸ್‌ ಮನೆಯಲ್ಲಿ ರಿಷಾ ಹಾಗೂ ಗಿಲ್ಲಿ ನಡುವೆ ಬಕೆಟ್‌ ವಿಚಾರಕ್ಕೆ ಜಗಳ ತಾರಕ್ಕೇರಿತ್ತು. ಮೊದಲಿಗೆ ಬಕೆಟ್‌ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದರು. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್‌ ರೂಮ್‌ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ.

ಇದನ್ನೂ ಓದಿ: Bigg Boss Kannada 12: ಬಿಗ್​ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಔಟ್‌; ʻಸೂಪರ್‌ ಪವರ್‌ʼ ಸುಧಿಯ ಜರ್ನಿ ಹೇಗಿತ್ತು?

ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆಯುತ್ತಾರೆ. ಬಟ್ಟೆ ತಂದು ಬಾತ್‌ ರೂಮ್‌ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದರು.

ಮಹಿಳಾ ಆಯೋಗಕ್ಕೆ ದೂರು

ಆದರೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ಹೋಗಿದೆ ಎನ್ನಲಾಗಿದೆ. ಮಹಿಳಾ ಆಯೋಗ ವಿಡಿಯೋವನ್ನು ಸಂಪೂರ್ಣ ವೀಕ್ಷಣೆ ಮಾಡಿದೆ. ಅದರಲ್ಲಿ ಯಾವುದೇ ಸಾಕ್ಷ್ಯ ಸಿಗದ ಕಾರಣ ಲೀಗಲ್ ಸೆಲ್‌‌ಗೆ ಈ ದೂರನ್ನು ವರ್ಗಾಯಿಸಲಾಗಿದ್ಯಂತೆ. ಈ ಬಗ್ಗೆ ಪಬ್ಲಿಕ್‌ ಟಿವಿ ವರದಿ ಮಾಡಿದೆ. ಈ ಹಿಂದೆ ಅಶ್ವಿನಿ ಗೌಡ ಅವರು ರಕ್ಷಿತಾ ಅವರ ವಿರುದ್ಧ ಪದ ಬಳಕೆ ವಿಚಾರಕ್ಕೆ ದೂರು ದಾಖಲಾಗಿತ್ತು.

ಕಿಚ್ಚ ಸುದೀಪ್‌ ಕ್ಲಾಸ್‌

ಈ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಗಿಲ್ಲಿ ಅವರಿಗೆ ಕ್ಲಾಸ್‌ ಕೂಡ ತೆಗೆದುಕೊಂಡಿದ್ದರು. ಸುದೀಪ್‌ ಮಾತನಾಡಿ, `ರಿಷಾ ಎಷ್ಟು ತಪ್ಪು ಮಾಡಿದ್ರೋ ಅಷ್ಟೇ ತಪ್ಪು ಗಿಲ್ಲಿಯದ್ದೂ ಆಗಿದೆ. ನಾವು ಕೂಡ ಮನೆಯಲ್ಲಿ ಹೆಣ್ಣು ಮಕ್ಕಳ ಜೊತೆ ಬೆಳೆದುಕೊಂಡೇ ಬಂದದ್ದು. ಅವರದ್ದೇ ಆದ ಪ್ರೈವಿಸಿ ಇರತ್ತೆ. ನಾವು ಕೂಡ ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳ ಬಟ್ಟೆಗಳನ್ನು ಮುಟ್ಟುವುದಿಲ್ಲ. ಅಧಿಕಾರ ನಮಗಿಲ್ಲʼ ಎಂದಿದ್ದರು.

ಇದನ್ನೂ ಓದಿ: Bigg Boss Kannada 12: ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ

ರಿಷಾ ಸೇಫ್‌!

ರಿಷಾ ಮಾಡಿದ್ದು ತಪ್ಪು, ಔಟ್‌ ಆಗಲೇಬೇಕು ಎಂದಿದ್ದರೆ ಸ್ಪರ್ಧಿಗಳು ‘ರೆಡ್ ಕಾರ್ಡ್’ ಆಯ್ಕೆ ಮಾಡಬೇಕಿತ್ತು. ರಿಷಾಗೆ ಒಂದು ವಾರ್ನಿಂಗ್ ಕೊಟ್ಟು ಇರಿಸಿಕೊಳ್ಳಬಹುದು ಎಂದಾದರೆ ‘ಎಲ್ಲೋ ಕಾರ್ಡ್’ ಆಯ್ಕೆ ಮಾಡಬೇಕಿತ್ತು. ಎಲ್ಲ ಸ್ಪರ್ಧಿಗಳು ಎಲ್ಲೋ ಕಾರ್ಡ್‌ ಸೆಲೆಕ್ಟ್‌ ಮಾಡಿದ್ದರು. ರಿಷಾ ಸೇಫ್‌ ಆಗಿದ್ದರು. ಆ ಬಳಿಕ ಕಳಪೆ ಕೊಟ್ಟ ನೇರವಾಗಿ ನಾಮಿನೇಟ್‌ ಮಾಡಿದ್ದರು ಬಿಗ್‌ ಬಾಸ್‌.