ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻನನ್ನ ವ್ಯಕ್ತಿತ್ವಕ್ಕೆ ಅವಮಾನ ಆಗೋ ರೀತಿ ಮಾಡಿದ್ದೇ ಅವಳುʼ ; ರಕ್ಷಿತಾಗೆ ಲೆಟರ್ ಸಿಗದಂತೆ ಮಾಡ್ತಾರಾ ಅಶ್ವಿನಿ?

ರೀತಿ ಈ ವಾರ ಯಾವುದೇ ಟಾಸ್ಕ್ ನಡೆಯುತ್ತಿಲ್ಲ. ಮನೆಯವರು ಕಳುಹಿಸಿದ ಪತ್ರ ಓದೋ ಸಮಯ. ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೊಡಲಾಗಿದೆ. ತಮ್ಮ ಮಾತು ಮತ್ತು ಸ್ವಭಾವಗಳಿಂದ ಸ್ಪರ್ಧಿಗಳಿಂದಲೇ ಈ ವಾರ ಎಲಿಮಿನೇಷನ್‌ನಿಂದ ಬಚಾವ್ ಆಗಬೇಕಿದೆ. ಸದ್ಯ ಫ್ಯಾಮಿಲಿಗಳಿಂದ ಪತ್ರಗಳು ಮನೆಯೊಳಗೆ ಬರುತ್ತಿದೆ. ಅದೇ ರೀತಿ ಈಗ ರಕ್ಷಿತಾ ಹಾಗೂ ರಾಶಿಕಾ ಅವರಿಗೂ ಮನೆಯವರಿಂದ ಪತ್ರ ಬಂದಿದೆ. ಪತ್ರ ಯಾರಿಗೆ ಸೇರಲಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

bigg boss kannada

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (Bigg Boss Kannada 12) ಆರನೇ ವಾರದಲ್ಲಿ ಯಾವುದೇ ಟಾಸ್ಕ್​ಗಳು ಇರೋದಿಲ್ಲ ಎಂದು ಸುದೀಪ್ (Sudeep) ಅವರು ಈ ಮೊದಲೇ ಘೋಷಣೆ ಮಾಡಿದ್ದರು. ಅದೇ ರೀತಿ ಈ ವಾರ ಯಾವುದೇ ಟಾಸ್ಕ್ ನಡೆಯುತ್ತಿಲ್ಲ. ಬಾಸ್​ನಲ್ಲಿ ಮನೆಯವರು ಕಳುಹಿಸಿದ ಪತ್ರ ಓದೋ ಸಮಯ. ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ (Twist) ಕೊಡಲಾಗಿದೆ. ತಮ್ಮ ಮಾತು ಮತ್ತು ಸ್ವಭಾವಗಳಿಂದ ಸ್ಪರ್ಧಿಗಳಿಂದಲೇ ಈ ವಾರ ಎಲಿಮಿನೇಷನ್‌ನಿಂದ ಬಚಾವ್ ಆಗಬೇಕಿದೆ. ಸದ್ಯ ಫ್ಯಾಮಿಲಿಗಳಿಂದ ಪತ್ರಗಳು (Family Letter) ಮನೆಯೊಳಗೆ ಬರುತ್ತಿದೆ.

ಮನೆಯವರ ಒಮ್ಮತ ನಿರ್ಧಾರ ಮುಖ್ಯ

ಅದೇ ರೀತಿ ಈಗ ರಕ್ಷಿತಾ ಹಾಗೂ ರಾಶಿಕಾ ಅವರಿಗೂ ಮನೆಯವರಿಂದ ಪತ್ರ ಬಂದಿದೆ. ಆದರೆ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಇಟ್ಟಿದ್ದಾರೆ. ಮನೆಯವರ ಒಮ್ಮತ ನಿರ್ಧಾರ ಮಾಡಿ, ಒಬ್ಬರಿಗೆ ಲೆಟರ್‌ ನೀಡುವಂತೆ ಆದೇಶಿಸಿದೆ. ಆದರೆ ಪ್ರೋಮೋ ನೋಡಿದರೆ ಬಹುತೇಕರು ರಾಶಿಕಾ ಎಂದು ಹೇಳಿದ್ದಾರೆ. ಆದರೆ ರಘು ಅವರು ರಕ್ಷಿತಾ ಅವರಿಗೆ ಸಪೋರ್ಟ್‌ ಮಾಡಿದ್ದಾರೆ. ಇದರಲ್ಲಿ ಅಶ್ವಿನಿ ಗೌಡ ಅವರು ಮತ್ತೆ ರಕ್ಷಿತಾ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದಾರೆ.

ಇದನ್ನೂ ಓದಿ: BBK 12: ರಿಷಾ ಕೊಟ್ಟ ಕೌಂಟರ್‌ಗೆ ಕಣ್ಣೀರು ಹಾಕಿದ ಸ್ಪಂದನಾ ಹಾಗೂ ಸೂರಜ್; ಮನೆಯ ಪತ್ರ ನುಚ್ಚುನೂರು!

ಮನಸ್ಸುಗಳು ಹಾಳಾಗಲು ಮೂಲ ಕಾರಣವೇ ರಕ್ಷಿತಾ

ಅಶ್ವಿನಿ ಗೌಡ ಮಾತನಾಡಿ, ʻಈ ಮನೆಯಲ್ಲಿ ಮನಸ್ಥಿತಿಗಳು, ಮನಸ್ಸುಗಳು ಹಾಳಾಗಲು ಮೂಲ ಕಾರಣವೇ ರಕ್ಷಿತಾ. ಅಷ್ಟೇ ಅಲ್ಲ ನನ್ನ ವ್ಯಕ್ತಿತ್ವನ್ನ ಇನ್ನೊಂದು ರೀತಿಯಲ್ಲಿ ತಿರುಚಿ, ಅವಮಾನ ಆಗೋ ರೀತಿ ಮಾಡಿದ್ದು ಕೂಡ ರಕ್ಷಿತಾ. ಅವಳು ಆಡಿದ್ದು ನಾಟಕʼ ಎಂದಿದ್ದಾರೆ. ಅಷ್ಟೇ ಅಲ್ಲ ಒಮ್ಮತ ನಿರ್ಧಾರ ಬಂದಿಲ್ಲ ಅಂದಾದರೆ, ಯಾರಿಗೂ ಪತ್ರ ಸಿಗುವುದಿಲ್ಲ. ಪತ್ರ ಯಾರಿಗೆ ಸೇರಲಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.



ಅಶ್ವಿನಿ ಅವರಿಗೆ ಸಖತ್‌ ಕೌಂಟರ್‌

ಇನ್ನು ನಿನ್ನೆಯ ಸಂಚಿಕೆಯಲ್ಲಿ ಗಿಲ್ಲಿ ಕೂಡ ಅಶ್ವಿನಿ ಅವರಿಗೆ ಸಖತ್‌ ಕೌಂಟರ್‌ ನೀಡಿದ್ದಾರೆ. ಅಶ್ವಿನಿ ಗೌಡಗೆ ರೌಡಿಸಂ ಬಿಟ್ಟರೋ ಹಳೇ ಪಂಟ್ರು ಎಂದು ತಿರುಗೇಟು ಕೊಟ್ಟಿದ್ದಾರೆ. ಪತ್ರಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ಸೂರಜ್‌ ಮತ್ತು ಸ್ಪಂದನಾಗೆ ಬಹುತೇಕ ಮಂದಿ ಬಂದು ಸಮಾಧಾನ ಮಾಡಿದರು. ಆದರೆ ರಿಷಾ ಗೌಡ ಬರಲಿಲ್ಲ ಅಶ್ವಿನಿ ಗೌಡ ಸೂರಜ್‌ ಮತ್ತು ಸ್ಪಂದನಾಗೆ ಸಮಾಧಾನ ಮಾಡಲಿಲ್ಲ. ಬದಲಿಗೆ, ರಿಷಾ ಜೊತೆ ಮಾತುಕತೆ ನಡೆಸುತ್ತಿದ್ದರು. ಆಗ ಗಿಲ್ಲಿ ಹೇಳಿದ್ದು ಹೀಗೆ.

ಇದನ್ನೂ ಓದಿ: Bigg Boss: ಬಿಗ್​​ಬಾಸ್ ಮನೆಯಲ್ಲಿ ಭಾರಿ ಗಲಾಟೆ; ಪರಸ್ಪರ ಹೊಡೆದಾಡಿಕೊಂಡ ಸ್ಪರ್ಧಿಗಳು

ಗಿಲ್ಲಿ ಹೇಳಿದ್ದು ಹೀಗೆ, ʻಅಶ್ವಿನಿ ಗೌಡ ಅವರು ಹೇಗಿದ್ದಾರೆ ಎಂದರೆ, ಹಳೆಯ ಪಂಟರ್ ಒಬ್ಬರು ವಯಸ್ಸಾಗಿ, ನಿವೃತ್ತಿಯಾಗಿ ಮನೆಯಲ್ಲಿ ಇರ್ತಾರಲ್ಲ ಅದೇ ರೀತಿ. ಹೊಸ ಪಂಟರ್‌ಗಳಿಗೆ ಬುದ್ದಿವಾದ ಹೇಳೋದು, ಹೇಗೆಲ್ಲಾ ನಡೆಸಿಕೊಂಡು ಹೋಗಬೇಕು ಅದೆಲ್ಲ ಹೇಳಿ ಒಡುವ ರೀತಿ ಇದ್ದಾರೆ. ಹೊಸದಾಗಿ ರೌಡಿಸಂಗೆ ಎಂಟ್ರಿ ಆಗಿರುವವರಿಗೆ ಟ್ರೇನಿಂಗ್ ಕೊಡ್ತಿದ್ದಾರೆ ಅಷ್ಟೇ' ಎಂದು ಅಶ್ವಿನಿ ಗೌಡ ಬಗ್ಗೆ ಗಿಲ್ಲಿ ನಟ ಮಾತನಾಡಿದರು.

Yashaswi Devadiga

View all posts by this author