Bhagya Lakshmi Serial: ಕನ್ನಿಕಾಳನ್ನು ಕಂಡು ಶಾಕ್ ಆದ ಭಾಗ್ಯಾ: ಕೆಲಸಕ್ಕೆ ಬಂತು ಸಂಚಕಾರ
ಹೋಟೆಲ್ ಓನರ್ ಕನ್ನಿಕಾ ಎಂಟ್ರಿ ಆಗುತ್ತದೆ. ಕಾರಿನಿಂದ ಇಳಿದ ಕನ್ನಿಕಾಳನ್ನು ನೋಡಿ ಭಾಗ್ಯಾ ಶಾಕ್ ಆಗುತ್ತಾಳೆ. ಇವಳು ಈ ಹೋಟೆಲ್ ಓನರ್ ಹಾ?, ನಂಗೆ ಯಾಕೆ ಪದೇ-ಪದೇ ಇವಳೇ ಎದುರಾಗ್ತಾಳೆ.. ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನೋ ತರ ಎಂದು ಅಂದುಕೊಳ್ಳುತ್ತಾಳೆ.


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ( Bhagya Lakshmi Serial ) ಸದ್ಯದಲ್ಲೇ ಹೊಸ ಟ್ವಿಸ್ಟ್ ಬರಲಿದೆ. ಈಗಾಗಲೇ ಪ್ರೊಮೋ ಒಂದು ಬಿಡುಗಡೆ ಆಗಿದ್ದು, ಇದರಲ್ಲಿ ಭಾಗ್ಯಾಳ ಹೊಸ ಪಯಣ ಎಂದು ಬರೆಯಲಾಗಿದೆ. ಭಾಗ್ಯಾ ಕೆಲವೇ ದಿನಗಳಲ್ಲಿ ಎಲ್ಲವನ್ನೂ ಕಳೆದುಕೊಳ್ಳಲಿದ್ದಾಳೆ. ಕೆಲಸ ಕೂಡ ಹೋಗಲಿದೆ. ಹೀಗಿರುವಾಗ ನಾನು ಈ ನೋವನ್ನು ಯಾರಿಗೂ ತೋರಿಸದೆ ಮುಖವಾಡ ತೊಟ್ಟು ಬದುಕುತ್ತೇನೆ ಎಂದು ಜೋಕರ್ ಮುಖವಾಡ ತೊಡುತ್ತಾಳೆ. ಈ ಘಟನೆ ಶೀಘ್ರದಲ್ಲೇ ಸಂಭವಿಸಲಿದೆ. ಇದಕ್ಕೆ ತಕ್ಕಂತೆ ಧಾರಾವಾಹಿಯ ಪ್ರತಿದಿನದ ಎಪಿಸೋಡ್ ರೋಚಕತೆ ಸೃಷ್ಟಿಸುತ್ತಿದೆ. ಸದ್ಯ ಭಾಗ್ಯಾಳನ್ನು ಕೆಲಸಿದಿಂದ ಕಿತ್ತೆಸೆಯಲು ಶ್ರೇಷ್ಠಾ ಹಾಗೂ ಕನ್ನಿಕಾ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ.
ಭಾಗ್ಯಾ ಕೆಲಸ ಮಾಡುತ್ತಿರುವ ಸಿಟಿ ಆಫ್ ಲೈಟ್ಸ್ ಹೋಟೆಲ್‌ನ ಮಾಲೀಕರ ತಂಗಿ ಕನ್ನಿಕಾ ಜೊತೆ ಸೇರಿಕೊಂಡು, ಭಾಗ್ಯಾಳನ್ನು ಕೆಲಸದಿಂದ ತೆಗೆಸುವ ಪ್ಲ್ಯಾನ್ ಮಾಡಿದ್ದಾಳೆ ಶ್ರೇಷ್ಠಾ. ಭಾಗ್ಯಾ ಒಳ್ಳೆಯ ಕೆಲಸ ಮಾಡುತ್ತಿದ್ದಾಳೆ. ಅವಳ ಕೆಲಸದ ಬಗ್ಗೆ ಎಲ್ಲರಲ್ಲಿ ಉತ್ತಮ ಅಭಿಪ್ರಾಯವಿದೆ. ಹೀಗಾಗಿ ಅವಳ ಕೆಲಸದ ಬಗ್ಗೆ ಜನರಲ್ಲಿ, ಅಲ್ಲಿನ ಸಿಬ್ಬಂದಿಯಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ, ನಂತರ ಕೆಲಸದಿಂದ ತೆಗೆಸುತ್ತೇನೆ. ಆಗ ನಮ್ಮ ಕೆಲಸ ಸುಲಭವಾಗುತ್ತದೆ ಎಂದು ಕನ್ನಿಕಾ ಹೇಳುತ್ತಾಳೆ.
ಅದರಂತೆ ಹೋಟೆಲ್ ಮ್ಯಾನೇಜರ್ ಜೊತೆ ಪ್ಲ್ಯಾನ್ ಮಾಡಿದ ಕನ್ನಿಕಾ ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಮುಂದಾಗುತ್ತಾಳೆ. ಭಾಗ್ಯಾಳ ಮ್ಯಾನೇಜರ್ ಬಂದು, ಹೋಟೆಲ್‌ಗೆ ವಿಐಪಿಗಳು ಬರುತ್ತಿದ್ದಾರೆ, ಅವರ ಅತಿಥ್ಯದ ಜವಾಬ್ದಾರಿ ನೋಡಿಕೊಳ್ಳುವಂತೆ ಭಾಗ್ಯಾಗೆ ಸೂಚಿಸುತ್ತಾರೆ. ಅದಕ್ಕೆ ಭಾಗ್ಯಾ ಖುಷಿಯಿಂದ ಒಪ್ಪುತ್ತಾಳೆ. ಜತೆಗೆ ಅವಳ ಸಹೋದ್ಯೋಗಿಗಳು ಕೂಡ ಸಹಕಾರ ನೀಡುವುದಾಗಿ ಹೇಳುತ್ತಾರೆ. ಹೀಗೆ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಾಳೆ. ಅದರಂತೆ ಭಾಗ್ಯಾ ರುಚಿ-ರುಚಿಯಾದ ಅಡುಗೆ ರೆಡಿ ಮಾಡಿರುತ್ತಾಳೆ. ಆದರೆ, ಇದಕ್ಕೆ ಕನ್ನಿಕಾ ಹಾಗೂ ಮ್ಯಾನೇಜರ್ ಹುಳಿ ಹಿಂಡುತ್ತಾರೆ. ಭಾಗ್ಯಾ ತಯಾರು ಮಾಡಿದ ಅಡುಗೆ ಸರಿಯಿಲ್ಲ.. ಹೋಟೆಲ್ ಮುಚ್ಚಿಸುತ್ತೇವೆ ಎಂದು ಜಗಳ ಆಗುತ್ತದೆ.
ಮಾಧ್ಯಮದವರು ಕೂಡ ಬರುತ್ತಾರೆ. ಭಾಗ್ಯಾ ಬಳಿ ಒಂದರ ಹಿಂದೆ ಒಂದರಂತೆ ಪ್ರಶ್ನೆಗಳ ಸುರಿಮಳೆ ಗೈಯುತ್ತಾರೆ. ಇದರಿಂದ ಭಾಗ್ಯಾ ಏನೂ ಉತ್ತರ ಕೊಡದೆ ಟೆನ್ಶನ್ ಆಗುತ್ತಾಳೆ. ಅತ್ತ ವಿಐಪಿಯ ಬೆಂಬಲಿಗರುವ ಹೋಟೆಲ್ ಮುಚ್ಚಿಸಿ ಅಥವಾ ಓನರ್ನ ಬರೋಕೆ ಹೇಳಿ ಎನ್ನುತ್ತಾರೆ. ಅಷ್ಟರಲ್ಲಿ ಹೋಟೆಲ್ ಓನರ್ ಕನ್ನಿಕಾ ಎಂಟ್ರಿ ಆಗುತ್ತದೆ. ಕಾರಿನಿಂದ ಇಳಿದ ಕನ್ನಿಕಾಳನ್ನು ನೋಡಿ ಭಾಗ್ಯಾ ಶಾಕ್ ಆಗುತ್ತಾಳೆ. ಇವಳು ಈ ಹೋಟೆಲ್ ಓನರ್ ಹಾ?, ನಂಗೆ ಯಾಕೆ ಪದೇ-ಪದೇ ಇವಳೇ ಎದುರಾಗ್ತಾಳೆ.. ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನೋ ತರ ಎಂದು ಅಂದುಕೊಳ್ಳುತ್ತಾಳೆ.
ಕನ್ನಿಕಾ ಬಂದ ಕೂಡಲೇ ನಿನ್ನೆ ವಿಐಪಿ ಸರ್ಗೆ ಫುಡ್ ಪ್ರಿಪೇರ್ ಮಾಡಿದ್ದಿ ಭಾಗ್ಯಾಳೇ ಎಂದು ಮ್ಯಾನೇಜರ್ ಹೇಳುತ್ತಾನೆ. ಆಗ ಕನ್ನಿಕಾ, ಯಾಕೆ ಭಾಗ್ಯಾ.. ನಮ್ಮ ಹೋಟೆಲ್‌ನ ಬೀದಿಗೆ ತಂದು ನಿಲ್ಲಿಸಬೇಕು ಅಂತ ಅಂದುಕೊಂಡಿದ್ದೀಯಾ? ಎಂದು ಅವಾಜ್ ಹಾಕುತ್ತಾಳೆ. ಸದ್ಯ ಭಾಗ್ಯಾ ಈ ಸಂಕಷ್ಟದಿಂದ ಹೇಗೆ ಪಾರಾಗುತ್ತಾಳೆ.. ಕನ್ನಿಕಾಳನ್ನು ಯಾವರೀತಿ ಎದುರಿಸುತ್ತಾಳೆ.. ಅಥವಾ ಕನ್ನಿಕಾ ಕೂಡಲೇ ಕೆಲಸದಿಂದ ತೆಗೆದು ಹಾಕುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.
Mokshitha Pai, BBK 11: ಕೊನೆಗೂ ಮಾಧ್ಯಮದ ಮುಂದೆ ಬಂದ ಮೋಕ್ಷಿತಾ: ಮಕ್ಕಳ ಕಳ್ಳಿ ಎಂದವರಿಗೆ ಖಡಕ್ ತಿರುಗೇಟು