ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

BhagyaLakshm Serial: ಭಾಗ್ಯ ಕೊರಳಿಗೆ ಮತ್ತೆ ಮಾಂಗಲ್ಯ ತೊಡಿಸೋರು ಯಾರು?

BhagyaLakshm Serial: ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮೀ' ಧಾರಾವಾಹಿ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಭಾಗ್ಯಾಳ ಜೀವನದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಇದುವರೆಗೆ ಅತ್ತೆ ಮನೆಯವರ ಜೊತೆ ನೆಮ್ಮದಿಯಾಗಿದ್ದ ಭಾಗ್ಯಾಳಿಗೆ ಈಗ ವಿಧಿಯೇ ದೊಡ್ಡ ಸವಾಲು ಹಾಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಹುಣ್ಣಿಮೆಯೊಳಗೆ ಭಾಗ್ಯಳ ಮದುವೆಯಾಗಬೇಕೆಂಬ ಜ್ಯೋತಿಷಿಯ ಭವಿಷ್ಯ ಕಥೆಗೆ ತಿರುವು ನೀಡಿದೆ.

ಭಾಗ್ಯ ಕೊರಳಿಗೆ ಮತ್ತೆ ಮಾಂಗಲ್ಯ ತೊಡಿಸೋರು ಯಾರು?

ಭಾಗ್ಯಲಕ್ಷ್ಮೀ ಧಾರಾವಾಹಿ -

Yashaswi Devadiga
Yashaswi Devadiga Feb 28, 2026 9:13 AM

ಕಲರ್ಸ್ ಕನ್ನಡದ (Colors Kannada) 'ಭಾಗ್ಯಲಕ್ಷ್ಮೀ' ಧಾರಾವಾಹಿ (Bhagyalakshmi Serial) ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಭಾಗ್ಯಾಳ ಜೀವನದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಇದುವರೆಗೆ ಅತ್ತೆ ಮನೆಯವರ ಜೊತೆ ನೆಮ್ಮದಿಯಾಗಿದ್ದ ಭಾಗ್ಯಾಳಿಗೆ ಈಗ ವಿಧಿಯೇ ದೊಡ್ಡ ಸವಾಲು ಹಾಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಹುಣ್ಣಿಮೆಯೊಳಗೆ ಭಾಗ್ಯಳ ಮದುವೆಯಾಗಬೇಕೆಂಬ (Marriage) ಜ್ಯೋತಿಷಿಯ ಭವಿಷ್ಯ ಕಥೆಗೆ ತಿರುವು ನೀಡಿದೆ.

ಭಾಗ್ಯ ದಿಟ್ಟ ನಿರ್ಧಾರ

ಆದಿ ಇನ್ನೂ ಮದುವೆಯ ವಿಷಯವನ್ನು ಭಾಗ್ಯಳ ಬಳಿ ಹೇಳಿಕೊಳ್ಳದಿದ್ದರೆ, ಇತ್ತ ತಾಂಡವ್​ಗೆ ಭಾಗ್ಯಳ ಮೇಲೆ ಲವ್​ ಮೂಡಲು ಶುರುವಾಗಿದೆ. ತಾಂಡವ್‌ನ ಮತ್ತೆ ಮದುವೆ ಆಗಬೇಕು ಎಂಬುದು ಸುನಂದ ಹಾಗೂ ಮಗಳ ಆಸೆ. ಆದರೆ ಆದಿಯನ್ನ ಭಾಗ್ಯ ಮದುವೆ ಆಗಬೇಕು ಅನ್ನೋದು ತಾಂಡವ್‌ ಅಮ್ಮನ ಆಸೆ. ಭಾಗ್ಯ ಅಂತೂ ತಾಂಡವ್‌ ಜೊತೆ ಬದುಕಲ್ಲ ಅಂತ ದಿಟ್ಟ ನಿರ್ಧಾರ ಮಾಡಿದ್ದಾಳೆ.

ಇದನ್ನೂ ಓದಿ: Thalapathy Vijay: ನಟಿ ಜೊತೆ ಅನೈತಿಕ ಸಂಬಂಧ ಆರೋಪ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ, ದಳಪತಿ ಬಾಳಲ್ಲಿ ಬಿರುಗಾಳಿ!

ತಾಳಿಭಾಗ್ಯ ಇಲ್ಲ

ಇದರ ನಡುವೆಯೇ, ಜ್ಯೋತಿಷಿಯೊಬ್ಬ ಕಣಿ ನುಡಿದಿದ್ದಾರೆ. ಬರುವ ಹುಣ್ಣಿಮೆಯ ಒಳಗೆ ಭಾಗ್ಯಳ ಕುತ್ತಿಗೆಗೆ ತಾಳಿ ಬೀಳಬೇಕು. ಇಲ್ಲದಿದ್ದರೆ ತಾಳಿಭಾಗ್ಯ ಇಲ್ಲ ಎಂದಿದ್ದಾನೆ. ಹಾಗಿದ್ದರೆ ಹುಣ್ಣಿಮೆಯ ಒಳಗೆ ಭಾಗ್ಯಳಿಗೆ ತಾಳಿ ಕಟ್ಟುವವರು ಆದಿನೋ, ತಾಂಡವ್​ನೋ ಎನ್ನುವ ಕುತೂಹಲ ಸದ್ಯಕ್ಕಿದೆ. ಇನ್ನೊಂದೆಡೆ, ಶ್ರೇಷ್ಠಾ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.

ಇದನ್ನೂ ಓದಿ: Radha Bhagavati: ರಿಯಲ್‌ ಆಗಿ ಎಂಗೇಜ್‌ ಆದ ಮಲ್ಲಿ- ಜೈದೇವ್‌! ಸರ್​​ಪ್ರೈಸ್ ಕೊಟ್ಟ ರಾಣವ್-ರಾಧಾ

ಕುಸುಮಾ ತನ್ನ ಸೊಸೆ ಭಾಗ್ಯಾಳನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಜ್ಯೋತಿಷಿಯ ಮಾತುಗಳನ್ನು ಕೇಳಿ ಕುಸುಮಾ ಕೂಡ ಆತಂಕಗೊಂಡಿದ್ದಾಳೆ. ಇನ್ನೊಂದೆಡೆ ತಾಂಡವ್‌ನನ್ನು ಮದುವೆಯಾಗಲು ಹಠ ಹಿಡಿದಿರುವ ಶ್ರೇಷ್ಠಾ ತನ್ನ ಪ್ರಯತ್ನ ಮುಂದುವರಿಸಿದ್ದಾಳೆ.