ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bhagyalakshmi Kannada Serial: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಅಂತ್ಯ ಆಗತ್ತಾ? ಕ್ಲಾರಿಟಿ ಕೊಟ್ಟ ನಟ ಸುದರ್ಶನ್!

Actor Sudharshan: ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕೊನೆ ಆಗುತ್ತಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಸುಷ್ಮಾ ರಾವ್‌ ಕೂಡ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದರು. ಈಗ ತಾಂಡವ್ ಪಾತ್ರ ಮಾಡ್ತಿರೋ ಸುದರ್ಶನ್ ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್ ಕನ್ನಡದಲ್ಲಿ (Colors Kannada) ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagyalakshmi Serial) ಕೊನೆ ಆಗುತ್ತಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಸುಷ್ಮಾ ರಾವ್‌ (Sushma Rao) ಕೂಡ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದರು. ಈಗ ತಾಂಡವ್ ಪಾತ್ರ ಮಾಡ್ತಿರೋ ಸುದರ್ಶನ್ (Sudarshan) ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಧಾರಾವಾಹಿ ಕಡಿಮೆ ಟಿಆರ್​​ಪಿ

ಒಂದು ಧಾರಾವಾಹಿ ಸಾವಿರ ಎಪಿಸೋಡ್ ಪೂರ್ಣಗೊಳಿಸುತ್ತಿದ್ದಂತೆ ಧಾರಾವಾಹಿ ಮುಗಿಯುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ನಮ್ಮ ಧಾರಾವಾಹಿ ಕಡಿಮೆ ಟಿಆರ್​​ಪಿ ಪಡೆದರೆ ಆ ರೀತಿಯ ಊಹೆ ಅಥವಾ ಕಲ್ಪನೆ ಮಾಡಿಕೊಳ್ಳಬಹುದು. ಆದರೆ, ನಮ್ಮ ಧಾರಾವಾಹಿ ಉತ್ತಮ ಟಿಆರ್​​ಪಿಯನ್ನೇ ಪಡೆದುಕೊಳ್ಳುತ್ತಿದೆ. ಹೀಗಾಗಿ, ಧಾರಾವಾಹಿ ಮುಗಿಯುತ್ತದೆ ಎಂಬುದರಲ್ಲಿ ಅರ್ಥವಿಲ್ಲ. ಆದರೂ ಧಾರಾವಾಹಿ ವಿಷಯದಲ್ಲಿ ವಾಹಿನಿಯವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು

ಈ ಹಿಂದೆ ಸುಷ್ಮಾ ಪೋಸ್ಟ್‌ ಮಾಡಿದ್ದೇನು?

“ಹಾಯ್‌ ಎಲ್ಲರಿಗೂ ನಮಸ್ಕಾರ, ಎಲ್ಲಾ ಹೇಗಿದ್ದೀರಾ…ಎಲ್ಲರೂ ಭಾಗ್ಯಲಕ್ಷ್ಮೀ ಸೀರಿಯಲ್‌ ಮುಗೀತಾ ಇದೆ ಅಂತ ಪೋಸ್ಟ್‌ ಅಪ್ಲೋಡ್‌ ಮಾಡಿದ್ದಾರೆ. ಅದು ಸುಳ್ಳು. ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯ ಮುಗಿಯುತ್ತಾ ಇಲ್ಲ. ಹೀಗಂತ ಸುಷ್ಮಾ ಅವರೇ ಹೇಳಿದ್ದಾರೆ. ಸೀರಿಯಲ್‌ ಮುಗಿಯಲ್ಲ.. ದಯವಿಟ್ಟು ಸುಳ್ಳು ಪೋಸ್ಟ್ ಅಪ್ಲೋಡ್‌ ಮಾಡಬೇಡಿ" ಎಂದು ಸುಷ್ಮಾ ಅವರ ಅಭಿಮಾನಿಯೊಬ್ಬರು ಟ್ಯಾಗ್​ ಮಾಡಿದ್ದು, ಅದಕ್ಕೆ ಖುದ್ದು ಸುಷ್ಮಾ ಕೆ. ರಾವ್​ ಅವರು ಲೈಕ್​ ಮಾಡಿದ್ದಾರೆ.



ಕಥೆ ಎಲ್ಲಿಗೆ ಬಂತು?

ಭಾಗ್ಯಗೆ ಪ್ರೇಮ ನಿವೇದನೆ ಮಾಡಬೇಕು, ಅವಳನ್ನು ಮದುವೆ ಆಗಬೇಕು ಎಂದು ಆದಿ ಕನಸು ಕಾಣುತ್ತಿದ್ದಾನೆ. ಅತ್ತ ತಾಂಡವ್‌, ಭಾಗ್ಯ ಬೇಕು ಎಂದು ಪರಿತಪಿಸುತ್ತಿದ್ದಾನೆ. ಅಪ್ಪ-ಅಮ್ಮ ಮೊದಲಿನ ಥರ ಇರಲಿ ಎಂದು ತನ್ವಿ ಬಯಸುತ್ತಿದ್ದಾಳೆ. ಸುನಂದಾ ಬಿಟ್ಟು ಉಳಿದವರು ಕೂಡ ಆದಿ-ಭಾಗ್ಯ ಮದುವೆಯಾಗಿ ಚೆನ್ನಾಗಿರಲಿ ಎಂದು ನೋಡುತ್ತಿದ್ದಾರೆ. ಇನ್ನು ಮಗಳು ಹಠ ಮಾಡಿದ ಕೂಡಲೇ ಭಾಗ್ಯಗೆ ತಾಂಡವ್‌ ಕೊಟ್ಟ ನೋವು ಕಾಡಿದೆ.

ಇದನ್ನೂ ಓದಿ: Nanda Gokula Serial: ʻನಂದಗೋಕುಲ’ದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಏಕೆ?

ತಾಂಡವ್‌ನನ್ನು ಮನೆಯೊಳಗಡೆ ಬರೋಕೆ ಓಕೆ ಎಂದು ಮಗಳಿಗೋಸ್ಕರ ಹೇಳಿದ್ದಾಳೆ. ತಾಂಡವ್‌ಗೆ ಮದುವೆ ಆಗಿ ಎರಡು ಮಕ್ಕಳು ಇದೆ ಅಂತ ಗೊತ್ತಿದ್ದರು ಶ್ರೇಷ್ಠಾ, ತಾಂಡವ್‌ ಮದುವೆ ಆಗಿದ್ದಳು. ಇದೀಗ ಆದಿ ಮತ್ತು ಭಾಗ್ಯ ಒಂದಾಗ್ತಾರಾ? ಅಥವಾ ತಾಂಡವ್‌ ಜೊತೆ ಭಾಗ್ಯ ಹೋಗ್ತಾಳಾ ಎನ್ನೋದೇ ಕುತೂಹಲ.

Yashaswi Devadiga

View all posts by this author