ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು

Chaithra Kundapura Case: ಸಂದರ್ಶನವೊಂದರಲ್ಲಿ ಚೈತ್ರಾ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ತಮ್ಮ ಬಾಲ್ಯದ ಕಹಿ ಘಟನೆ, ಲವ್‌ ಸ್ಟೋರಿ, ತಂದೆಯ ಹೇಳಿಕೆ, ಚೆನ್‌ ಬೌನ್ಸ್‌ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ತುಂಬಾ ಜನ ಕಮೆಂಟ್‌ ಮಾಡಿದ್ದಾರೆ. ನನಗೆ ಯಾರೂ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸುವ ಉದ್ದೇಶ ಇಲ್ಲ. ಆದರೆ ನನ್ನ ಸುದ್ದಿಗೆ ಬಂದ್ರೂ ಬಿಡಲ್ಲ ಎಂದಿದ್ದಾರೆ.

ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ -

Yashaswi Devadiga
Yashaswi Devadiga Feb 18, 2026 11:03 AM

‘ಬಿಗ್ ಬಾಸ್ ಕನ್ನಡ 12’ (Bigg Boss Kannada 12) ಕಾರ್ಯಕ್ರಮ ಮುಗಿದು ಇನ್ನೇನು ತಿಂಗಳಾಗುತ್ತಾ ಬಂತು. ಹೀಗಿರುವಾಗಲೇ, ‘ಬಿಗ್ ಬಾಸ್’ ಮನೆಯಲ್ಲಿ ಮುಗಿದುಹೋಗಿದ್ದ ಚೈತ್ರಾ ಕುಂದಾಪುರ - ಅಶ್ವಿನಿ ಗೌಡ ನಡುವಿನ ಫೈಟ್‌ ಹೊರಗೂ ಮುಂದುವರೆದಿತ್ತು. ಚೈತ್ರಾ ಕುಂದಾಪುರ ( Chaitra Kundapura) ಆಗಾಗ ವಿವಾದಗಳಿಗೇ ಸುದ್ದಿಯಾಗುತ್ತಲೇ ಇರ್ತಾರೆ. ಅಶ್ವಿನಿ ಅವರ ಖಾಸಗಿ ಜೀವನದ ಬಗ್ಗೆ ಚೈತ್ರಾ ಇತ್ತೀಚೆಗೆ ಆರೋಪ ಮಾಡಿದ್ದರು. ಅಶ್ವಿನಿ ಅವರ ವಿಚ್ಛೇದನ ಮತ್ತು ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾತನಾಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ಚೈತ್ರಾ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ತಮ್ಮ ಬಾಲ್ಯದ ಕಹಿ ಘಟನೆ, ಲವ್‌ ಸ್ಟೋರಿ (Love Story), ತಂದೆಯ ಹೇಳಿಕೆ, ಚೆನ್‌ ಬೌನ್ಸ್‌ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ತಂದೆ ಬಗ್ಗೆ ಯಾವತ್ತೂ ನಾನು ನೆಗೆಟಿವ್‌ ಹೇಳಲ್ಲ

ಚೈತ್ರಾ ಮದುವೆ ಆದ ಸಂದರ್ಭದಲ್ಲಿ ಅವರ ಬಗ್ಗೆ ತಂದೆ ಹಲವು ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ಚೈತ್ರಾ ಮಾತನಾಡಿ, ನಾನು ನನ್ನ ತಾಯಿ ಕೊಟ್ಟಿರುವ ಸಂಸ್ಕಾರ ಮರೆಯಲ್ಲ, ನನ್ನ ತಂದೆ ಬಗ್ಗೆ ಯಾವತ್ತೂ ನಾನು ನೆಗೆಟಿವ್‌ ಹೇಳಲ್ಲ. ನನಗೆ ಅವರ ಬಗ್ಗೆ ಹೇಳೋ ಅವಶ್ಯಕತೆ ಇಲ್ಲ. ನನ್ನ ತಂದೆಯನ್ನು ಹೊರಗೆ ದುರುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋದು ಗೊತ್ತು. ಅದು ದೇವರಿಗೆ ಬಿಟ್ಟಿದ್ದೇನೆ.

ಇದನ್ನೂ ಓದಿ: Reality Show: ʻಬಿಗ್ ಬಾಸ್‌ʼಗೆ ಟಕ್ಕರ್‌ ಕೊಡಲು ಬಂದೇ ಬಿಡ್ತು ಹೊಸ ರಿಯಾಲಿಟಿ ಶೋ!

ಅವರ ಹಿಂದೆ ಯಾರೋ ಇದ್ದಾರೆ

ಯಾವ ತಂದೆಯೂ ಮಕ್ಕಳಿಗೆ ಹೀಗೆ ಹೇಳಲು ಸಾಧ್ಯವಿಲ್ಲ. ಆದರೆ ಅವರ ಹಿಂದೆ ಯಾರೋ ಇದ್ದಾರೆ. ನನ್ನ ಜೀವನದಲ್ಲಿ ಅವರ ಪಾತ್ರ ಏನೂ ಅಲ್ಲ. ಹಾಗಾಗಿ ನನಗೆ ಅವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಅವಮಾನ ಆದಾಗ ಪಾಲು ತೆಗೆದುಕೊಂಡಿದ್ದು ನನ್ನ ತಾಯಿ. ಸನ್ಮಾನ ಆದಾಗ ಕೂಡ ಅವರೇ ಪಕ್ಕ ಇದ್ದದ್ದು. ಹಾಗಂತ ನನ್ನ ತಂದೆ ಕೆಟ್ಟವರು ಅನ್ನಲ್ಲ. ಪರಿಸ್ಥಿತಿ ಹಾಗೇ ಮಾಡಿದೆ ಎಂದರು.

5 ಕೋಟಿ ವಂಚನೆ ಪ್ರಕರಣ

ಈ ಬಗ್ಗೆ ಮಾತನಾಡಬೇಕು ಅಂತಿದೆ. ಕೋರ್ಟ್‌ನಲ್ಲಿ ಇದೆ ಪ್ರಕರಣ. ದಾಖಲೆ ಇಟ್ಟು ಮಾತಾಡ್ತೀನಿ. ಕೋರ್ಟ್‌ನಲ್ಲಿ ಇದ್ದ ಕಾರಣ ಈ ವಿಚಾರ ಈಗ ಮಾತನಾಡುತ್ತಿಲ್ಲ. ಸಷ್ಟವಾಗಿ, ಧೈರ್ಯವಾಗಿ ಹೇಳ್ತೀನಿ. ಇವತ್ತಿನ ತನಕ ಚೈತ್ರಾ ಏನೂ ಬದುಕಿದ್ದಾಳೆ. ನನ್ನ ತಟ್ಟೆಯಲ್ಲಿ ಬೀಳವ ಅನ್ನದಲ್ಲಿ ಇನ್ನೊಬ್ಬರ ಹಂಗಿಲ್ಲ. ಕಷ್ಟ ಪಟ್ಟು ದುಡಿದೇ ಸಂಪಾದಿಸಿ ಬದುಕಿದ್ದಾಳೆ. ನಾನು ನಿರಪಾರಾಧಿ ಆಗೇ ಬರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Amruthadhaare Serial: ಜೇಡಿಯ ಪೈಲ್ವಾನ್ ಈಗ ಭೂಮಿ ಕಣ್ಣೆದುರು! ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

ನನ್ನ ಬಗ್ಗೆ ತುಂಬಾ ಜನ ಕಮೆಂಟ್‌ ಮಾಡಿದ್ದಾರೆ. ನನಗೆ ಯಾರೂ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸುವ ಉದ್ದೇಶ ಇಲ್ಲ. ಆದರೆ ನನ್ನ ಸುದ್ದಿಗೆ ಬಂದ್ರೂ ಬಿಡಲ್ಲ ಎಂದು ಪರೋಕ್ಷವಾಗಿ ಅಶ್ವಿನಿ ಅವರ ಮೂರು ಗಂಡಂದಿರು ಹೇಳಿಕೆ ಬಗ್ಗೆ ಹೇಳಿಕೆ ನೀಡಿದ್ದಾರೆ ಚೈತ್ರಾ. ಹಾಗೇ ಪತಿ ಶ್ರೀಕಾಂತ್‌ ಅವರು ತನ್ನ ಬದುಕಿನಲ್ಲಿ ಹೇಗೆ ಬೆಂಬಲವಾಗಿ ನಿಂತಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.