ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BhagyaLakshmi serial: ಮದುವೆ ಬೇಡ ಎಂದ ಆದಿ; ಭಾಗ್ಯ ಶಾಕ್‌, ತಾಂಡವ್‌ ಮುಂದಿನ ನಡೆಯೇನು?

BhagyaLakshmi serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮಿಯಲ್ಲಿ ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಭಾಗ್ಯಳ ಬದುಕಿನಲ್ಲಿ ಹೊಸ ಬೆಳಕು ಮೂಡಿತು ಎನ್ನುವಾಗಲೇ ವಿಧಿ ಮತ್ತೆ ಆಟವಾಡುತ್ತಿದೆ. ಭಾಗ್ಯಳ ಮನೆಯವರು ಮದುವೆ ತಯಾರಿಗೆಂದು ದೇವಸ್ಥಾನಕ್ಕೂ ಬಂದಿದ್ದರು. ಆದರೆ ಅಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಅಷ್ಟೇ ಅಲ್ಲ ಭಾಗ್ಯಳ ಕಣ್ಣೀರಿಗೆ ಕೊನೆಯೇ ಇಲ್ವಾ ಅಂತ ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು.

ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮಿಯಲ್ಲಿ (Bhagyalakshmi Serial) ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಭಾಗ್ಯಳ ಬದುಕಿನಲ್ಲಿ ಹೊಸ ಬೆಳಕು ಮೂಡಿತು ಎನ್ನುವಾಗಲೇ ವಿಧಿ ಮತ್ತೆ ಆಟವಾಡುತ್ತಿದೆ. ಭಾಗ್ಯಳ ಮನೆಯವರು ಮದುವೆ ತಯಾರಿಗೆಂದು ದೇವಸ್ಥಾನಕ್ಕೂ ಬಂದಿದ್ದರು. ಆದರೆ ಅಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಅಷ್ಟೇ ಅಲ್ಲ ಭಾಗ್ಯಳ (Bhagya) ಕಣ್ಣೀರಿಗೆ ಕೊನೆಯೇ ಇಲ್ವಾ ಅಂತ ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು.

ದಿಢೀರ್ ನಿರ್ಧಾರ ಬದಲು

ಭಾಗ್ಯಳನ್ನು ಮದುವೆಯಾಗಲು ಒಪ್ಪಿದ್ದ ಆದಿ ಈಗ ದಿಢೀರ್ ಆಗಿ ತನ್ನ ನಿರ್ಧಾರ ಬದಲಿಸಿದ್ದಾನೆ. "ನಾವು ಯಾಕೆ ಮದುವೆಯಾಗಬೇಕು? ನಾವು ಫ್ರೆಂಡ್ಸ್ ಆಗಿಯೇ ಇರಬಹುದಲ್ಲವೇ? ಎಂದು ಪ್ರಶ್ನೆ ಮಾಡಿದ್ದಾನೆ. "ನೀವು ಮತ್ತೆ ತಾಂಡವ್ ಅವರನ್ನೇ ಒಪ್ಪಿಕೊಳ್ಳಿ" ಎಂದಿದ್ದಾನೆ. ಭಾಗ್ಯ ಈಗ ಶಾಕ್‌ ಆಗಿದ್ದಾಳೆ. ಇತ್ತ ಆದಿ ಅರ್ಧ ದಾರಿಯಲ್ಲಿ ಕೈ ಬಿಟ್ಟರೆ, ಅತ್ತ ತಾಂಡವ್ ತನ್ನ ಜೀವನವನ್ನೇ ಹಾಳು ಮಾಡಿದ್ದಾನೆ.

ಇದನ್ನೂ ಓದಿ: Rishab Shetty: ಹುಟ್ಟೂರು ಕೆರಾಡಿಯಲ್ಲಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ! ಡಿವೈನ್ ಸ್ಟಾರ್ ಕನಸು ನನಸು

ಆದಿ ಇದ್ದಕ್ಕಿದ್ದಂತೆ ಮದುವೆ ಬೇಡ ಎಂದು ಹೇಳಲು ತಾಂಡವ್ ಏನಾದರೂ ಸಂಚು ರೂಪಿಸಿದ್ದಾನಾ ಎಂಬ ಅನುಮಾನ ಈಗ ಪ್ರೇಕ್ಷಕರಲ್ಲಿ ಮೂಡಿದೆ.

ತನ್ನ ಸೊಸೆಗೆ ಹೊಸ ಬಾಳು ಕಟ್ಟಿಕೊಡಲು ಅತ್ತೆ ಬಹಳಷ್ಟು ಶ್ರಮ ವಹಿಸಿದ್ದರು. ಈಗ ಆದಿ ಮಾತು ಬದಲಿಸಿರುವುದು ಅವರಿಗೂ ದೊಡ್ಡ ಆಘಾತ ತರಬಹುದು.



ಭಾಗ್ಯಗೆ ಆಸ್ತಿನೇ ಮುಖ ಅಂತ ಕನ್ನಿಕಾ ಎಲ್ಲರ ಮುಂದೆ ಹೇಳಿದಾಗ, ಈ ಒಡವೆ, ಆಸ್ತಿ ಅಂತಸ್ತು ನನಗೆ ಮುಖ್ಯವಲ್ಲ ಎಂದು ಭಾಗ್ಯ ಖಡಕ್‌ ಆಗಿ ಹೇಳಿದ್ದಳು. ಮನೆಯವರೆಲ್ಲರ ಮುಂದೆ ಕನ್ನಿಕಾ ಮುಖಕ್ಕೆ ಹೊಡೆದಂತೆ ಭಾಗ್ಯಾ ಮಾತನಾಡಿದ್ದಳು. ನನ್ನ ಪ್ರೀತಿ ಮತ್ತು ಆಸ್ತಿ ನಡುವೆ ಸಂಘರ್ಷ ಬಂದರೆ, ನನಗೆ ಈ ಆಸ್ತಿ ಅಂತಸ್ತು ಯಾವುದೂ ಬೇಡ ಎಂದು ಆದಿ ಕೂಡ ಹೇಳಿದ್ದ. ಹೀಗಿರುವಾಗ ಏಕಾಏಕಿ ಚೆಂಜ್‌ ಆಗಿದ್ದಾನೆ ಆದಿ.

ಇದನ್ನೂ ಓದಿ: Amruthadhaare Serial: ಕೇಡಿ ಪ್ಲ್ಯಾನ್‌ ಎಲ್ಲಾ ತಲೆಕೆಳಗಾಯ್ತು; ಜೈದೇವ್‌ ಎದುರು ಗೆದ್ದು ಬೀಗಿದ ಮಲ್ಲಿ!

ಭಾಗ್ಯಳ ಮುಂದಿನ ಹಾದಿ ಸುಗಮವಾಗಿರಲಿದೆಯೇ? ಅಥವಾ ಅವಳು ಮತ್ತೆ ತಾಂಡವ್ ಜೊತೆ ಸಂಸಾರ ಮಾಡುತ್ತಾಳಾ ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ. ಇನ್ನೊಂದು ಕಡೆ ತಾಂಡವ್‌ ಶ್ರೇಷ್ಠಾಗೆ ಡಿವೋರ್ಸ್‌ ನೋಟಿಸ್‌ ಕೊಟ್ಟಿದ್ದಾನೆ. ಈ ಧಾರಾವಾಹಿಯು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತದೆ.

Yashaswi Devadiga

View all posts by this author