ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಕೇಡಿ ಪ್ಲ್ಯಾನ್‌ ಎಲ್ಲಾ ತಲೆಕೆಳಗಾಯ್ತು; ಜೈದೇವ್‌ ಎದುರು ಗೆದ್ದು ಬೀಗಿದ ಮಲ್ಲಿ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ( ಕೊನೆಗೂ ಜೈದೇವ್‌ ಫೂಲ್‌ ಆಗಿದ್ದಾನೆ. ಗೌತಮ್‌ ಮುಟ್ಟಿ ನೋಡುಕೊಳ್ಳುವಂತೆ ಚಮಕ್‌ ಕೊಟ್ಟಿದ್ದಾನೆ. ಮಲ್ಲಿ ಮದುವೆ ಕೊನೆಗೂ ನೆರವೇರಿದೆ. ಮಲ್ಲಿ ಸೀದಾ ಜೈದೇವ್‌ ಬಳಿ ಬಂದು ಆವಾಜ್‌ ಕೊಟ್ಟು ಟಕ್ಕರ್‌ ಕೊಟ್ಟಿದ್ದಾಳೆ. ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಎಚ್ಚರಿಕೆಯನ್ನು ಕೂಡ ಜೈದೇವ್‌ಗೆ (Jaidev) ನೀಡಿದ್ದು ತನ್ನ ಮದುವೆಯ ಸುತ್ತ ನಡೆದ ಪೂರ್ತಿ ಡ್ರಾಮಾ ಮಲ್ಲಿಗೆ ಗೊತ್ತಾಗಿದೆ.

ಕೇಡಿ ಪ್ಲ್ಯಾನ್‌ ಪ್ಲಾಪ್‌; ಜೈದೇವ್‌ ಎದುರು ಗೆದ್ದು ಬೀಗಿದ ಮಲ್ಲಿ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Mar 31, 2026 12:50 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಕೊನೆಗೂ ಜೈದೇವ್‌ ಫೂಲ್‌ ಆಗಿದ್ದಾನೆ. ಗೌತಮ್‌ ಮುಟ್ಟಿ ನೋಡುಕೊಳ್ಳುವಂತೆ ಚಮಕ್‌ ಕೊಟ್ಟಿದ್ದಾನೆ. ಮಲ್ಲಿ ಮದುವೆ ಕೊನೆಗೂ ನೆರವೇರಿದೆ. ಮಲ್ಲಿ ಸೀದಾ ಜೈದೇವ್‌ ಬಳಿ ಬಂದು ಆವಾಜ್‌ ಕೊಟ್ಟು ಟಕ್ಕರ್‌ ಕೊಟ್ಟಿದ್ದಾಳೆ. ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಎಚ್ಚರಿಕೆಯನ್ನು ಕೂಡ ಜೈದೇವ್‌ಗೆ (Jaidev) ನೀಡಿದ್ದು ತನ್ನ ಮದುವೆಯ ಸುತ್ತ ನಡೆದ ಪೂರ್ತಿ ಡ್ರಾಮಾ ಮಲ್ಲಿಗೆ ಗೊತ್ತಾಗಿದೆ.

ಭೂಮಿಕಾ ಶಾಕ್

ಮೊದಲಿಗೆ ವಿಷಯ ತಿಳಿದ ಭೂಮಿ ಸೀದಾ ಜೈದೇವ್‌ ಬಳಿ ಬಂದು ತಾನೇ ಮದುವೆ ನಿಲ್ಲಿಸುವುದಾಗಿ ಹೇಳುತ್ತಾಳೆ. ರೌದ್ರಾವತಾರ ಕಂಡು ಜೈದೇವ್ ಟೆನ್ಶನ್ ಆಗಿದ್ದು ಸುನಿಗೆ ಫೋನ್ ಮೇಲೆ ಫೋನ್ ಮಾಡಿದ್ದಾನೆ. ಇಷ್ಟೇ ಅಲ್ಲ ಮಾವ ಲಕ್ಷ್ಮೀಕಾಂತ್ ಕಾವಲಿಗೆ ನಿಯೋಜಿಸಿರುವ ತನ್ನ ರೌಡಿಗಳನ್ನು ಮದುವೆ ಮಂಟಪಕ್ಕೆ ಕಳಿಸಿದ್ದಾನೆ. ಮತ್ತೊಂದು ಕಡೆ ಮದುವೆಯನ್ನು ನಿಲ್ಲಿಸಲೇಬೇಕೆಂದು ಶಪಥ ಮಾಡಿರುವ ಭೂಮಿಕಾಗೆ ಮಾರ್ಗಮಧ್ಯದಲ್ಲಿ ಅಡೆ ತಡೆಗಳು ಎದುರಾಗಿವೆ.

ಇದನ್ನೂ ಓದಿ: Rishab Shetty: ಹುಟ್ಟೂರು ಕೆರಾಡಿಯಲ್ಲಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ! ಡಿವೈನ್ ಸ್ಟಾರ್ ಕನಸು ನನಸು

ಮದುವೆಯ ಸಂಭ್ರಮದ ನಡುವೆ ಆತಂಕ ಗಾಬರಿ ಮಾಡಿದ ಸಮಯದಲ್ಲೇ ಭೂಮಿಕಾ ಮದುವೆ ಮಂಟಪಕ್ಕೆ ಬಂದಿದ್ದು ಭೂಮಿಕಾ ಹಾವ ಭಾವ ನೋಡಿ ಗೌತಮ್‌ಗೆ ಎಲ್ಲಾ ವಿಷಯ ಭೂಮಿಕಾಗೆ ಗೊತ್ತಾಗಿದೆ ಎಂದು ಅರ್ಥ ಆಗಿದೆ. ಇದನ್ನರಿಯದ ಭೂಮಿಕಾ ತನಗೆ ಗೊತ್ತಾದ ಸತ್ಯ ಹೇಳಲು ಮುಂದಾಗಿದ್ದು ನನಗೆಲ್ಲಾ ಗೊತ್ತು ಎಂದು ಗೌತಮ್ ಹೇಳಿದ್ದಾನೆ. ಈ ಮಾತು ಕೇಳಿ ಭೂಮಿಕಾ ಶಾಕ್ ಆಗಿದ್ದಾಳೆ.

ಕೇಡಿ ಪ್ಲಾನ್ ಎಲ್ಲಾ ತಲೆಕೆಳಗಾಯ್ತು!

ಇನ್ನೇನು ಸುನಿಗೆ ಜೈದೇವ್‌ ಕಾಲ್‌ ಮಾಡಿದ್ದಾನೆ. ಸುನಿ ಕೂಡ ತನ್ನ ಪ್ಲ್ಯಾನ್‌ ಬೇರೆ ಎಂದು ಸೀದಾ ಮಲ್ಲಿ ಜೊತೆ ಜೈದೇವ್‌ ಮುಂದೆ ನಿಂತಿದ್ದಾನೆ. ಜೈದೇವ್‌ ಮುಂದೆ ಮಲ್ಲಿ ಡ್ರಾಮ ಮಾಡಿ, ಕಣ್ಣೀರಿಟ್ಟಿದ್ದಾಳೆ. ಆಗ ಜೈದೇವ್‌ ಕೂಡ, ಪ್ರೀತಿನೂ ಇಲ್ಲ ಮಣ್ಣು ಇಲ್ಲ. ಅವನು ಆಡಿದ್ದು ಬರೀ ನಾಟಕ. ನಾನು ಗೆದ್ದೆ ಎಂದು ಜೈದೇವ್‌ ಅಬ್ಬರಿಸಿದ್ದಾನೆ.

ಅದೇ ಕ್ಷಣಕ್ಕೆ ಮಲ್ಲಿ ಸಖತ್‌ ನಗೆಬೀರಿದ್ದಾಳೆ. ಅಂದರೆ ಜೈದೇವ್‌ ಫೂಲ್‌ ಆಗಿದ್ದಾನೆ. ಅದೇ ಹೊತ್ತಿಗೆ ಗೌತಮ್‌ ಹಾಗೂ ಭೂಮಿಕಾ ಬಂದಿದ್ದಾರೆ. ನಿನ್ನನ್ನು ನೀನು ಕಿಲಾಡಿ ಅಂದುಕೊಂಡಿದ್ದೆ. ಆದರೆ ನೀನೆ ದೊಡ್ಡ ಫೂಲ್‌ ಆಗಿಬಿಟ್ಟೆ. ಇನ್ನು ಹೋರಾಡಲ್ಲ. ಏನೇ ಇದ್ದರೂ ನೇರವಾಗಿ ಜಡ್ಜ್‌ಮೆಂಟ್‌ ಕೊಡ್ತೀನಿ ಅಂತ ಗೌತಮ್‌ ಕೂಡ ನೇರವಾಗಿ ಹೇಳಿದ್ದಾನೆ. ಒಟ್ಟಾರೆಯಾಗಿ ಕೇಡಿ ಪ್ಲಾನ್ ಎಲ್ಲಾ ತಲೆಕೆಳಗಾಗಿದೆ.

ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಎಚ್ಚರಿಕೆಯನ್ನು ಕೂಡ ಜೈದೇವ್‌ಗೆ ನೀಡಿದ್ದು ತನ್ನ ಮದುವೆಯ ಸುತ್ತ ನಡೆದ ಪೂರ್ತಿ ಡ್ರಾಮಾ ಮಲ್ಲಿಗೆ ಗೊತ್ತಾಗಿದೆ. ಸದ್ಯ ''ಅಮೃತಧಾರೆ'' ಧಾರಾವಾಹಿ ಕುತೂಹಲ ಕೆರಳಿಸಿದ್ದು, ಮದುವೆಯಾದ ನಂತರ ಮಲ್ಲಿ ಹೇಗೆ ಜೈದೇವ್ ವಿರುದ್ದ ತಿರುಗಿ ಬೀಳ್ತಾಳೆ..? ಗೌತಮ್ ಮತ್ತು ಭೂಮಿಕಾ ಇಬ್ಬರು ಸೇರಿ ಜೈದೇವ್‌ಗೆ ಹೇಗೆ ಬುದ್ಧಿ ಕಲಿಸುತ್ತಾರೆ..? ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: Amruthadhaare Serial: ಜೆಡಿಗೆ ಮಲ್ಲಿಯ ಆವಾಜ್‌; ಸುನಿ ಮುಖವಾಡ ಕಳಚಿ ಬೀಳೋ ಹೊತ್ತಲ್ಲೇ ಎದುರಾಯ್ತು ವಿಘ್ನ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.