ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ (Bhagyalakshmi Serial Kannada) ಧಾರಾವಾಹಿ ರೋಚಕ ತಿರುವು ಕಂಡಿದೆ. ಕೆಲವು ದಿನಗಳಿಂದ ಕಥೆಗಳನ್ನು ಗಮನಿಸಿದ ವೀಕ್ಷಕರಿಗೆ ಧಾರಾವಾಹಿ ಮುಕ್ತಾಯವಾಗುತ್ತೆ ಎಂಬ ಅನುಮಾನಗಳು ಶುರುವಾಗಿವೆ. ಅದರಂತೆ ಈಗ ಹೊಸ ಪ್ರೋಮೋ ಔಟ್ ಆಗಿದೆ. ಮಗಳಿಗೋಸ್ಕರ ಭಾಗ್ಯ, ತಾಂಡವ್‌ನನ್ನು ಮನೆಯೊಳಗೆ ಕರೆಸಿಕೊಂಡಿದ್ದಾಳೆ. ಶ್ರೇಷ್ಠ (Shreshtha) ಈಗ ಬಿಲ್ಡಿಂಗ್‌ನಿಂದ ಕೆಳಗಡೆ ಬೀಳೋ ನಿರ್ಧಾರ ಮಾಡಿದ್ದಾಳೆ. ಹಾಗಾದರೆ ಶ್ರೇಷ್ಠ ಪಾತ್ರ ಅಂತ್ಯವಾಗುತ್ತಾ? ಮುಂದೆನಾಗಲಿದೆ?
ಭಾಗ್ಯಗೆ ಅಚ್ಚರಿ
ತಾಂಡವ್ ಬದಲಾದ ಎಂದರೆ ತಾಯಿ ಸುನಂದಾ ಕೂಡ ನಂಬುತ್ತಿಲ್ಲ. ಆದಿಗೂ ಕೂಡ ತಾಂಡವ್‌ನ ಈ ನಡೆ ಆಶ್ಚರ್ಯ ತಂದಿದೆ. ಶ್ರೇಷ್ಠ ಕೂಡ ಒಂದಿಷ್ಟು ನಾಟಕ ಮಾಡಿದಳು, ಭಾಗ್ಯಗೆ ಬಾಯಿಗೆ ಬಂದಹಾಗೆ ಮಾತನಾಡಿದಳು. ಆದರೂ ಕೂಡ ತಾಂಡವ್ ಮಾತ್ರ ಎಲ್ಲಿಯೂ ಭಾಗ್ಯಳನ್ನು ಬಿಟ್ಟುಕೊಡಲೇ ಇಲ್ಲ.
ಇದನ್ನೂ ಓದಿ: Tanisha Kuppanda: ದರ್ಶನ್ ಹೆಸರಿನಲ್ಲಿ ಅನ್ನ ಸಂತರ್ಪಣೆ, ವಿಶೇಷ ಪೂಜೆ; ತನಿಷಾ ಕುಪ್ಪಂಡ ವಿಡಿಯೋ ವೈರಲ್
ಇದು ಭಾಗ್ಯಗೆ ಅಚ್ಚರಿ ತಂದಿದೆ. ತಂದೆ ಮನೆಯೊಳಗಡೆ ಬಂದಿಲ್ಲ ಅಂದ್ರೆ, ನಾನು ಕೂಡ ಅವರ ಜೊತೆ ಹೋಗ್ತೀನಿ ಎಂದು ತನ್ವಿ ಹಠ ಹಿಡಿದಳು. ಮಗಳನ್ನು ಕಳೆದುಕೊಳ್ಳುವ ಭಯಕ್ಕೆ ಈಗ ಭಾಗ್ಯ ಕೂಡ, ತಾಂಡವ್‌ಗೆ ಮನೆಯೊಳಗಡೆ ಬರೋಕೆ ಓಕೆ ಎಂದಿದ್ದಾಳೆ.
ಭಾಗ್ಯಗೆ ಪ್ರೇಮ ನಿವೇದನೆ
ಭಾಗ್ಯಗೆ ಪ್ರೇಮ ನಿವೇದನೆ ಮಾಡಬೇಕು, ಅವಳನ್ನು ಮದುವೆ ಆಗಬೇಕು ಎಂದು ಆದಿ ಕನಸು ಕಾಣುತ್ತಿದ್ದಾನೆ. ಅತ್ತ ತಾಂಡವ್, ಭಾಗ್ಯ ಬೇಕು ಎಂದು ಪರಿತಪಿಸುತ್ತಿದ್ದಾನೆ. ಅಪ್ಪ-ಅಮ್ಮ ಮೊದಲಿನ ಥರ ಇರಲಿ ಎಂದು ತನ್ವಿ ಬಯಸುತ್ತಿದ್ದಾಳೆ. ಸುನಂದಾ ಬಿಟ್ಟು ಉಳಿದವರು ಕೂಡ ಆದಿ-ಭಾಗ್ಯ ಮದುವೆಯಾಗಿ ಚೆನ್ನಾಗಿರಲಿ ಎಂದು ನೋಡುತ್ತಿದ್ದಾರೆ.
ಇನ್ನು ಮಗಳು ಹಠ ಮಾಡಿದ ಕೂಡಲೇ ಭಾಗ್ಯಗೆ ತಾಂಡವ್ ಕೊಟ್ಟ ನೋವು ಕಾಡಿದೆ. ತಾಂಡವ್‌ನನ್ನು ಮನೆಯೊಳಗಡೆ ಬರೋಕೆ ಓಕೆ ಎಂದು ಮಗಳಿಗೋಸ್ಕರ ಹೇಳಿದ್ದಾಳೆ. ತಾಂಡವ್‌ಗೆ ಮದುವೆ ಆಗಿ ಎರಡು ಮಕ್ಕಳು ಇದೆ ಅಂತ ಗೊತ್ತಿದ್ದರು ಶ್ರೇಷ್ಠಾ, ತಾಂಡವ್ ಮದುವೆ ಆಗಿದ್ದಳು.
ಮಕ್ಕಳು ಮಾತ್ರ ಶ್ರೇಷ್ಠಾಗೆ ಬೇಕಿರಲಿಲ್ಲ. ಈಗ ತಾಂಡವ್ ಕೂಡ ಬಿಟ್ಟು ಹೋದ ಅಂತ ಶ್ರೇಷ್ಠಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಭಾಗ್ಯಳನ್ನು ಚೆನ್ನಾಗಿ ಇರೋಕೆ ಬಿಡೋದಿಲ್ಲ ಎಂದ ಶ್ರೇಷ್ಠಾ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.
ಇದನ್ನೂ ಓದಿ: Salman Khan : ಸಾನ್ವಿ ಸುದೀಪ್ ಕಂಠಕ್ಕೆ ಫಿದಾ ಆದ್ರು ಸಲ್ಮಾನ್ ಖಾನ್; ಪೋಸ್ಟ್‌ನಲ್ಲಿ ಏನಿದೆ?
ಶ್ರೇಷ್ಠ ಈಗ ಬಿಲ್ಡಿಂಗ್‌ನಿಂದ ಕೆಳಗಡೆ ಬೀಳೋ ನಿರ್ಧಾರ ಮಾಡಿದ್ದಾಳೆ. ಹಾಗಾದರೆ ಶ್ರೇಷ್ಠ ಪಾತ್ರ ಅಂತ್ಯ ಆಗುತ್ತಾ? ಭಾಗ್ಯ ಇನ್ನಷ್ಟು ಆದಿ ಕುರಿತಾಗಿ ನಿರ್ಧಾರ ತೆಗೆದುಕೊಳ್ತಾಳ? ಮತ್ತೆ ಆದಿ ಭಾಗ್ಯ ಒಂದಾಗ್ತಾರಾ? ಅನ್ನೋದೇ ವೀಕ್ಷಕರಲ್ಲೊ ಇರೋ ಕುತೂಹಲ.