Tanisha Kuppanda: ದರ್ಶನ್ ಹೆಸರಿನಲ್ಲಿ ಅನ್ನ ಸಂತರ್ಪಣೆ, ವಿಶೇಷ ಪೂಜೆ; ತನಿಷಾ ಕುಪ್ಪಂಡ ವಿಡಿಯೋ ವೈರಲ್
Darshan Birthday: ನಟ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸಖತ್ ಸೆಲೆಬ್ರೇಷನ್ ಮಾಡಿದ್ದರು. ದರ್ಶನ್ ಅವರು ಜೈಲಿನಲ್ಲಿ ಇರುವ ಹಿನ್ನೆಲೆಯಲ್ಲಿ, ಅವರ ಅನುಪಸ್ಥಿತಿಯಲ್ಲಿಯೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದರು. ಅದರಲ್ಲಿ ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿದ್ದರು. ದರ್ಶನ್ ಅವರ ಹೆಸರನ್ನು ಉಗುರಿನ ಮೇಲೆ ಬರೆದುಕೊಂಡು, ಅವರ ಶೀಘ್ರ ಬಿಡುಗಡೆಗಾಗಿ ಹಾರೈಸಿದ್ದಾರೆ. ಇದೀಗ ಈ ಫೋಟೋಗಳು ವೈರಲ್ ಆಗಿವೆ.
ತನಿಷಾ ಕುಪ್ಪಂಡ -
ನಟ ದರ್ಶನ್ (Darshan Birthday) ಅವರ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸಖತ್ ಸೆಲೆಬ್ರೇಷನ್ ಮಾಡಿದ್ದರು. ದರ್ಶನ್ ಅವರು ಜೈಲಿನಲ್ಲಿ ಇರುವ ಹಿನ್ನೆಲೆಯಲ್ಲಿ, ಅವರ ಅನುಪಸ್ಥಿತಿಯಲ್ಲಿಯೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದರು. ಅದರಲ್ಲಿ ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ (tanisha kuppanda) ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿದ್ದರು. ದರ್ಶನ್ ಅವರ ಹೆಸರನ್ನು ಉಗುರಿನ ಮೇಲೆ ಬರೆದುಕೊಂಡು, ಅವರ ಶೀಘ್ರ ಬಿಡುಗಡೆಗಾಗಿ ಹಾರೈಸಿದ್ದಾರೆ. ಇದೀಗ ಈ ಫೋಟೋಗಳು (Photos) ವೈರಲ್ ಆಗಿವೆ.
ಕರಿಯ ಚಿತ್ರ ರೀ-ರಿಲೀಸ್
ದರ್ಶನ್ ಅಭಿನಯದ ಕರಿಯ ಚಿತ್ರ (Kariya Movie) ರೀ-ರಿಲೀಸ್ ಆದಾದಗಲೂ ತನಿಷಾ ಬೆಂಬಲ ನೀಡಿದ್ದರು. ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್, ತನಿಷಾ ಕುಪ್ಪಂಡ, ಡಾಗ ಸತೀಶ್ ಸೇರಿದಂತೆ ಇನ್ನು ಅನೇಕರು ಥಿಯೇಟರ್‌ಗೆ ಹೋಗಿ ಚಿತ್ರ ವೀಕ್ಷಿಸಿ ಸಂಭ್ರಮದ ವಿಡಿಯೋವನ್ನು ಹಂಚಿಕೊಂಡಿದ್ದರು, ದರ್ಶನ್ ಅಭಿನಯದ ಕರಿಯ ಚಿತ್ರ 2003 ರಲ್ಲಿ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಚಿತ್ರದ ಎರಡು ಸಲ ರೀ-ರಿಲೀಸ್ ಆಗಿದೆ. ಮೂರನೇ ಸಲ ಈ ಫೆಬ್ರವರಿ-13 ರಂದು ತೆರೆಗೆ ಬಂದಿತ್ತು.
ಇದನ್ನೂ ಓದಿ: Darshan Birthday: ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್ ವಿಶ್
ದರ್ಶನ್ ಅವರ ಹೆಸರಿನಲ್ಲಿ ಅನ್ನಸಂತರ್ಪಣೆ
ತನಿಷಾ ಕುಪ್ಪಂಡ ಅವರು ಕೂಡ ದರ್ಶನ್ ಅವರ ಅಭಿಮಾನಿ. ಅವರ ಬಿಡುಗಡೆಗಾಗಿ ಹಾರೈಸುತ್ತಿದ್ದಾರೆ. ಪೂಜೆಯ ಬಳಿಕ, ತನಿಷಾ ಅವರು ದರ್ಶನ್ ಅವರ ಹೆಸರಿನಲ್ಲಿ ಅನ್ನಸಂತರ್ಪಣೆಯನ್ನೂ ಮಾಡಿದ್ದಾರೆ. ಉಗುರಿನ ಮೇಲೆ ಅವರು ದರ್ಶನ್ ಎಂದು ಬರೆದಿರುವುದನ್ನು ಕಾಣಬಹುದು. ಆ ಬಳಿಕ ಅವರು ವಿಶೇಷವಾಗಿ ದರ್ಶನ್ ಅವರಿಗೆ ವಿಷ್ ಮಾಡಿದ್ದಾರೆ.
ಇದನ್ನೂ ಓದಿ: Amruthadhaare Serial: ಡುಮ್ಮ ಸರ್ -ಭೂಮಿ ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ!
ದರ್ಶನ್ ಬರ್ತ್‌ಡೇಗೆ , ರಕ್ಷಿತಾ ಹಾಗೂ ಪ್ರೇಮ್ ಕೂಡ ಪೋಸ್ಟ್ ಮೂಲಕ ವಿಶ್ ಮಾಡಿದ್ದರು. ‘ಕಳೆದ ವರ್ಷ ಇದೇ ಸಮಯದಲ್ಲಿ ತೆಗೆದ ಫೋಟೋ. ನನ್ನ ಪ್ರೀತಿ ಪಾತ್ರನಿಗೆ ಜನ್ಮದಿನದ ಶುಭಾಶಯ’ ಎಂದು ರಕ್ಷಿತಾ ವಿಶ್ ಮಾಡಿದ್ದಾರೆ. ಮತ್ತೊಂದು ಇನ್ಸ್ಟಾ ಸ್ಟೋರಿಯಲ್ಲಿ, ‘ನಾನು ನಿನ್ನನ್ನು ದಿನವೂ ಮಿಸ್ ಮಾಡಿಕೊಳ್ಳುತ್ತೇನೆ. ನೀನು ಮತ್ತೆ ಖುಷಿಯಾಗಿ ಇರೋದನ್ನು ನೋಡುವಂತಾಗಲಿ ಎಂದು ಹಾರೈಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದರು.