ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ (Bhagyalakshmi Serial Kannada) ಪ್ರತಿ ದಿನವೂ ಒಂದಲ್ಲ ಒಂದು ಟ್ವಿಸ್ಟ್‌ನಿಂದ ಸಾಗುತ್ತಿದೆ. ಈ ಸೀರಿಯಲ್ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ಭಾಗ್ಯಾ ರಗಡ್ ಆಗಿದ್ದಾಳೆ. ತಾಂಡವ್ನ (Thandav) ಪ್ರತಿಯೊಂದು ನಡೆಯೂ ಈಗ ಭಾಗ್ಯಾನಿಗೆ ಸಂಶಯ ತರಿಸುತ್ತಿದೆ. ಇಷ್ಟು ದಿನ ತಾಳ್ಮೆಯಿಂದಿದ್ದ ಅವಳು, ಈಗ ತಾಳ್ಮೆ ಕಳೆದುಕೊಂಡಿದ್ದಾಳೆ. ಆದರೀಗ ತಾಂಡವ್ ಮುಖವಾಡವೂ ಬಯಲಾಗಿದೆ.
ದ್ವೇಷದ ಜ್ವಾಲಾಮುಖಿ
ಹೊಸ ಪ್ರೋಮೋ ಔಟ್ ಆಗಿದೆ. ಎಷ್ಟು ಸಲ ಕ್ಷಮೆ ಕೇಳಿದೆ. ಆದ್ರೆ ಭಾಗ್ಯ ನಿನ್ನನ್ನು ಮಾತ್ರ ಬಿಡಲ್ಲ ಎಂದು ಭಾಗ್ಯ ಫೋಟೋಗೆ ಬೆಂಕಿ ಹಾಕಿದ್ದಾನೆ. ದ್ವೇಷದಲ್ಲಿ ಅತ್ಯಂತ ಕಿಡಿ ಕಾರುತ್ತಿದ್ದಾನೆ ತಾಂಡವ್. ತಾಂಡವ್ ದ್ವೇಷದ ಜ್ವಾಲಾಮುಖಿ ಹತ್ತಿ ಉರಿಯುತ್ತಿದೆ. ಇನ್ನು ನಿನಗೆ ನರಕ ತೋರಿಸ್ತೀನಿ ಅಂತ ತಾಂಡವ್ ಅಬ್ಬರಿಸಿದ್ದಾನೆ.
ಇದನ್ನೂ ಓದಿ: Sara Ali Khan: ಕೇದಾರನಾಥ, ಬದ್ರಿನಾಥ್ ದೇವಾಲಯಕ್ಕೆ ಸೈಫ್ ಅಲಿ ಖಾನ್ ಪುತ್ರಿ ಸಾರಾಗೆ ಪ್ರವೇಶವಿಲ್ಲ!ಕಾರಣ ಇದು
ಇದಕ್ಕೂ ಮುಂಚೆ ತಾಂಡವ್ ಮನೆಗೆ ಬಂದಿದ್ದಾನೆ. ಮನೆಯೊಳಗೆ ಶಾಂತವಾಗಿ ಕುಳಿತಿದ್ದ ತಾಂಡವ್ಗೆ ಭಾಗ್ಯಾ ದೊಡ್ಡ ಶಾಕ್ ನೀಡಿದ್ದಾಳೆ. ನಿಮಗೆ ಹೇಳಿದ್ದೆ ಅಲ್ವಾ, ಈ ಮನೆ ಕಡೆ ತಲೆ ಹಾಕಬೇಡಿ ಅಂತ? ಮತ್ತೆ ಯಾಕೆ ಬಂದಿರಿ?" ಎಂದು ಕೂಗಾಡಿದ್ದಾಳೆ. ʼʼ ತಾಂಡವ್ನ ಪ್ರತಿಯೊಂದು ನಡೆಯೂ ಈಗ ಭಾಗ್ಯಾನಿಗೆ ಸಂಶಯ ತರಿಸುತ್ತಿದೆ. ಇಷ್ಟು ದಿನ ತಾಳ್ಮೆಯಿಂದಿದ್ದ ಅವಳು, ಈಗ ತಾಳ್ಮೆ ಕಳೆದುಕೊಂಡಿದ್ದಾಳೆ. ಈ ಹಿಂದೆ ಆದ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿರುವು ಸಿಕ್ಕಿದೆ. ತಾಂಡವ್ ಮೇಲೆ ಅನುಮಾನವಿದ್ದರೂ, ಕಿಡ್ನಾಪ್ ಹಿಂದೆ ಇರುವುದು 'ಶ್ರೇಷ್ಠಾ' ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ.
ಶ್ರೇಷ್ಠಾ ಈ ಕೃತ್ಯ ಎಸಗಿದ್ದಾಳೆ ಎಂದು ಭಾಗ್ಯಾ ನೇರವಾಗಿ ಆರೋಪಿಸಿದ್ದಾಳೆ. ಆದರೆ ಮನೆಯವರು ಇದನ್ನು ನಂಬಲು ಸಿದ್ಧರಿಲ್ಲ.
ಶ್ರೇಷ್ಠಾ ಬದಲಾಗಿದ್ದಾಳೆ ಎಂದು ನಂಬಿದ್ದ ಕುಟುಂಬದವರಿಗೆ ಭಾಗ್ಯಾನ ಮಾತು ನುಂಗಲಾರದ ತುತ್ತಾಗಿದೆ. ಇದರಿಂದ ಮನೆಯಲ್ಲಿ ವಾಗ್ವಾದ ಮತ್ತಷ್ಟು ಜೋರಾಗಿದೆ.ವಿಷಯ ಕೈಮೀರಿ ಹೋಗುತ್ತಿರುವುದನ್ನು ಕಂಡು ತಾಂಡವ್ ಮಗಳ ಮೊರೆ ಹೋಗಿದ್ದಾನೆ.
ಇದನ್ನೂ ಓದಿ: Kangana Ranaut: ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!
"ಪಪ್ಪಾ, ಇವರೆಲ್ಲಾ ನಂಬಬೇಕು ಅಂದ್ರೆ ನೀವು ದೇವರ ಮುಂದೆ ಪ್ರಮಾಣ ಮಾಡಬೇಕು" ಎಂದು ಮಗಳು ಹೇಳಿದ್ದಾಳೆ. ಕೊನೆಗೆ ಅನಿವಾರ್ಯವಾಗಿ ತಾಂಡವ್ ದೇವರ ಮುಂದೆ ನಿಂತಿದ್ದಾನೆ. "ಆ ಕಿಡ್ನಾಪ್ಗೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಪ್ರಮಾಣ ಮಾಡಲು ಮುಂದಾಗಿದ್ದಾನೆ. ಆದರೆ ಈ ಸುಳ್ಳು ಪ್ರಮಾಣ ತಾಂಡವ್‌ನ ಮುಖವಾಡ ಕಳಚುವಂತೆ ಮಾಡುತ್ತಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.