ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ (bhagyalakshmi kannada serial) ಕುತೂಹಲ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಅತ್ತೆ ಸೊಸೆಯೇ ಪ್ರಮುಖ ಹೈಲೈಟ್. ಅತ್ತೆ ತನ್ನ ಸೊಸೆಯ ಭವಿಷ್ಯಕ್ಕಾಗಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸದ್ಯ ಆದಿ ಹಾಗೂ ಭಾಗ್ಯ (Adi Bhagya) ಒಂದಾಗುವಂತೆ ಕುಸುಮಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾಳೆ. ಕುಸುಮಾ ತನ್ನ ಸೊಸೆ ಭಾಗ್ಯಳ ಪರವಾಗಿ ನಿಲ್ಲುವ ರೀತಿ ಎಲ್ಲರಿಗೂ ಮಾದರಿಯಾಗಿದೆ. ಈಗ ಇದೇ ಅತ್ತೆ ತನ್ನ ಸೊಸೆಯ ಭವಿಷ್ಯಕ್ಕಾಗಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಆದಿಗೆ ಧೈರ್ಯ
ಸದ್ಯ ಕುಸುಮಾ ತಾನೇ ಮುಂದೆ ನಿಂತು ಆದಿಗೆ ಸಾಥ್ ಕೊಡುತ್ತಿದ್ದಾಳೆ. ಭಾಗ್ಯಾಳಿಗೆ ಪ್ರಪೋಸಲ್ ಮಾಡಲು ಸಪೋರ್ಟ್ ಮಾಡುತ್ತಿದ್ದಾಳೆ. ಭಾಗ್ಯಳಿಗೆ ತನ್ನ ಮನಸ್ಸಿನ ಮಾತನ್ನು ತಿಳಿಸಲು ಆದಿಗೆ ಧೈರ್ಯ ತುಂಬಿದ್ದಾರೆ. ಆದಿ ಹೇಗೆ ಭಾಗ್ಯಳಿಗೆ ತನ್ನ ಪ್ರೀತಿಯನ್ನು ಹೇಳುತ್ತಾನೆ ಎಂಬುದು ಈಗ ಸಸ್ಪೆನ್ಸ್ ಆಗಿದೆ. ಕುಸುಮಾ ಇಟ್ಟ ಈ ಮುಹೂರ್ತ ಇಬ್ಬರ ಜೀವನವನ್ನು ಹೇಗೆ ಬದಲಿಸಲಿದೆ ಎಂದು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಪಕ್ಕಾ ಪ್ಲೇಯರ್; ಶೋಗೆ ನ್ಯಾಯ ಒದಗಿಸುತ್ತ ಇರೋದು ಇವರೇ ಎಂದ ಸೂರಜ್!
ಅತ್ತ ಆದಿಯ ಅಪ್ಪ, ಭಾಗ್ಯಳ ಬಳಿ ಕಂಡು ಕೈಮುಗಿದು ಬೇಡಿಕೊಂಡು ಆದಿಗೆ ಇನ್ನೊಂದು ಮದುವೆಗೆ ಮನವೊಲಿಸು ಎಂದು ಹೇಳಿದ್ದಾನೆ. ಆದಿಯ ಲೈಫ್ ಸೆಟ್ಲ್ ಆಗಬೇಕು ಎಂದರೆ ಆತ ಇನ್ನೊಂದು ಮದುವೆಯಾಗಬೇಕು. ಆತನಿಗೆ ಮದುವೆಗೆ ಮನವೊಲಿಸಲು ನಿನ್ನಿಂದ ಮಾತ್ರ ಸಾಧ್ಯ ಎಂದಿದ್ದಾನೆ.
ಭಾಗ್ಯ ನಿರ್ಧಾರ ಏನು?
ಈಗಾಗಲೇ ಧಾರಾವಾಗಿ ಪ್ರೋಮೋ ಕೂಡ ಔಟ್ ಆಗಿತ್ತು. ತಾಂಡವ್ ಹೆಜ್ಜೆ ಹೆಜ್ಜೆಗೂ ಎಮ್ಮೆ, ಕತ್ತೆ ಎನ್ನುತ್ತಲೇ ಭಾಗ್ಯಳಿಗೆ ಟಾರ್ಚರ್ ಕೊಟ್ಟಿದ್ದಾನೆ. ಅದೆಷ್ಟರಮಟ್ಟಿನ ಟಾರ್ಚರ್ ಎಂದರೆ ವೀಕ್ಷಕರು ಅಯ್ಯೋ ನಿಲ್ಲಿಸಿ ಎನ್ನುವಷ್ಟರ ಮಟ್ಟಿಗೆ ಅತಿರೇಕದ ವರ್ತನೆಯಾಗಿತ್ತು ತಾಂಡವ್ದು. ಎಲ್ಲವೂ ಅಂದುಕೊಂಡಂತೆ ಇಲ್ಲ.
ಏಕೆಂದ್ರೆ ಅತ್ತ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿರೋ ತಾಂಡವ್ ಭಾಗ್ಯಳ ಕಾಲು ಹಿಡಿದು ಕ್ಷಮೆ ಕೋರಿದ್ದಾನೆ. ಎಲ್ಲವನ್ನೂ ಸರಿಮಾಡ್ತೇನೆ. ಕ್ಷಮಿಸಿಬಿಡು ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಹೀಗಾಗಿ ಒಂದು ಕಡೆ ಆದಿ ಅಪ್ಪನ ಮನವಿ, ಇನ್ನೊಂದು ಕಡೆ ತಾಂಡವ್ ಗೋಳಾಟ ಮಧ್ಯೆ ಭಾಗ್ಯ ನಿರ್ಧಾರ ಎನು ಎಂಬುದೇ ಸಸ್ಪೆನ್ಸ್.
ಭಾಗ್ಯಲಕ್ಷ್ಮಿ' ಧಾರಾವಾಹಿ ಈಗ ಕುತೂಹಲದ ಘಟ್ಟ ತಲುಪಿದೆ. ಭಾಗ್ಯ ಕೇವಲ ಗೃಹಿಣಿಯಾಗಿ ಉಳಿಯದೆ, ತನ್ನವರಿಗಾಗಿ ಏನನ್ನಾದರೂ ಮಾಡಲು ಸಿದ್ಧಳಾಗುತ್ತಿದ್ದಾಳೆ. ಪ್ರತಿ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಸಂಭ್ರಮ ಮೂಡಿಬರುತ್ತಿದೆ. ಸಂಚಿಕೆಯಿಂದ ಸಂಚಿಕೆಗೆ ಕಥೆ ರೋಚಕವಾಗುತ್ತಿದೆ.