ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಪಕ್ಕಾ ಪ್ಲೇಯರ್; ಶೋಗೆ ನ್ಯಾಯ ಒದಗಿಸುತ್ತ ಇರೋದು ಇವರೇ ಎಂದ ಸೂರಜ್‌!

Gilli Nata: ಸೂರಜ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಷ್ಟು ದಿನ ಇದ್ದರು. ಬಿಗ್​ ಬಾಸ್​ನಿಂದ ಎಲಿಮಿನೇಟ್ ಆಗಿ ಆಚೆ ಬಂದಿರುವ ಸೂರಜ್ ಸಿಂಗ್, ವಿಶ್ವವಾಣಿ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಬಿಗ್​ಬಾಸ್ ಮನೆಯಲ್ಲಿನ ಅನುಭವಗಳನ್ನು ಹಂಚಿಕೊಂಡರು. ಹಾಗೆ ಈ ಸೀಸನ್​ನಲ್ಲಿ ಗಿಲ್ಲಿ ಅವರು ಬಿಗ್​ಬಾಸ್​​​ ಗೆಲ್ಲಬಹುದು ಎಂದಿದ್ದಾರೆ

ಗಿಲ್ಲಿ ಪಕ್ಕಾ ಪ್ಲೇಯರ್! ಸೂರಜ್‌ ರಿಯಾಕ್ಷನ್‌ ಏನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 30, 2025 9:04 AM

ಸೂರಜ್ (Sujar Singh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (Bigg Boss Kannada 12) ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಷ್ಟು ದಿನ ಇದ್ದರು. ಬಿಗ್​ ಬಾಸ್​ನಿಂದ ಎಲಿಮಿನೇಟ್ (Eliminate) ಆಗಿ ಆಚೆ ಬಂದಿರುವ ಸೂರಜ್ ಸಿಂಗ್, ವಿಶ್ವವಾಣಿ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಬಿಗ್​ಬಾಸ್ ಮನೆಯಲ್ಲಿನ ಅನುಭವಗಳನ್ನು ಹಂಚಿಕೊಂಡರು. ಹಾಗೆ ಈ ಸೀಸನ್​ನಲ್ಲಿ ಗಿಲ್ಲಿ (Gilli Nata) ಅವರು ಬಿಗ್​ಬಾಸ್​​​ ಗೆಲ್ಲಬಹುದು ಎಂದಿದ್ದಾರೆ .

ಒಂದು ಗುಂಪಿಗೆ ಮಾತ್ರ ಸೀಮಿತ ಅನ್ನೋ ಥರ ಇತ್ತು

ಸೂರಜ್‌ ಅಂದರೆ ಒಂದು ಗುಂಪಿಗೆ ಮಾತ್ರ ಸೀಮಿತ ಅನ್ನೋ ಥರ ಇತ್ತು. ಅಶ್ವಿನಿ, ರಾಶಿಕಾ ಹೀಗೆ ಒಂದೇ ಗುಂಪಿನ ಜೊತೆ ಇರ್ತಾರೆ ಅನ್ನೋ ಭಾವನೆ ಇತ್ತು. ಆದ್ರೆ ಹಾಗೆ ನಾನು ಇರಲಿಲ್ಲ. ಪ್ರತಿ ಸಲ ಸುದೀಪ್‌ ಅವರು ಹೇಳಿದಾಗ ಸೀರೆಯೆಸ್‌ ಆಗಿ ತೆಗೋತ್ತಿದ್ದೆ. ನಾನು ಕೆಲವು ಜನರ ಜೊತೆ ಮಾತ್ರ ಇರುತ್ತಿದ್ದೆ ಎಂದು ಅಭಿಪ್ರಾಯ ಇತ್ತು. ಇನ್ನು ಬೇರೆ ಅವರ ಜೊತೆ ಮಿಂಗಲ್‌ ಆದ್ರೂ ಮಾಡ್ತಾ ಇರಲಿಲ್ಲ. ಮಿಂಗಲ್‌ ಆಗೋದು ನನಗೆ ತುಂಬಾ ಕಷ್ಟ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ! ಬಿಗ್‌ಬಾಸ್‌ ಯಾರೇ ಗೆದ್ರೂ ನಾನು ಒಪ್ಪಲ್ಲ; ಮಾಳು

ಗಿಲ್ಲಿ ಪಕ್ಕಾ ಪ್ಲೇಯರ್!

ಒಳಗಿದ್ದಾಗಲೇ ಗಿಲ್ಲಿ ಕ್ರೇಜ್‌ ಬಗ್ಗೆ ಗೊತ್ತಾಯ್ತು. ಅದೇ ಎಲ್ಲರ ಮನೆಯವರು ಬಂದಾಗಲೂ ಗಿಲ್ಲಿ ಅವರನ್ನು ಸ್ಪೆಷಲ್‌ ಆಗಿ ಮಾತಾಡಿಸ್ತಾ ಇದ್ದರು. ಮೊದಲಿಂದಲೂ ಚೆಂದವಾಗಿ ಆಡಿಕೊಂಡು ಬರ್ತಾ ಇದ್ದರು. ಗಿಲ್ಲಿ ಅಂದರೆ ಪ್ಲೇಯರ್‌. ಗಿಲ್ಲಿ ವಿರುದ್ಧ ಎಷ್ಟೋ ಸಲ ನಾನು ಹೋಗಿದ್ದೆ. ಅವನ ಮಾತೇ ಅವನ ಅಸ್ತ್ರ. ಧನುಷ್‌ ಅವರೆಲ್ಲ ಟಾಸ್ಕ್‌ ಚೆನ್ನಾಗಿ ಮಾಡ್ತಾರೆ. ಆದರೆ ಗಿಲ್ಲಿ ಮಾತಲ್ಲಿ ಗೆಲ್ತಾನೆ. ಯೋಚನೆ ಮಾಡೋ ಒಳಗೆ ಅವನು ಪಂಚ್‌ ಕೊಡ್ತಾ ಇದ್ದ ಎಂದಿದ್ದಾರೆ.



ಗಿಲ್ಲಿ ಯಾರ ಮಧ್ಯೆನೂ ಸಿಲುಕಿ ಹಾಕಿಕೊಳ್ಳಲ್ಲ. ಗಿಲ್ಲಿ ಹಾಗೂ ರಕ್ಷಿತಾ ತುಂಬಾ ಒಳ್ಳೆಯ ಫ್ರೆಂಡ್ಸ್‌. ಗೇಮ್‌ ಸ್ಟ್ರಾಂಗ್‌ ಇರೋದು ಗಿಲ್ಲಿದೆ. ಗಿಲ್ಲಿಂದ ಕಾವ್ಯ ಅಂತಾನೇ ಹೇಳೋದು. ಫ್ಯಾಮಿಲಿ ವೀಕ್‌ ಗಿಲ್ಲಿಗೆ ಪ್ಲಸ್‌ ಆಯ್ತು ಎಂದಿದ್ದಾರೆ. ಸೂರಜ್‌ ಗಿಲ್ಲಿ ಜೊತೆಗೆ ಜೊತೆಗೆ ರಾಶಿಕಾ ಶೆಟ್ಟಿಯ ಹೆಸರನ್ನೂ ಹೇಳಿದ್ದು, ಇವರು ವಿನ್ನರ್ ಆಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಮನೆಯ ಕ್ಯಾಪ್ಟನ್‌ ಆಗಿರುವುದರಿಂದ ಮನೆಯ ಸದಸ್ಯರನ್ನು ನಾಮಿನೇಟ್‌ ಮಾಡುವ ಅಧಿಕಾರವನ್ನು ಗಿಲ್ಲಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಮಾಳು ಮನೆಗೆ ಹೋಗೋಕೆ ರಕ್ಷಿತಾನೆ ಕಾರಣ; ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ!

ಮನೆಯ ಒಂದೊಂದು ಜೋಡಿಯ ವಾದ ಪ್ರತಿವಾದವನ್ನು ಆಲಿಸಿ, ಅದರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಹೋಗುವಂತೆ ನಾಮಿನೇಟ್‌ ಮಾಡುವ ಅಧಿಕಾರವನ್ನು ಬಿಗ್ ಬಾಸ್‌ ಗಿಲ್ಲಿಗೆ ನೀಡಲಾಗಿದೆ.