ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bhagyalakshmi Serial: ತನ್ವಿನ ಮದುವೆಗೆ ಒಪ್ಪಿಸಿರೋ ತಾಂಡವ್‌ನ ಪ್ಲ್ಯಾನ್‌ ಭಾಗ್ಯಗೆ ಅರ್ಥವಾಗುತ್ತಾ?

Bhagyalakshmi Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಟ್ವಿಸ್ಟ್‌ನಿಂದ ಸಾಗುತ್ತಿದೆ. ಮಕ್ಕಳ ಮನಸ್ಸು ಬಹಳ ಮೃದುವಾಗಿರುತ್ತದೆ. ಅದನ್ನೇ ತಾಂಡವ್ ಬಂಡವಾಳ ಮಾಡಿಕೊಂಡಿದ್ದಾನೆ. ತನ್ವಿಯನ್ನು ಭಾಗ್ಯಾಳ ವಿರುದ್ಧ ಎತ್ತಿಕಟ್ಟುವಲ್ಲಿ ಅವನು ಯಶಸ್ವಿಯಾಗುತ್ತಿದ್ದಾನೆ. ಇದರಿಂದ ಭಾಗ್ಯಾ (Bhagya Tanvi) ಮತ್ತು ತನ್ವಿ ನಡುವಿನ ಸಂಬಂಧ ಹಾಳಾಗುತ್ತಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ (Bhagyalakshmi Serial) ಪ್ರತಿ ದಿನವೂ ಒಂದಲ್ಲ ಒಂದು ಟ್ವಿಸ್ಟ್‌ನಿಂದ ಸಾಗುತ್ತಿದೆ. ಮಕ್ಕಳ ಮನಸ್ಸು ಬಹಳ ಮೃದುವಾಗಿರುತ್ತದೆ. ಅದನ್ನೇ ತಾಂಡವ್ ಬಂಡವಾಳ ಮಾಡಿಕೊಂಡಿದ್ದಾನೆ. ತನ್ವಿಯನ್ನು ಭಾಗ್ಯಾಳ ವಿರುದ್ಧ ಎತ್ತಿಕಟ್ಟುವಲ್ಲಿ ಅವನು ಯಶಸ್ವಿಯಾಗುತ್ತಿದ್ದಾನೆ. ಇದರಿಂದ ಭಾಗ್ಯಾ (Bhagya Tanvi) ಮತ್ತು ತನ್ವಿ ನಡುವಿನ ಸಂಬಂಧ ಹಾಳಾಗುತ್ತಿದೆ.

ತಾಂಡವ್‌ ದ್ವೇಷದ ಜ್ವಾಲಾಮುಖಿ

ದ್ವೇಷದಲ್ಲಿ ಅತ್ಯಂತ ಕಿಡಿ ಕಾರುತ್ತಿದ್ದಾನೆ ತಾಂಡವ್‌. ತಾಂಡವ್‌ ದ್ವೇಷದ ಜ್ವಾಲಾಮುಖಿ ಹತ್ತಿ ಉರಿಯುತ್ತಿದೆ. ಇನ್ನು ನಿನಗೆ ನರಕ ತೋರಿಸ್ತೀನಿ ಅಂತ ತಾಂಡವ್‌ ಅಬ್ಬರಿಸಿದ್ದಾನೆ. ತಾಂಡವ್ನ ಪ್ರತಿಯೊಂದು ನಡೆಯೂ ಈಗ ಭಾಗ್ಯಾನಿಗೆ ಸಂಶಯ ತರಿಸುತ್ತಿದೆ.

ಇದನ್ನೂ ಓದಿ: Amruthadhaare Serial: ಬೆಂಕಿಯಾದ ಭೂಮಿ ಎದುರು ಸುಟ್ಟು ಬೂದಿಯಾಗ್ತಾನಾ ಜೇಡಿ? ರೋಚಕ ಸತ್ಯದ ಅನಾವರಣ!

ಇಷ್ಟು ದಿನ ತಾಳ್ಮೆಯಿಂದಿದ್ದ ಅವಳು, ಈಗ ತಾಳ್ಮೆ ಕಳೆದುಕೊಂಡಿದ್ದಾಳೆ. ಭಾಗ್ಯಾ ಮತ್ತು ತಾಂಡವ್ ನಡುವಿನ ಜಗಳ ಈಗ ಮನೆಯ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ತಾಂಡವ್ ತನ್ನ ಸ್ವಾರ್ಥಕ್ಕಾಗಿ ಈಗ ಸ್ವಂತ ಮಗಳನ್ನೇ ದಾಳವಾಗಿ ಬಳಸಿಕೊಳ್ಳುತ್ತಿದ್ದಾನೆ.

ತಾಂಡವ್ ತನ್ನ ಕೆಟ್ಟ ಬುದ್ಧಿಯನ್ನು ಬಿಟ್ಟಿಲ್ಲ. ಮಗಳು ತನ್ವಿಯನ್ನು ತನ್ನ ಕಡೆಗೆ ಸೆಳೆದುಕೊಂಡು ಭಾಗ್ಯಾಗೆ ಶಾಕ್ ನೀಡಿದ್ದಾನೆ. ಭಾಗ್ಯಾಳನ್ನು ಸೋಲಿಸಲು ಅವನು ಹೊಸ ದಾರಿ ಹುಡುಕಿದ್ದಾನೆ.

ಅಪ್ಪನ ಪರ ತನ್ವೀ

ತನ್ವಿಗೆ ಇಲ್ಲದ ಸಲ್ಲದ ಮಾತುಗಳನ್ನು ಹೇಳಿ ಅವಳನ್ನು ದಾರಿ ತಪ್ಪಿಸುತ್ತಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಕಂಡು ಭಾಗ್ಯಾ ಬೆಚ್ಚಿ ಬಿದ್ದಿದ್ದಾಳೆ. ಭಾಗ್ಯಾ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ತನ್ವಿಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಚಿಂತೆ ಅವಳನ್ನು ಕಾಡುತ್ತಿದೆ. ತನ್ವಿ ಮೊದಲೆಲ್ಲಾ ಅಮ್ಮನ ಮಾತನ್ನು ಕೇಳುತ್ತಿದ್ದಳು. ಆದರೆ ಈಗ ತಾಂಡವ್ ಮಾತಿಗೆ ಮರುಳಾಗಿದ್ದಾಳೆ. ಅಪ್ಪ ಹೇಳಿದ್ದೇ ಸರಿ ಎಂದು ವಾದ ಮಾಡುತ್ತಿದ್ದಾಳೆ.

ತಾಂಡವ್ ತನ್ನ ಹಠಕ್ಕಾಗಿ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾನೆ. ಭಾಗ್ಯಾ ಈ ಸಂಕಷ್ಟದಿಂದ ಹೇಗೆ ಪಾರಾಗುತ್ತಾಳೆ?ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.



ಆದಿ ಜೊತೆ ಭಾಗ್ಯ ಮದುವೆಗೆ ಒಪ್ಪಿದ ತಾಂಡವ್‌

ಶಾಕ್ ನೀಡುವ ವಿಷಯವೆಂದರೆ ತಾಂಡವ್ ನಡೆ. ಕುಸುಮಾ ನಿರ್ಧಾರ ಕೇಳಿದ ತಾಂಡವ್, "ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ, ಈ ಮದುವೆ ನಡೆದೇ ನಡೆಯುತ್ತೆ" ಎಂದು ಗಟ್ಟಿಯಾಗಿ ಹೇಳುತ್ತಾನೆ.

ಇದನ್ನೂ ಓದಿ:Rishab Shetty: 'ಧುರಂಧರ್ 2' ಹಾಡಿ ಹೊಗಳಿದ ರಿಷಬ್ ಶೆಟ್ಟಿ!

"ಈ ಮದುವೆಯನ್ನು ನಾನೇ ಮುಂದೆ ನಿಂತು ಮಾಡಿಸ್ತೀನಿ" ಎಂದು ಅಬ್ಬರಿಸಿದ್ದಾನೆ. ತಾಂಡವ್ ಹೀಗೆ ಹೇಳುತ್ತಿರುವುದು ನೋಡಿ ಮನೆಯವರಿಗೆ ಮಾತ್ರವಲ್ಲದೆ ಪ್ರೇಕ್ಷಕರಿಗೂ ಅಚ್ಚರಿಯಾಗಿದೆ. ಮುಂದೆ ತಾಂಡವ್‌ ಏನೆಲ್ಲ ಪ್ಲ್ಯಾನ್‌ ಮಾಡಲಿದ್ದಾನೆ ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಈ ಧಾರಾವಾಹಿಯು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತದೆ.

Yashaswi Devadiga

View all posts by this author