Amruthadhaare Serial: ಬೆಂಕಿಯಾದ ಭೂಮಿ ಎದುರು ಸುಟ್ಟು ಬೂದಿಯಾಗ್ತಾನಾ ಜೇಡಿ? ರೋಚಕ ಸತ್ಯದ ಅನಾವರಣ!
Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಮಲ್ಲಿ ಮದುವೆ ದಿನವೇ ಜೈದೇವ್ ಕುತಂತ್ರ ಗೌತಮ್ ಹಾಗೂ ಭೂಮಿ ಮುಂದೆ ಬಟಾಬಯಲಾಗಿದೆ. ಭೂಮಿ ಕೆಂಡ ಆಗಿದ್ದಾಳೆ. ಬೆಂಕಿಯಾದ ಭೂಮಿ ಎದುರು ಕೇಡಿ ಜೇಡಿ ಸುಟ್ಟು ಹೋಗೋದು ಗ್ಯಾರಂಟಿ ಆದಂತಿದೆ. ಗೌತಮ್ ಮುಂದಿನ ನಡೆಯೇನು?
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಮಲ್ಲಿ ಮದುವೆ ದಿನವೇ ಜೈದೇವ್ ಕುತಂತ್ರ ಗೌತಮ್ ಹಾಗೂ ಭೂಮಿ ಮುಂದೆ ಬಟಾಬಯಲಾಗಿದೆ. ಭೂಮಿ (Bhoomika) ಕೆಂಡ ಆಗಿದ್ದಾಳೆ. ಬೆಂಕಿಯಾದ ಭೂಮಿ ಎದುರು ಕೇಡಿ ಜೇಡಿ (KD JD) ಸುಟ್ಟು ಹೋಗೋದು ಗ್ಯಾರಂಟಿ ಆದಂತಿದೆ. ಗೌತಮ್ ಮುಂದಿನ ನಡೆಯೇನು?
ಇಡೀ ಕಥೆಯ ಸೂತ್ರಧಾರಿ ಜೈದೇವ್
ಮಲ್ಲಿ ಮದುವೆ ಸಂಭ್ರಮ ಜೋರಾಗಿಯೇ ಇತ್ತು. ಆದರೆ ತಾನು ಮದುವೆಯಾಗುತ್ತಿರುವ ಹುಡುಗ ಸುನಿ ಬೇರೆ ಯಾರು ಅಲ್ಲ ಬದಲಿಗೆ ತನ್ನ ಗಂಡ ಜೈದೇವ್ ನ ಪೈಲ್ವಾನ್ ಎನ್ನುವ ವಿಷಯ ಮಲ್ಲಿಗೆ ಗೊತ್ತಿಲ್ಲ. ಈ ಮದುವೆಯ ಸಂಪೂರ್ಣ ಪ್ಲ್ಯಾ ನಿಂಗ್ ಜೈದೇವ್ ಎನ್ನುವುದು ಕೂಡ ಗೌತಮ್ ಮತ್ತು ಭೂಮಿಕಾಗೆ ಗೊತ್ತಿರಲಿಲ್ಲ.
ಇದನ್ನೂ ಓದಿ: Dhurandhar 2 movie : 300 ಕೋಟಿ ರೂಪಾಯಿ ಮೀರಿದ ಗಳಿಕೆ; 'ಧುರಂಧರ್' 2 ಸುನಾಮಿ!
ಮಲ್ಲಿ ಮದುವೆಗೆ ಪಾರ್ಥ ಹಾಗೂ ಅಪೇಕ್ಷಾ ಕೂಡ ಹೋಗುತ್ತಿರುವುದು ಮಾವ ಲಕ್ಷ್ಮೀಕಾಂತ್‌ನಿಂಗೆ ಗೊತ್ತಾಯ್ತು. ಅವರ ಬಳಿ ಮಾತನಾಡಿರೋದನ್ನ ದಿಯಾ ಕೇಳಿಸಿಕೊಂಡು ಶಾಕ್ ಆಗಿದ್ದಾಳೆ. ಗಾಬರಿಯಲ್ಲಿಯೇ ಜೈದೇವ್ ಬಳಿ ಈ ವಿಚಾರ ಚರ್ಚೆ ಮಾಡಿದ್ದಾಳೆ. ಇಡೀ ಕಥೆಯ ಸೂತ್ರಧಾರಿ ಎನ್ನುವ ವಿಚಾರ ದಿಯಾಗೆ ಗೊತ್ತಿಲ್ಲ. ಹೀಗಾಗಿ ದಿಯಾ ಹೇಳಿದ ಸುದ್ದಿ ಕೇಳಿ ಜೈದೇವ್ ಸಮಾಧಾನವಾಗಿದ್ದಾನೆ. ಮದುವೆ ವಿಷಯ ನನಗೆ ಗೊತ್ತು ಇಷ್ಟೇ ಅಲ್ಲ ಮದುವೆಯಾಗುತ್ತಿರುವ ಹುಡುಗ ಕೂಡ ನನಗೆ ಗೊತ್ತು ಎಂದು ಹೇಳಿದ್ದಾನೆ.
ಮದುವೆ ಸಂಭ್ರಮದಲ್ಲಿ ರೋಚಕ ಸತ್ಯದ ಅನಾವರಣ!
ಮಾವನೇ ಗೌತಮ್ ಬಳಿ ಎಲ್ಲ ಸತ್ಯಗಳನ್ನು ಹೇಳ್ತಾನೆ ಅಂದುಕೊಂಡಿದ್ದರು ವೀಕ್ಷಕರು. ಆದರೆ ಆಗಿದ್ದೇ ಬೇರೆ. ಪಾರ್ಥ ಸುನಿ ಕಂಡೊಡನೆ ಜೈದೇವ್ ಬಳಿ ಸುನಿ ಕ್ಲೋಸ್ ಆಗಿರೋ ಬಗ್ಗೆ ಗೌತಮ್‌ಗೆ ಹೇಳಿದ್ದಾನೆ. ಜೈದೇವ್ ಜೊತೆಗೆ ಸುನಿ ಕೆಲಸ ಮಾಡ್ತಿದ್ದಾನೆ ಎಂದಿದ್ದಾನೆ. ಇನ್ನೊಂದು ಕಡೆ ಅಪ್ಪು ಭೂಮಿ ಬಳಿ ಸುನಿ ಬಗ್ಗೆ ರಿವೀಲ್ ಮಾಡಿದ್ದಾನೆ. ಸುನಿ ತನ್ನ ಮೊಬೈಲ್‌ನಲ್ಲಿ ಜೈದೇವ್‌ನನ್ನು ಬಾಸ್ ಅಂತ ಸೇವ್ ಮಾಡಿಕೊಂಡಿದ್ದಾರೆ ಎಂದಿದ್ದಾನೆ. ಅಲ್ಲಿಗೆ ಸುನಿಗೂ ಹಾಗೂ ಜೈದೇವ್‌ಗೂ ಲಿಂಕ್ ಇದೆ ಅನ್ನೋದು ಭೂಮಿಗೆ ಗೊತ್ತಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಭೂಮಿ ನೇರವಾಗಿ ಜೈದೇವ್ ಬಳಿ ಹೋಗಿದ್ದಾಳೆ. ʻನಿಮಗೆ ಮಾನ ಮರ್ಯಾದೇ ಇಲ್ವಾ? ಎದುರುಗಡೆ ನಿಂತು ಏನು ಬೇಕಾದರೂ ಫೇಸ್ ಮಾಡ್ತಾನೆ. ಇನ್ನೊಂದು ಗಂಡಸನ್ನ ಹಿಂದೆ ಬಿಟ್ಟೋರಿಗೆ ಗಂಡಸು ಅನ್ನಲ್ಲʼ ಎನ್ನುತ್ತಾಳೆ. ಭೂಮಿ ಮಾತಿಗೆ ಜೈದೇವ್ ಕೂಡ ಅಬ್ಬರಿಸಿದ್ದಾನೆ. ಆಗ ಭೂಮಿ, ʻನೀನು ಏನು ಮದುವೆ ನಿಲ್ಲಿಸೋದು ನಾನೆ ನಿಲ್ಲಿಸುತ್ತೀನಿʼ ಅಂತ ಜೈದೇವ್ ಮುಂದೆಯೇ ಭೂಮಿ ಶಪಥ ಮಾಡಿದ್ದಾಳೆ.
ಮುಂದೆ ಸುನಿ ಮಲ್ಲಿಗೆ ತಾಳಿ ಕಟ್ಟುತ್ತಾನಾ? ಅಥವಾ ಗೌತಮ್ ಈ ಬಗ್ಗೆ ನಿರ್ಧಾರ ಏನು? ಜೈದೇವ್‌ನ ಈ ಬಾರಿ ಗೌತಮ್ ಬಿಡ್ತಾನಾ? ಸತ್ಯ ಗೊತ್ತಾದ ಮೇಲೂ ಕೂಡ ಮಲ್ಲಿಯ ಹೃದಯ ಮತ್ತೆ ನುಚ್ಚು ನೂರಾಗಬಾರದು ಎಂದು ಗೌತಮ್ ಎಲ್ಲವನ್ನೂ ಸಹಿಸಿಕೊಂಡು ಮದುವೆ ಮಾಡಿಸುತ್ತಾನಾ..? ಅನ್ನೋದು ಇಂದಿನ ಸಂಚಕೆಯಲ್ಲಿ ಗೊತ್ತಾಗಲಿದೆ. ''ಅಮೃತಧಾರೆ'' ಸದ್ಯ ಕುತೂಹಲದ ಹಂತವನ್ನು ತಲುಪಿದೆ.
ಇದನ್ನೂ ಓದಿ: Ranveer Singh: ‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರ ಧ್ವಂಸ! ಏನಿದು ಪ್ರಕರಣ?
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.