ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhavya Gowda: ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?

ಭವ್ಯಾ ಗೌಡ ಯಾವುದೇ ಸೀರಿಯಲ್ನಲ್ಲಿ ನಟಿಸುತ್ತಿಲ್ಲ. ಸಿನಿಮಾ ಆಫರ್ ಬಂದರೂ ಅದಕ್ಕೆ ಒಪ್ಪಿಗೆ ನೀಡಿದ ಬಗ್ಗೆ ಅಪ್ಡೇಟ್ ಇಲ್ಲ. ಬಿಬಿಕೆ 11ನ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲದರ ಮಧ್ಯೆ ಭವ್ಯಾ ಗೌಡ ಒಂದು ಫೋಟೋ ಹಂಚಿಕೊಂಡಿದ್ದು ಸಂಚಲನ ಸೃಷ್ಟಿಸಿದೆ.

ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?

Prabhudeva and Bhavya Gowda

Profile Vinay Bhat Mar 19, 2025 7:37 AM

ಗೀತಾ ಸೀರಿಯಲ್​ ಮೂಲಕ ಸಖತ್ ಫೇಮಸ್​ ಆಗಿದ್ದ ನಟಿ ಭವ್ಯಾ ಗೌಡ (Bhavya Gowda) ಬಿಗ್ ಬಾಸ್​ಗೆ ಬಂದು ತಮ್ಮ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ಭವ್ಯಾ ಫಿನಾಲೆವರೆಗೂ ಬಂದಿದ್ದರು. ಈಗ ಇವರ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಆದರೆ, ಬಿಗ್ ಬಾಸ್ ಮುಗಿದ ಬಳಿಕ ಇವರ ಮುಂದಿನ ನಡೆ ಏನು ಎಂಬುದು ಎಲ್ಲರಿಗೂ ಕುತೂಹಲ ಮೂಡಿತ್ತು. ಈ ಬಗ್ಗೆ ಇದುವರೆಗೆ ಇವರು ಯಾವುದೇ ಹಿಂಟ್ ಕೊಟ್ಟಿಲ್ಲ.

ಭವ್ಯಾ ಗೌಡ ಯಾವುದೇ ಸೀರಿಯಲ್​ನಲ್ಲಿ ನಟಿಸುತ್ತಿಲ್ಲ. ಸಿನಿಮಾ ಆಫರ್ ಬಂದರೂ ಅದಕ್ಕೆ ಒಪ್ಪಿಗೆ ನೀಡಿದ ಬಗ್ಗೆ ಅಪ್ಡೇಟ್ ಇಲ್ಲ. ಬಿಬಿಕೆ 11ನ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಭವ್ಯಾ ಇದರಲ್ಲೂ ಇಲ್ಲ. ಹೀಗಾಗಿ ಭವ್ಯಾ ಗೌಡ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಪ್ರಶ್ನೆಗಳಿವೆ. ಇವೆಲ್ಲದರ ಮಧ್ಯೆ ಭವ್ಯಾ ಗೌಡ ಒಂದು ಫೋಟೋ ಹಂಚಿಕೊಂಡಿದ್ದು ಸಂಚಲನ ಸೃಷ್ಟಿಸಿದೆ.

ಭವ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಭವ್ಯಾ ಅವರು ಪ್ರಭುದೇವ ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಕ್ಕೆ ‘ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಯಿತು ಸರ್’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಗಾಡ್ ಫಾದರ್ ಆಫ್ ಡ್ಯಾನ್ಸ್ ಎಂಬ ಹ್ಯಾಶ್​ಟ್ಯಾಗ್ ಬಳಸಿದ್ದಾರೆ. ಸದ್ಯ ಭವ್ಯಾ ಅವರು ಪ್ರಭುದೇವ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಅಥವಾ ಯಾವುದಾದರು ಡ್ಯಾನ್ಸ್ ಪ್ರೊಗ್ರಾಂನಲ್ಲಿ ಈ ಫೋಟೋ ತೆಗೆದಿದ್ದ ಎಂದು ಅಭಿಮಾನಿಗಳು ತಲೆಗೆ ಹುಳಬಿಟ್ಟುಕೊಂಡಿದ್ದಾರೆ.

ಸದ್ಯದಲ್ಲೇ ಭವ್ಯಾ ಗೌಡ ಮದುವೆ?:

ಇತ್ತೀಚೆಗಷ್ಟೆ ಕನ್ನಡ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಪ್ರೀತಿಸಿದ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭಸಮಾರಂಭಕ್ಕೆ ಭವ್ಯಾ ಗೌಡ, ಅನುಷಾ ರೈ ಸೇರಿದಂತೆ ಕೆಲ ಬಿಗ್ ಬಾಸ್ ಸ್ಪರ್ಧಿಗಳು ಬಂದಿದ್ದರು. ಇದೇ ಸಂದರ್ಭ ಭವ್ಯಾ ಗೌಡ ಮದುವೆ ಬಗ್ಗೆಯೂ ವದಂತಿ ಹಬ್ಬಿದೆ. ಈ ಬಗ್ಗೆ ಸ್ವತಃ ರಂಜಿತ್ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ನನ್ನದು ಮಗಿಯಿತು, ಮುಂದೆ ಭವ್ಯಾ ಗೌಡ ಅವರ ಮದುವೆ. ಭವ್ಯ ಕೂಡ ರೆಡಿಯಾಗುತ್ತಿದ್ದಾರೆ. ಹುಡುಗನಿಗೂ ಕೇಳಿದ್ದೇನೆ ಎಂದಿದ್ದಾರೆ. ಈ ವೇಳೆ ಹುಡುಗ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಂಜಿತ್, ಇನ್ನೂ ಹುಡುಕುತ್ತಿದ್ದೇವೆ. ಇವರಿಗೆ ಹುಡುಕ ಬೇಕು ಅಂದರೆ ಅವನು ಇನ್ನೂ ನೆಕ್ಸ್ಟ್‌ ಲೆವೆಲ್‌ ರೌಡಿಯಾಗಿರಬೇಕು. ಇಬ್ಬರೂ ಹೊಡೆದಾಡಿಕೊಂಡಿರಬೇಕು ಎಂದು ತಮಾಷೆಯಾಗಿ ಹೇಳಿದ್ದರು.

Shishir Shastry: ಮುಖಕ್ಕೆ ಹೊಡೀತೀನಿ: ಐಶ್ವರ್ಯಾ ಎದುರೇ ಶಿಶಿರ್​ಗೆ ವಾರ್ನ್ ಮಾಡಿದ ಪ್ರಥಮ್