ಈಗಾಗಲೇ ಧನುಷ್ ಅವರು ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಈ ವಾರ ಬಿಗ್ ಬಾಸ್ ಮಜವಾದ ಟಾಸ್ಕ್‌ವನ್ನ ನೀಡಿದ್ದರು. ವೀಕೆಂಡ್ ಬಂದ್ರೆ ಸಾಕು ಕಿಚ್ಚನ ಪಂಚಾಯ್ತಿಗೆ (Kicchana Panchayati) ವೀಕ್ಷಕರು ಕಾಯುತ್ತಿರುತ್ತಾರೆ. ಆದರೀಗ ಈ ವಾರ ಕಿಚ್ಚನಿಗೆ ಸೋಷಿಯಲ್ ಮೀಡಿಯಾ (Social Media) ಮೂಲಕ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು ಅಂತ ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ. ಈ ಒಬ್ಬ ಸ್ಪರ್ಧಿಯನ್ನ ಖಂಡಿತ ಬಿಡಬೇಡಿ (Weekend) ಅಂತ ಕಮೆಂಟ್ ಮಾಡುತ್ತಿದ್ದಾರೆ. ಆ ಸ್ಪರ್ಧಿ ಯಾರು?
ಧನುಷ್ ಕ್ಯಾಪ್ಟನ್
ಇಡೀ ಬಿಗ್ ಬಾಸ್ ಮನೆ ಬಿಬಿ ಕಾಲೇಜು ಆಗಿತ್ತು. ಕ್ಯಾಪ್ಟನ್ಸಿ ಓಟಕ್ಕೆ ಬರಲು ಟಾಸ್ಕ್‌ವೊಂದನ್ನ ನೀಡಿದ್ದರು ಬಿಗ್ ಬಾಸ್. ಆದರೆ ಈ ವಾರ ಇದೆಲ್ಲದರ ಹೊರತಾಗಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ರಾಶಿಕಾ. ಸೂರಜ್ ಅವರು ಅದ್ಯಾವಾಗ ಮನೆಗೆ ಎಂಟ್ರಿ ಕೊಟ್ರೋ ಅಲ್ಲಿಂದಲೇ ರಾಶಿಕಾ ಫುಲ್ ಚೇಂಜ್ ಆಗಿದ್ದಾರೆ ಅಂತ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
BBK 12: ಲಕ್ಕೇ ಇಲ್ಲ ಎನ್ನುತ್ತಿದ್ದ ಧನುಷ್‌ಗೆ ಕೊನೆಗೂ ಒಲಿದು ಬಂತು ಕ್ಯಾಪ್ಟನ್ ಪಟ್ಟ
ವರ್ತನೆ ಸರಿಯಿಲ್ಲ
ಮೊದ ಮೊದಲು ರಾಶಿಕಾ ಚೆನ್ನಾಗಿಯೇ ಆಡ್ತಾ ಇದ್ದರು. ಆದರೀಗಿನ ವರ್ತನೆ ಸರಿಯಿಲ್ಲ. ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ರಾಶಿಕಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. `ಈ ವಾರ ಕಿಚ್ಚ ಮಾತಾಡಬೇಕಾದ ಬಿಸಿ ಬಿಸಿ ಸಮಾಚಾರ ಯಾವುದು’ ಎಂದು ‘ಕಲರ್ಸ್ ಕನ್ನಡ’ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಕೇಳಿದೆ.
ಲವ್ ಸ್ಟೋರಿಗೆ ಬ್ರೇಕ್ ಹಾಕಿ ಬಿಗ್‌ಬಾಸ್ ಮನೆಗೆ ಬಂದಿರುವುದು ಯಾಕೆ ಎನ್ನುವುದನ್ನು ಸ್ಪರ್ಧಿಗಳಿಗೆ ಸುದೀಪ್ ತಿಳಿಸಬೇಕು ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ. ಬೇಕಂತಲೇ ರಕ್ಷಿತಾ ಶೆಟ್ಟಿ ಜೊತೆ ಜಗಳ, ಕೈ ನೋವಾಗಿದೆ ಎಂದು ನೆಪ ಹೇಳಿ ಅಡುಗೆ ಕೆಲಸದಿಂದ ತಪ್ಪಿಸಿಕೊಳ್ಳುವುದು, ಹೀಗೆ ಅನೇಕ ಕಾರಣಗಳನ್ನು ಕಮೆಂಟ್ ಮಾಡಿದ್ದಾರೆ.
ಅದೇಗೇ ಪ್ರೀತಿ ಮೂಡಲು ಸಾಧ್ಯ?
ಸೂರಜ್ ಬಂದ ಬಳಿಕ ಹೆಚ್ಚಾಗಿ ಸೂರಜ್ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವೆ ಅದೇಗೇ ಪ್ರೀತಿ ಮೂಡಲು ಸಾಧ್ಯ? ಅಂತ ಕಮೆಂಟ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ ಸೂರಜ್ ಅವರಿಗೂ ಕಿಚ್ಚ ಕ್ಲಾಸ್ ತೆಗೆದುಕೊಳ್ಳಬೇಕು. ಆಟದಲ್ಲಿ ಡಬಲ್ ಗೇಮ್ ಆಡಿದ ಸೂರಜ್‌ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕು ಅಂತ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ರಕ್ಷಿತಾ ಅವರನ್ನು ಕೂಡ ಟಾರ್ಗೆಟ್ ಮಾಡಲಾಗುತ್ತಿದೆ. ಅಶ್ವಿನಿ, ಜಾನ್ವಿ ಅವರಿಗೆ ಹೇಗೆ ಕ್ಲಾಸ್ ಆಗಿತ್ತೋ ಅದೇ ರೀತಿ ರಾಶಿಕಾ ಅವರಿಗೂ ತೆಗೆದುಕೊಳ್ಳಿ ಅಂತ ಕಮೆಂಟ್ ಮಾಡಿದ್ದಾರೆ.
Bigg Boss Kannada 12: ಬಿಗ್ ಬಾಸ್ ಶೂಟಿಂಗ್ ಮತ್ತೆ ಆರಂಭ, ಹೊಸ ಪ್ರೊಮೊ ರಿಲೀಸ್
ಈ ವಾರ ಮನೆಯಿಂದ ಹೊರ ನಡೆಯೋದು ಯಾರು?
ಈಗಾಗಲೇ ಶೋ 30 ದಿನ ಪೂರೈಸಿದೆ. ಇತ್ತೀಚೆಗೆ ನಡೆದ ಬಿಬಿ ಕಾಲೇಜ್ ಫೆಸ್ಟ್‌ನಲ್ಲಿ ಡ್ಯಾನ್ಸ್, ಸ್ಕಿಟ್ ಮಾಡಿ ಸ್ಪರ್ಧಿಗಳು ರಂಜಿಸಿದ್ದಾರೆ. ಈ ವಾರ ರಾಶಿಕಾ, ದೃವಂತ್, ಮಲ್ಲಮ್ಮ, ಮಾಳು, ಅಶ್ವಿನಿ ಗೌಡ, ಗಿಲ್ಲಿ, ರಿಷಾ, ಧನುಷ್ ನಾಮಿನೇಟ್ ಆಗಿದ್ದಾರೆ.
ಹಾಗೇ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ. ನಿಷ್ಠಾವಂತಹ ಸ್ಟೂಡೆಂಟ್ ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ. ಅಲ್ಲದೆ ವಾರದ ಆರಂಭದಲ್ಲೇ ಬಿಗ್ ಬಾಸ್ ಕಾಲೇಜ್ನಿಂದ ಚಂದ್ರಪ್ರಭ ಜೊತೆಗೆ ಇವರೂ ಡಿಬಾರ್ ಆದರು. ಇದೀಗ ವಾರದ ಕೊನೆಯಲ್ಲಿ ಕಳಪೆ ಪಟ್ಟ ತೊಟ್ಟು ಜೈಲು ಸೇರಿಕೊಂಡಿದ್ದಾರೆ.
ಹೇಗಿತ್ತು ಕ್ಯಾಪ್ಟನ್ಸಿ ರೇಸ್?
ಇದಾದ ಬಳಿಕ ಧನುಷ್ ಹಾಗೂ ರಾಘು ನಡುವೆ ಕ್ಯಾಪ್ಟನ್ ಆಗಲು ಸ್ಪರ್ಧೆ ನಡೆಯಿತು. ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಚಾನ್ಸ್ ಉಳಿದ ಸ್ಪರ್ಧಿಗಳಿಗೆ ನೀಡಿದ್ದರು. ಅದರಂತೆ ತಮ್ಮ ಇಚ್ಛೆಯ ಸ್ಪರ್ಧಿಯನ್ನು ಮನೆಯ ಸದಸ್ಯರು ಆಯ್ಕೆ ಮಾಡಿದರು. ರಘು ಅವರನ್ನು ಗಿಲ್ಲಿ ಮತ್ತು ಮಲ್ಲಮ್ಮ ಮಾತ್ರ ಸೆಲೆಕ್ಟ್ ಮಾಡಿದ್ದರು. ಉಳಿದ 13 ಸ್ಪರ್ಧಿಗಳು ಧನುಷ್ ಅವರನ್ನು ಆಯ್ಕೆ ಮಾಡಿದರು. ಅಂತಿಮವಾಗಿ ಹೆಚ್ಚು ವೋಟ್ ಪಡೆದು ಧನುಷ್ ಈ ವಾರ ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.