ಕಳೆದ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ನಟ ಧರ್ಮ ಕೀರ್ತಿರಾಜ್, ಅಲ್ಲಿಂದ ಮರಳಿದ ಬಳಿಕ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ತಮ್ಮ ವೃತ್ತಿ ಬದುಕಿನ ಮೈಲಿಗಲ್ಲು ತಲುಪಿದ್ದಾರೆ. ತಮ್ಮ 25ನೇ ಸಿನಿಮಾವನ್ನು ಧರ್ಮ ಕೀರ್ತಿರಾಜ್ ಘೋಷಣೆ ಮಾಡಿದ್ದು, ನಯನ ಮನೋಹರ ಎಂದು ಹೆಸರಿಡಲಾಗಿದೆ. ಈಚೆಗೆ ಈ ಸಿನಿಮಾದ ಶೀರ್ಷಿಕೆ ಅನಾವರಣ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದಿದೆ.
ಎಕ್ಸ್ಕ್ವಿಸಿಟ್ ಎಂಟರ್‌ಟೈನ್‌ಮೆಂಟ್ಸ್ (EXQUISITE Entertainments) ಬ್ಯಾನರ್ ಅಡಿಯಲ್ಲಿ ಅನುಷ್ ಸಿದ್ದಪ್ಪ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಪುನೀತ್ ಕೆಜಿಆರ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ ಮತ್ತು ವಿನೋದ್ ಪ್ರಭಾಕರ್ ಅವರು ಧರ್ಮಗೆ ವಿಶ್ ಮಾಡಿದ್ದಾರೆ.
ಧರ್ಮ ಕೀರ್ತಿರಾಜ್ ಹೇಳಿದ್ದೇನು?
"ಇದು ನನ್ನ 25ನೇ ಫಿಲ್ಮ್.. ಇದೊಂಥರಾ ಮೈಲಿಗಲ್ಲು ಅಂತ ಹೇಳಬಹುದು. ಇಲ್ಲಿ ಮೇಜರ್ ಹೀರೋ ಅಂದರೆ ನಿರ್ಮಾಪಕರು. ನನ್ನ ವಿಭಿನ್ನ ಲುಕ್ಕಿಗೆ ಅವರೇ ಕಾರಣ. ನಿರ್ದೇಶಕರು ಕಥೆ ಹೇಳಿದಾಗ ಬಹಳ ಖುಷಿ ಆಯಿತು. ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಗೆಳೆಯ ವಿನೋದ್ ಪ್ರಭಾಕರ್ ಮೊದಲಿನಿಂದಲೂ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಏನೇ ತಪ್ಪು ಮಾಡಿದರೂ, ಮನೆಗೆ ಕರೆಸಿಕೊಂಡು ಬುದ್ದಿವಾದ ಹೇಳುತ್ತಾರೆ. ಸುಮಾರು ಸಲ ಲುಕ್ ಚೇಂಜ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಈಗ ಲುಕ್ ಚೇಂಜ್ ಆಗಿದೆ, ಇದು ನನಗೆ ಹೆಸರು ತಂದುಕೊಡುತ್ತದೆಂಬ ನಂಬಿಕೆ ಇದೆ" ಎನ್ನುತ್ತಾರೆ ಧರ್ಮಕೀರ್ತಿರಾಜ್.
ಈ ಸಿನಿಮಾ ಎಲ್ಲರಿಗೂ ತಲುಪುವಂತೆ ಮಾಡುತ್ತೇನೆ. ಧರ್ಮ ಕೀರ್ತಿರಾಜ್ ಸರ್‌ಗೆ ಗೆಲುವು ಸಿಗಲಿದೆ ಎಂಬ ಆಶಾಭಾವನೆ ಇದೆ. ನಾಯಕಿ ಯಾರು ಅನ್ನೋ ಮಾಹಿತಿ ಸೇರಿದಂತೆ ಇನ್ನುಳಿದಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ" ಎನ್ನುತ್ತಾರೆ ನಿರ್ದೇಶಕ ಪುನೀತ್.
ಧರ್ಮಗೆ ಹಾರೈಸಿದ ವಿನೋದ್
"ನವಗ್ರಹ ಚಿತ್ರದಿಂದಲೂ ಗೆಳೆಯನನ್ನು ನೋಡುತ್ತಾ ಬಂದಿದ್ದೇನೆ. ನಾನು ಸಿಕ್ಸ್ ಪ್ಯಾಕ್ ಮಾಡಿದ ನಂತರ, ಉದ್ಯಮದಲ್ಲೇ ಬೇರೆ ಥರ ಕಾಣಿಸಿಕೊಳ್ಳಬೇಕೆಂದು ತೀರ್ಮಾನಕ್ಕೆ ಬಂದೆ. ʻನೀನು ಬದಲಾವಣೆ ಮಾಡಿಕೋʼ ಎಂದು ಆಗಾಗ ಹೇಳುತ್ತಿರುತ್ತೇನೆ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಲೇ ಬೇಕು. ಇಲ್ಲದಿದ್ದರೆ ಬಹಳ ಕಷ್ಟ. ಇವತ್ತೀನ ಟೀಸರ್ ಚೆನ್ನಾಗಿ ಬಂದಿದೆ. ಉತ್ತಮ ಸಿನಿಮಾ ಇದಾಗಲಿದೆ ಅಂತ ಅನಿಸಿದೆ. ಪಾತ್ರದ ಪರಿಚಯ ಚೆನ್ನಾಗಿ ಮಾಡಿದ್ದಾರೆ. ಧರ್ಮನನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಮುಂದೆ ಒಳ್ಳೆಯ ಸಿನಿಮಾಗಳನ್ನು ಮಾಡಿ, ನಿನಗೆ ಸಾಮರ್ಥ್ಯ ಇದೆ. ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡಿಗರು ಜನ ಗೆಲ್ಲಿಸುತ್ತಾರೆ. ಅದಕ್ಕೆ ಸಾಕ್ಷಿ ಮಾದೇವ ಸಿನಿಮಾ ಕಣ್ಣ ಮುಂದಿದೆ" ಎಂದು ವಿನೋದ್ ಹೇಳಿದರು.
"ಈ ಸಿನಿಮಾ 100 ದಿನ ಪ್ರದರ್ಶನ ಕಂಡು, ಮತ್ತೊಮ್ಮೆ ಸಂಭ್ರಮಿಸೋಣ. ನಿರ್ಮಾಪಕರ ಅಭಿರುಚಿ ತುಣುಕುಗಳಲ್ಲಿ ಕಂಡುಬಂದಿದೆ. ಟೀಸರ್‌ನಲ್ಲಿರುವಂತೆ ಚಿತ್ರ ಮಾಡಿ. ಕನ್ನಡ ಇಂಡಸ್ರ್ಟಿ ಯಾವುದರಲ್ಲೂ ಕಮ್ಮಿ ಇಲ್ಲ. ಮೊದಲು ಕನ್ನಡ ಚಿತ್ರ ನೋಡಿ. ನಂತರ ಬೇರೆ ಭಾಷೆಯ ಕಡೆ ಗಮನ ಕೊಡಿ" ಎಂದು ಪ್ರಿಯಾಂಕ ಉಪೇಂದ್ರ ಹೇಳಿದರು.