ಬಿಗ್ ಬಾಸ್ (Bigg Boss kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ನಡುವಿನ ಜಗಳ, ವಾದ-ವಿವಾದಗಳು ಹೊಸ ತಿರುವು ಪಡೆದುಕೊಳ್ಳುತ್ತಿವೆ. ಇದೀಗ ಕ್ಯಾಪ್ಟನ್ ಜಗದೀಶ್ (Captain Jagadeesh) ಅವರು ತೆಗೆದುಕೊಂಡ ಒಂದು ನಿರ್ಧಾರ ಮನೆಯ ವಾತಾವರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಸ್ಪರ್ಧಿಗಳಿಗೆ ನೀಡಲಾದ ರ್ಯಾಂಕಿಂಗ್ ಪ್ರಕ್ರಿಯೆಯು ಮನೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
1ರಿಂದ 10ರವರೆಗೆ ಸ್ಪರ್ಧಿಗಳಿಗೆ ರ್ಯಾಂಕಿಂಗ್ ನೀಡಿದ ಜಗದೀಶ್
ಬಿಗ್ ಬಾಸ್ ನೀಡಿದ ಟಾಸ್ಕ್ನ ಭಾಗವಾಗಿ ಕ್ಯಾಪ್ಟನ್ ಜಗದೀಶ್ ಅವರು ಮನೆಯಲ್ಲಿರುವ ಸ್ಪರ್ಧಿಗಳ ಫೋಟೋಗಳನ್ನು 1ರಿಂದ 10ರವರೆಗಿನ ರ್ಯಾಂಕ್ ಬೋರ್ಡ್ಗಳಲ್ಲಿ ಜೋಡಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಆದರೆ ಜಗದೀಶ್ ಅವರು ನೀಡಿದ ಈ ರ್ಯಾಂಕಿಂಗ್ ಕೆಲವು ಸ್ಪರ್ಧಿಗಳಿಗೆ ಸಮಾಧಾನ ತಂದರೆ, ಇನ್ನು ಕೆಲವರಿಗೆ ತೀವ್ರ ಅಸಮಾಧಾನ ಉಂಟುಮಾಡಿದೆ.
ತಮಗೆ ನಿರೀಕ್ಷೆಗಿಂತ ಕಡಿಮೆ ಸ್ಥಾನ ನೀಡಿರುವುದನ್ನು ಒಪ್ಪಿಕೊಳ್ಳದ ಕೆಲವು ಸ್ಪರ್ಧಿಗಳು ಜಗದೀಶ್ ಅವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಮನೆಯೊಳಗೆ ಮಾತಿನ ಚಕಮಕಿ ಆರಂಭವಾಗಿದ್ದು, ವಾತಾವರಣ ಬಿಸಿಯಾಗಿದೆ.
ಇದನ್ನೂ ಓದಿ: Bigg Boss Kannada 13: ಮಾತಿಗೆ ಮಾತು ಬೆಳೆದು ಕೂಗಾಡಿಕೊಂಡ ಆಸಿಯಾ-ಗಾನವಿ!
ಈ ರ್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಎರಡನೇ ಸ್ಥಾನ ಪಡೆದ ಸೌಂದರ್ಯಾ ಅವರು ಕೂಡ ತಮ್ಮ ಅಸಮಾಧಾನವನ್ನು ಮುಚ್ಚಿಡಲಿಲ್ಲ. ನೇರವಾಗಿ ಕ್ಯಾಪ್ಟನ್ ಜಗದೀಶ್ ಅವರ ಬಳಿಗೆ ತೆರಳಿದ ಅವರು, ತಮ್ಮ ಸ್ಥಾನಮಾನದ ಬಗ್ಗೆ ತೀವ್ರವಾಗಿ ಪ್ರಶ್ನಿಸಿದ್ದಾರೆ.
10ನೇ ರ್ಯಾಂಕ್ನಿಂದ ಸೋನಿಕಾಗೆ ನಾಮಿನೇಷನ್ ಸಂಕಷ್ಟ!
ಇನ್ನು ಈ ರ್ಯಾಂಕಿಂಗ್ ಪ್ರಕ್ರಿಯೆಯ ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ ಸೋನಿಕಾ ಅವರಿಗೆ 10ನೇ ರ್ಯಾಂಕ್ ನೀಡಿರುವುದು. ಈ ಕಡಿಮೆ ಸ್ಥಾನದಿಂದಾಗಿ ಸೋನಿಕಾ ಅವರು ನೇರವಾಗಿ ಈ ವಾರದ ನಾಮಿನೇಷನ್ಗೆ ಒಳಗಾಗಿದ್ದಾರೆ. ಇದರಿಂದಾಗಿ ಅವರ ಆಟಕ್ಕೆ ದೊಡ್ಡ ಸವಾಲು ಎದುರಾದಂತಾಗಿದೆ.
ಕ್ಯಾಪ್ಟನ್ ಜಗದೀಶ್ ಅವರ ರ್ಯಾಂಕಿಂಗ್ ನಿರ್ಧಾರವು ಕೇವಲ ಒಂದು ಟಾಸ್ಕ್ಗೆ ಸೀಮಿತವಾಗದೆ, ಸ್ಪರ್ಧಿಗಳ ನಡುವಿನ ಸಂಬಂಧ ಹಾಗೂ ಮನೆಯೊಳಗಿನ ಮೇಲೂ ಪರಿಣಾಮ ಬೀರಿದೆ. ಯಾರಿಗೆ ಯಾವ ಸ್ಥಾನ ಸಿಗಬೇಕು ಎಂಬ ವಿಚಾರವೇ ಈಗ ದೊಡ್ಡ ಚರ್ಚೆಯಾಗಿದೆ.
ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆಯಿಂದ ದೊಡ್ಮನೆವರೆಗಿನ ಜರ್ನಿ ಮುಕ್ತಾಯ; ಕುಮಾರಿ ಔಟ್!
ಒಟ್ಟಿನಲ್ಲಿ, ಜಗದೀಶ್ ಅವರ ಈ ನಿರ್ಧಾರದಿಂದ ಬಿಗ್ ಬಾಸ್ ಮನೆಯಲ್ಲಿ ಹೊಸ ಸಂಘರ್ಷ ಶುರುವಾಗಿದೆ. ಸೌಂದರ್ಯಾ ಅವರ ಆಕ್ರೋಶ, ಸೋನಿಕಾ ಅವರ ನಾಮಿನೇಷನ್ ಸಂಕಷ್ಟ ಹಾಗೂ ಉಳಿದ ಸ್ಪರ್ಧಿಗಳ ಅಸಮಾಧಾನ ಮುಂದಿನ ದಿನಗಳಲ್ಲಿ ಆಟಕ್ಕೆ ಯಾವ ರೀತಿಯ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.