ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಮಾತಿಗೆ ಮಾತು ಬೆಳೆದು ಕೂಗಾಡಿಕೊಂಡ ಆಸಿಯಾ-ಗಾನವಿ!

Bigg Boss Kannada 13: ಬಿಗ್‌ ಬಾಸ್‌ (Bigg Boss Kannada 13) ಆಸಿಯಾ ಅವರ ಆಟದ ತಂತ್ರಗಾರಿಕೆಯನ್ನು ಯೆಸ್ ಆರ್ ನೋ ರೌಂಡ್‌ನಲ್ಲಿ ನಿನ್ನೆಯ ಸಂಚಿಕೆಯಲ್ಲಿ ಬಂದಿರೋದು ಗೊತ್ತೇ ಇದೆ. ಕೆಲವು ಸ್ಪರ್ಧಿಗಳು ಈ ಮೂಲಕ ಆಸಿಯಾ ಅವರ ಆಟದ ಶೈಲಿ ಹಾಗೂ ಇತರೆ ಸ್ಪರ್ಧಿಗಳ ಜಗಳದಲ್ಲಿ ಅವರ ಅನಗತ್ಯ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊರಹಾಕಿದರು. ಇದೀಗ ನಾಮಿನೇಶನ್‌ (Nomination) ವಿಚಾರದಲ್ಲಿ ಆಸಿಯಾ ಕೂಗಾಡಿದ್ದಾರೆ.

ಮಾತಿಗೆ ಮಾತು ಬೆಳೆದು ಕೂಗಾಡಿಕೊಂಡ ಆಸಿಯಾ-ಗಾನವಿ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 2, 2026 8:43 AM

ಬಿಗ್‌ ಬಾಸ್‌ (Bigg Boss Kannada 13) ಆಸಿಯಾ ಅವರ ಆಟದ ತಂತ್ರಗಾರಿಕೆಯನ್ನು ಯೆಸ್ ಆರ್ ನೋ ರೌಂಡ್‌ನಲ್ಲಿ ನಿನ್ನೆಯ ಸಂಚಿಕೆಯಲ್ಲಿ ಬಂದಿರೋದು ಗೊತ್ತೇ ಇದೆ. ಕೆಲವು ಸ್ಪರ್ಧಿಗಳು ಈ ಮೂಲಕ ಆಸಿಯಾ ಅವರ ಆಟದ ಶೈಲಿ ಹಾಗೂ ಇತರೆ ಸ್ಪರ್ಧಿಗಳ ಜಗಳದಲ್ಲಿ ಅವರ ಅನಗತ್ಯ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊರಹಾಕಿದರು. ಇದೀಗ ನಾಮಿನೇಶನ್‌ (Nomination) ವಿಚಾರದಲ್ಲಿ ಆಸಿಯಾ ಕೂಗಾಡಿದ್ದಾರೆ.

ಹೊಸ ಪ್ರೋಮೋ ಔಟ್‌ ಆಗಿದೆ. ಭಾವಚಿತ್ರಕ್ಕೆ ಕೊಡಲಿಯನ್ನು ಚುಚ್ಚಿ ನಾಮಿನೇಟ್‌ ಮಾಡಬೇಕು. ಆಗ ಆಸಿಯಾ ಅವರ ಭಾವಚಿತ್ರಕ್ಕೆ ಗಾನವಿ ಚುಚ್ಚಿ ನಾಮಿನೇಟ್‌ ಮಾಡಿದರು. ಗಾನವಿ ಅವರು ಕಾರಣ ನೀಡಿ, ಆಸಿಯಾ ಅವರ ಆಟ ಅವರ ಕೊಡಗೆ ಈ ಮನೆಯಲ್ಲಿ ಕಡಿಮೆ ಇದೆ ಅನ್ಸತ್ತೆ ಎಂದರು. ಆಗ ಆಸಿಯಾ ಕೋಪದಲ್ಲಿ, ನಾನು ಆಡಿರೋ ಟಾಸ್ಕ್‌ನಲ್ಲಿ ನೀನು ಆಡೇ ಇಲ್ಲ ಎಂದಿದ್ದಾರೆ. ಹೊರಗಡೆ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತು. ಒಂದೊಂದು ಬಿಚ್ಚಿಟ್ಟರೆ ಎಂದಿದ್ದಾರೆ ಗಾನವಿ. ಬಿಚ್ಚಿಡು ನೋಡೋಣ. ಧಮ್‌ ಇದ್ರೆ ಬಿಚ್ಚಿಡು ಎಂದು ಆಸಿಯಾ ಅವರು ಗಾನವಿಗೆ ನೇರ ಸವಾಲ್‌ ಹಾಕಿದರು.

ಇದನ್ನೂ ಓದಿ: Bigg Boss Kannada 13: ಮುಚ್ಕೊಂಡು ಕುತ್ಕೋ ಅಂದ್ರೆ ಸುಮ್ಮನಿರಲ್ಲ; ಗಗನ್‌ ಮೇಲೆ ಯಶಸ್‌ ಸಿಟ್ಟು