Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಸ್ಪೆಷಲ್ ಗೆಸ್ಟ್‌ಗಳದ್ದೇ ದರ್ಬಾರ್!
Bigg Boss Kannada : ಬಿಗ್ ಬಾಸ್ ಹೌಸ್ ಈಗ ಬಿಗ್ ಬಾಸ್ ಪ್ಯಾಲೆಸ್ ಆಗಿದೆ. ಮೊದಲಿಗೆ ಹಿಂದಿನ ಸೀಸನ್ ಉಗ್ರಂ ಮಂಜು ಅವರು ಕರೆ ಮಾಡಿ, ಬರ್ತಾ ಇದ್ದೀವಿ ಅಂತ ಕರೆ ಮಾಡಿದ್ದಾರೆ.ರಜತ್ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿಗ್ ಬಾಸ್ ಸದ್ಯ ಪ್ರೋಮೋ ಬಿಟ್ಟಿದ್ದು, ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ! ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಹೌಸ್ ಈಗ ಬಿಗ್ ಬಾಸ್ ಪ್ಯಾಲೆಸ್ ಆಗಿದೆ. ಮೊದಲಿಗೆ ಹಿಂದಿನ ಸೀಸನ್ ಉಗ್ರಂ ಮಂಜು ಅವರು ಕರೆ ಮಾಡಿ, ಬರ್ತಾ ಇದ್ದೀವಿ ಅಂತ ಕರೆ ಮಾಡಿದ್ದಾರೆ.ದೊಡ್ಡ ಪಾರ್ಟಿ ನಡೆಯತ್ತೆ ಅಂತ ಹೇಳಿದ್ದಾರೆ. ಹೇಳುತ್ತಲೇ ಚೈತ್ರಾ ಕುಂದಾಪುರ, ರಜತ್ ಎಂಟ್ರಿ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ ರಜತ್ ಅವರು ಗಿಲ್ಲಿ ಹಾಗೂ ಕಾವ್ಯ ಅವರ ಕಾಲೆಳಿದ್ದಾರೆ. ಕಾವು ಅಂತ ತಮಾಷೆ ಮಾಡಿದ್ದಾರೆ. ಅದಕ್ಕೆ ಗಿಲ್ಲಿ ಅವರು ಕಾವು ಅಂದರೆ ನೋವಾಗುತ್ತೆ ಎಂದಿದ್ದಾರೆ. ನೋವಾಗಲಿ ಅಂತಾನೇ ಅಲ್ವಾ ನಾವು ಬಂದಿರೋದು ಅಂತ ರಜತ್ ಹೇಳಿದ್ದಾರೆ.
ಇನ್ನು ಅಶ್ವಿನಿ ಅವರಿಗೆ ಹಳೆಯ ಸ್ಪರ್ಧಿಗಳು ಸ್ವಲ್ಪ ಗಟ್ಟಿಯಾಗಿ ಮಾತನಾಡಿ ಎಂದಿದ್ದಾರೆ. ಅದಕ್ಕೆ ಅಶ್ವಿನಿ ನನ್ನ ವಾಯ್ಸ್ ಕೇಳಿಸುತ್ತಿಲ್ವಾ? ಎಂದು ಹೇಳಿದ್ದಾರೆ. ಅದಕ್ಕೆ ಜೋರಾಗಿ ನಕ್ಕಿದ್ದಾರೆ ಮಾಜಿ ಸ್ಪರ್ಧಿಗಳು.
ಇನ್ನು ರಜತ್ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿಗ್ ಬಾಸ್ ಸದ್ಯ ಪ್ರೋಮೋ ಬಿಟ್ಟಿದ್ದು, ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ! ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಒಟ್ಟಾರೆಯಾಗಿ ಸೀಸನ್ 11ರ ಎಲ್ಲ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ವೀಕ್ಷಕರು ಸಖತ್ ಖುಷ್ ಆಗಿದ್ದಾರೆ. ತ್ರಿವಿಕ್ರಮ ಅಭಿಮಾನಿಗಳು ಲೈಕ್ ಮಾಡಿ, ನಮ್ಮ ಲೇಡಿ ಟೈಗರ್ ಸ್ವಾಭಿಮಾನಿ ಮೋಕ್ಷಿ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಯಾರಿಗೆಲ್ಲ ಇಷ್ಟ ಆಯ್ತು ಅಂತ ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯ ಇಂದಿನ (ನವೆಂಬರ್ 24) ಎಪಿಸೋಡ್‌ನಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ. ಇದಕ್ಕೊಂದು ಟಾಸ್ಕ್ ಅನ್ನು ಬಿಗ್ ಬಾಸ್ ಕೊಟ್ಟಿತ್ತು. ಈ ಮನೆಯಲ್ಲಿ ಇರುವುದಕ್ಕೆ ಯಾರು ಯೋಗ್ಯರಲ್ಲ ಅನ್ನೋದನ್ನು ಅವರ ಬಟ್ಟೆಯನ್ನು ಒಗೆಯುತ್ತಾ ಕಾರಣಗಳನ್ನು ಕೊಡಬೇಕಿತ್ತು. ಈ ವೇಳೆ ಸ್ಪರ್ಧಿಗಳ ಮಧ್ಯೆ ಇನ್ನಷ್ಟು ವೈಮನಸ್ಸು ಹೆಚ್ಚಾಗಿದೆ.