ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ ಶಿಂದೋಗಿ; ಹೊಸ ಬಾಳಿಗೆ ಮುನ್ನುಡಿ ಬರೆದ ‘ಬಿಗ್ ಬಾಸ್’ ಜೋಡಿ

Shishir Shastry Engagement: ನಟಿ ಐಶ್ವರ್ಯಾ ಶಿಂದೋಗಿ ಅವರೊಂದಿಗೆ ನಟ ಶಿಶಿರ್‌ ಶಾಸ್ತ್ರಿ ಬೆಂಗಳೂರಿನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನವೆಂಬರ್ 22ರಂದು ಅದ್ದೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಶುರುವಾದ ಇವರ ಸ್ನೇಹ ಪ್ರೀತಿಗೆ ತಿರುಗಿದ್ದು, ಶೀಘ್ರದಲ್ಲೇ ಇವರ ಮದುವೆ ಅದ್ಧೂರಿಯಾಗಿ ನೆರವೇರಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದ ಜನಪ್ರಿಯ ಜೋಡಿ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಶಿಂದೋಗಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಪ್ರೀತಿಯಲ್ಲಿದ್ದ ಈ ತಾರಾ ಜೋಡಿ, ನವೆಂಬರ್ 22ರಂದು ಬೆಂಗಳೂರಿನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

ಈಚೆಗಷ್ಟೇ ಅಧಿಕೃತವಾಗಿ ಮಾಹಿತಿ ನೀಡಿದ್ದ ಜೋಡಿ

ಕೆಲ ದಿನಗಳ ಹಿಂದಷ್ಟೇ ತಮ್ಮಿಬ್ಬರ ಸಂಬಂಧದ ಕುರಿತು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳು ಹಾಗೂ ಟ್ರೋಲ್‌ಗಳಿಗೆ ವಿಶೇಷ ವಿಡಿಯೋವೊಂದರ ಮೂಲಕ ಈ ಜೋಡಿ ತೆರೆ ಎಳೆದಿತ್ತು. ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಹಸಮಣೆ ಏರುವುದಾಗಿ ಅಧಿಕೃತವಾಗಿ ಘೋಷಿಸಿದ್ದ ಶಿಶಿರ್ ಮತ್ತು ಐಶ್ವರ್ಯಾ, ಆ ವಿಡಿಯೋಗೆ “ಊಹೆಗಳ ಹಿಂದೆ ಒಂದು ಕಥೆಯಿತ್ತು, ನಗುವಿನ ಹಿಂದೆ ಒಂದು ಪ್ರೀತಿಯಿತ್ತು. ಕಮೆಂಟ್‌ಗಳ ಹಿಂದೆ ನಿಮ್ಮ ಕುತೂಹಲವಿತ್ತು. ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ - ‘AISHIR’ (ಐಶಿರ್). ಇಷ್ಟು ದಿನ ನಮ್ಮ ಕಥೆಯನ್ನ ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು. ಇದು ಬರಿ ವದಂತಿಯಲ್ಲ, ನಮ್ಮ ಹೊಸ ಜೀವನದ ಸುಂದರ ಆರಂಭ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ಟ್ರೋಲ್‌ ಮಾಡೋರಿಗೆ ಉತ್ತರ ಕೊಟ್ಟಿದ್ದ ಜೋಡಿ

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಬರುತ್ತಿದ್ದ ಕಮೆಂಟ್‌ಗಳ ಕುರಿತು ಆ ವಿಡಿಯೋದಲ್ಲಿ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದ ಈ ಜೋಡಿ, ನೆಟ್ಟಿಗರ ಊಹಾಪೋಹಗಳನ್ನು ಮೆಲುಕು ಹಾಕಿತ್ತು. “ಜನರು ನಮ್ಮ ಲೈಫ್ ಸ್ಕ್ರಿಪ್ಟ್ ಅನ್ನ ಕಮೆಂಟ್ ಸೆಕ್ಷನ್‌ನಲ್ಲೇ ಬರೆದುಬಿಟ್ಟಿದ್ದರು. ಕೆಲವರು ಇವರಿಬ್ಬರದ್ದು ಬರಿ ಶೋಕಿ, ಕಂಟೆಂಟ್‌ಗೋಸ್ಕರ ಹೀಗೆ ಮಾಡುತ್ತಿದ್ದಾರೆ ಎಂದರೆ, ಇನ್ನು ಕೆಲವರು ಸ್ವಲ್ಪ ದಿನದಲ್ಲೇ ಬ್ರೇಕಪ್ ಆಗುತ್ತದೆ ಎಂದು ಟ್ರ್ಯಾಜೆಡಿ ಎಂಡಿಂಗ್ ಕೊಡುತ್ತಿದ್ದರು” ಎಂದು ಹಾಸ್ಯಮಯವಾಗಿ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.

Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಜೀವನ ಎಂಬ ಶಿಪ್ ಅನ್ನು ಒಟ್ಟಿಗೆ ಏರುತ್ತಿದ್ದೇವೆ

ಅಷ್ಟೇ ಅಲ್ಲದೆ, ತಮ್ಮ ಸಂಬಂಧಕ್ಕೆ ನಾನಾ ಹೆಸರುಗಳನ್ನು ಇಟ್ಟಿದ್ದವರಿಗೆ ಸ್ಪಷ್ಟ ಉತ್ತರ ನೀಡಿದ್ದ ಶಿಶಿರ್ ಮತ್ತು ಐಶ್ವರ್ಯಾ, “ಜನರು ನಮ್ಮನ್ನು ಅಣ್ಣ-ತಂಗಿ, ಲವರ್ಸ್, ಫ್ರೆಂಡ್ಸ್ ಅಥವಾ ಸಿಚುಯೇಷನ್‌ಶಿಪ್‌ನಲ್ಲಿದ್ದಾರೆ ಎಂದುಕೊಂಡಿದ್ದರು. ಆದರೆ, ನಾವು ಯಾವುದೇ ‘ಶಿಪ್’ನಲ್ಲಿ ಇಲ್ಲ, ಬದಲಾಗಿ ಜೀವನ ಎಂಬ ಶಿಪ್ ಅನ್ನು ಒಟ್ಟಿಗೆ ಏರುತ್ತಿದ್ದೇವೆ. ಇನ್ಮುಂದೆ ಈ 'AISHIR' ಬರಿ ಹ್ಯಾಶ್‌ಟ್ಯಾಗ್ ಅಷ್ಟೇ ಅಲ್ಲ” ಎಂದು ತಮ್ಮ ಪ್ರೀತಿಯನ್ನು ಜಗಜ್ಜಾಹೀರುಗೊಳಿಸಿದ್ದರು.

ʻಬಿಗ್ ಬಾಸ್ʼ ಮನೆಯಿಂದ ಶುರುವಾದ ಇವರಿಬ್ಬರ ಸ್ನೇಹ, ಬಳಿಕ ಪ್ರೀತಿಗೆ ತಿರುಗಿ ಇದೀಗ ನಿಶ್ಚಿತಾರ್ಥದ ಹಂತಕ್ಕೆ ಬಂದು ತಲುಪಿದೆ. ನವೆಂಬರ್ 22ರಂದು ನಡೆದ ಸಂಭ್ರಮದ ಸಮಾರಂಭದಲ್ಲಿ ಉಂಗುರ ಬದಲಾಯಿಸಿಕೊಂಡಿರುವ ‘ಐಶಿರ್’ ಜೋಡಿಗೆ ಕಿರುತೆರೆ ಹಾಗೂ ಸಿನಿಮಾ ರಂಗದ ಗಣ್ಯರು, ಸಹಸ್ಪರ್ಧಿಗಳು ಹಾಗೂ ಅಪಾರ ಅಭಿಮಾನಿಗಳು ಶುಭಾಶಯಗಳ ಮಳೆಗರೆಯುತ್ತಿದ್ದಾರೆ.