ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ‌'ಬಿಗ್‌ ಬಾಸ್‌' ಮನೆಯಲ್ಲಿ ರಘುಗೆ ಸಿಕ್ತು ಡಬಲ್‌ ಶಾಕ್‌; ಇದಕ್ಕೆ ಕಾರಣ ಕ್ಯಾಪ್ಟನ್‌ ಅಭಿಷೇಕ್!

BBK 12 Mutant Raghu: 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಅಭಿಷೇಕ್ ತೆಗೆದುಕೊಂಡ ನಿರ್ಧಾರದಿಂದ ಮ್ಯೂಟಂಟ್ ರಘು ಅವರಿಗೆ ಡಬಲ್ ಶಾಕ್ ಎದುರಾಗಿದೆ. ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿದ ಅಭಿಷೇಕ್, ರಘು ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಅಷ್ಟೇ ಅಲ್ಲದೆ, ರಘು ಅವರು ಬೇರೆಯವರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಕಳೆದುಕೊಂಡರು. ಅಷ್ಟಕ್ಕೂ ಇದಕ್ಕೆ ಕಾರಣವೇನು?

ʻಬಿಗ್‌ ಬಾಸ್‌ʼ ಮನೆಯಲ್ಲಿ ನಾಮಿನೇಷನ್‌ ವಿಚಾರದಲ್ಲಿ ಮ್ಯೂಟಂಟ್ ರಘು ಅವರಿಗೆ ಶಾಕ್‌ ಎದುರಾಗಿದೆ.‌ ಅದಕ್ಕೆ ಕಾರಣವಾಗಿರುವುದು‌ ಮನೆಯ ಈಗ ಕ್ಯಾಪ್ಟನ್‌ ಆಗಿರುವ ಅಭಿಷೇಕ್. ಹೌದು, ಈ ವಾರ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಅಭಿಷೇಕ್‌ಗೆ ಬಿಗ್‌ ಬಾಸ್‌ ವಿಶೇಷ ಅಧಿಕಾರವನ್ನು ನೀಡಿದರು. ಆದರೆ ಅದರ ಎಫೆಕ್ಟ್‌ ರಘು ಮೇಲೆ ಆಯಿತು.

ಬಿಗ್‌ ಬಾಸ್‌ ಕೊಟ್ಟ ಆರ್ಡರ್‌ ಏನು?

ಮನೆಯ ಕ್ಯಾಪ್ಟನ್‌ ಆಗಿರುವ ಅಭಿಷೇಕ್‌ ಒಬ್ಬ ಸ್ಪರ್ಧಿಯನ್ನು ಆಯ್ಕೆ ಮಾಡಬೇಕು. ಕ್ಯಾಪ್ಟನ್‌ ಆಯ್ಕೆ ಮಾಡುವ ಸ್ಪರ್ಧಿಯು ಮನೆಯಿಂದ ಈ ವಾರ ಹೊರಹೋಗಲು ನೇರವಾಗಿ ನಾಮಿನೇಟ್‌ ಆಗುತ್ತಾರೆ ಮತ್ತು ಬೇರೆಯವರನ್ನು ನಾಮಿನೇಟ್‌ ಮಾಡುವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಈ ವಿಚಾರವನ್ನು ಅಭಿಷೇಕ್‌ಗೆ ಬಿಗ್‌ ಬಾಸ್‌ ಹೇಳಿದರು. ಆಗ ಅಭಿಷೇಕ್‌ ಆಯ್ಕೆ ಮಾಡಿಕೊಂಡ ಹೆಸರು ರಘು ಅವರದ್ದು!

‌Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್‌ ಅಡಿಕ್ಟ್‌ ಅಲ್ಲʼ; ಕಾಕ್ರೋಚ್‌ ಸುಧಿ ಫಸ್ಟ್‌ ರಿಯಾಕ್ಷನ್

ರಘು ನನಗೆ ಆ ರೀತಿ ಹೇಳಿದ್ದಾರೆ

"ನಾನು ನೇರವಾಗಿ ನಾಮಿನೇಟ್‌ ಮಾಡುತ್ತಿರುವುದು ರಘು ಅವರನ್ನು. ನಾನ್ಯಾಕೆ ಅವರ ಹೆಸರನ್ನು ತೆಗೆದುಕೊಳ್ಳುತ್ತೇನೆ ಎಂದರೆ, ನಾನು ಇಲ್ಲಿವರೆಗೂ ಇರುವುದು ಲಕ್‌ನಲ್ಲಿ ಅಂತೆ. ಅದನ್ನು ರಘು ಅವರು ಹೇಳಿದ್ದಾರೆ. ಆದರೆ ಅವರು ಬರುವುದಕ್ಕೂ ಮುನ್ನ ಮೂರು ವಾರ ನಾವಿಲ್ಲಿ ತುಂಬಾ ಅನುಭವಿಸಿರುತ್ತೇವೆ. ಲಕ್‌ ಅಂತ ಹೇಳುವುದು ತುಂಬಾ ಸುಲಭ. ಅವರು ಕೂಡ ಬಂದಕೂಡಲೇ ಕ್ಯಾಪ್ಟನ್‌ ರೇಸ್‌ಗೆ ಲಕ್‌ನಿಂದ ಹೋಗುತ್ತಾರೆ" ಎಂದು ಅಭಿಷೇಕ್‌ ಹೇಳಿದ್ದಾರೆ.

ರಘು ಲಕ್‌ನಿಂದ ಬಂದಿದ್ದಾರೆ

"ಒಮ್ಮೆ ಕ್ಯಾಪ್ಟನ್‌ ಆದ ರಘು ಅವರಿಗೆ ಮತ್ತೊಮ್ಮೆ ಕ್ಯಾಪ್ಟನ್‌ ಆಗುವ ಚಾನ್ಸ್‌ ಸಿಗುತ್ತದೆ. ನನ್ನ ಪ್ರಕಾರ, ನಾನು ಲಕ್‌ನಿಂದ ಇಲ್ಲಿವರೆಗೂ ಬಂದಿಲ್ಲ. ಬದಲಿಗೆ ರಘು ಇಲ್ಲಿವರೆಗೂ ಲಕ್‌ನಿಂದ ಬಂದಿದ್ದಾರೆ‌ ನಾನು ಹೇಳುತ್ತಿದ್ದೇನೆ. ನಾನಲ್ಲ ಲಕ್‌ನಿಂದ ಬಂದಿರೋದು" ಎಂದು ಅಭಿಷೇಕ್ ಹೇಳಿದ್ದಾರೆ.

Bigg Boss 12: ಈ ಎಲ್ಲ ವಿಷಯಗಳು ಚರ್ಚೆ ಆಗಲೇಬೇಕು! ಕಿಚ್ಚನಿಗೆ ವೀಕ್ಷಕರಿಂದ ಒತ್ತಾಯ

ರಘು ಹೇಳಿದ್ದೇನು?

ಅಭಿಷೇಕ್‌ ಮಾತಿಗೆ ರಿಪ್ಲೈ ನೀಡಿದ ರಘು, "ಅಭಿಷೇಕ್‌ ಎಲ್ಲೋ ಕನ್ಫ್ಯೂಸ್‌ ಮಾಡಿಕೊಂಡಿದ್ದಾರೆ. ನಾನ್ಯಾವತ್ತು ಅಭಿಷೇಕ್‌ನ ನಾಮಿನೇಟ್‌ ಕೂಡ ಮಾಡಿಲ್ಲ. ಅಭಿಷೇಕ್‌ನ ನಾನು ಎರಡು ವಾರ ಸೇವ್‌ ಮಾಡಿದ್ದೀನಿ. ಅಭಿಷೇಕ್‌ನ ನಾನ್ಯಾವತ್ತು ಲಕ್ಕಿ ಅಂತ ಕರೆದಿದ್ದೇನೋ ನನಗಂತೂ ಜ್ಞಾಪಕಕ್ಕೆ ಬರುತ್ತಿಲ್ಲ" ಎಂದು ಹೇಳಿದ್ದಾರೆ.

ಅಭಿಷೇಕ್‌ ನಿರ್ಧಾರದಿಂದಾಗಿ ರಘು ನೇರವಾಗಿ ನಾಮಿನೇಟ್‌ ಆದರು ಹಾಗೂ ಬೇರೆಯವರನ್ನು ನಾಮಿನೇಟ್‌ ಮಾಡುವ ಅಧಿಕಾರವನ್ನು ಕೂಡ ಕಳೆದುಕೊಂಡರು. ಇದು ಒಂದು ರೀತಿಯಲ್ಲಿ ಅವರಿಗೆ ಶಾಕ್‌ ಆಗಿತ್ತು.