Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್ ಅಡಿಕ್ಟ್ ಅಲ್ಲʼ; ಕಾಕ್ರೋಚ್ ಸುಧಿ ಫಸ್ಟ್ ರಿಯಾಕ್ಷನ್
Bigg Boss Kannada 12 Elimination: ಕಾಕ್ರೋಚ್ ಸುಧಿ ಅವರು ಏಳು ವಾರಗಳ ನಂತರ ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. "ನಾನು ಹುಲಿ ವೇಷದಲ್ಲಿರುವ ಹಸು, ಡ್ರಗ್ ಅಡಿಕ್ಟ್ ಅಲ್ಲ" ಎಂದು ತಮ್ಮ ಬಗ್ಗೆ ಇರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರಗಳು ವರ್ಕ್ ಆಗುವುದಿಲ್ಲ ಎಂದಿದ್ದಾರೆ ಸುಧಿ.
-
ಬಿಗ್ ಬಾಸ್ ಮನೆಯಲ್ಲಿ 7 ವಾರ ಇದ್ದ ಕಾಕ್ರೋಚ್ ಸುಧಿ, ಈಗ ಅಚ್ಚರಿಯ ರೀತಿಯಲ್ಲಿ ಹೊರಬಂದಿದ್ದಾರೆ. ಅವರು ಎಲಿಮಿನೇಟ್ ಆಗಿ ಹೊರಗೆ ಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಬಿಗ್ ಬಾಸ್ ಶೋಗೆ ಹೋಗಿಬಂದಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. "ನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್ ಅಡಿಕ್ಟ್ ಅಲ್ಲ" ಎಂದು ಸ್ಪಷ್ಟನೆಯನ್ನು ಸಹ ಕಾಕ್ರೋಚ್ ಸುಧಿ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರ ವರ್ಕ್ ಆಗಲ್ಲ
"ಬಿಗ್ ಬಾಸ್ ಮನೆಯಲ್ಲಿ ಯಾವ ಲೆಕ್ಕಾಚಾರಗಳು ವರ್ಕ್ ಆಗಲ್ಲ. ನಾವು ಏನೇ ಅಂದುಕೊಂಡು ಹೋದರೂ, ಅಲ್ಲಿ ಅದು ವರ್ಕ್ ಆಗೋದಿಲ್ಲ. ನನಗೆ ಈ ಶೋಗೆ ಹೋಗುವುದಕ್ಕೆ ಅವಕಾಶ ಸಿಕ್ಕಿದ್ದೇ ನನಗೆ ಖುಷಿ. ಎಲ್ಲರಿಗೂ ಇದು ಸಿಗೋದಿಲ್ಲ. ನನಗೆ ಮುಂಚಿನಿಂದಲೂ ಆಫರ್ ಬರ್ತಿತ್ತು. ಆದರೆ ಸಿನಿಮಾಗಳು ಇರುವ ಕಾರಣ, ಹೋಗೋದಕ್ಕೆ ಆಗುತ್ತಿರಲಿಲ್ಲ. ಆದರೆ ಈ ಸಲ ಆಫರ್ ಬಂತು ಹೋದೆ. ನಾನು ಬದುಕನ್ನೇ ಲೆಕ್ಕ ಹಾಕಿಕೊಂಡು ಬದುಕಲ್ಲ. ಈ ಶೋನಲ್ಲಿ ನಾನು ಆ ಥರ ಲೆಕ್ಕಾಚಾರ ಹಾಕಿಕೊಂಡಿರಲಿಲ್ಲ" ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ.
BBK 12: ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್ ಆದ ʻಕಾಕ್ರೋಚ್ʼ ಸುಧಿಗೆ ಬಿಗ್ ಬಾಸ್‌ನಿಂದ ಸಿಕ್ಕ ಹಣವೆಷ್ಟು?
ನಾನು ಡ್ರಗ್ ಅಡಿಕ್ಟ್ ಅಲ್ಲ
"ಈ ಹಿಂದೆಯೂ ಹೇಳಿದ್ದೇನೆ, ನಾನು ಹುಲಿ ವೇಷದಲ್ಲಿರುವ ಹಸು ಅಂತ. ನನ್ನ ಕಣ್ಣು, ಕೂದಲು ನೋಡಿದವರು ನಾನು ಭಯಂಕರ ರಾಕ್ಷಸ ಎಂದುಕೊಳ್ಳುತ್ತಾರೆ. ನನ್ನ ಕಣ್ಣು ಹುಟ್ಟಿದಾಗಿನಿಂದಲೂ ಹೀಗೇ ಇದೆ. ನಾನು ಏನು ಮಾಡಲಿ? ಬಿಗ್ ಬಾಸ್ ಮನೆಯಲ್ಲಿ ನಾನು ಯಾವ ರೀತಿ ಕಂಡೆನೋ, ಅದೇ ನಿಜವಾದ ನಾನು. ಇಂಡಸ್ಟ್ರೀಯಲ್ಲಿ ಒಂದು ಮಾತಿದೆ, ಸುಧಿ ಡ್ರಗ್ ಅಡಿಕ್ಟ್ ಅಂತ. ನಾನು ಎಲ್ಲಿ ಬೇಕಾದರೂ ಅಣೆ ಮಾಡುತ್ತೇನೆ, ನಾನು ಡ್ರಗ್ ಅಡಿಕ್ಟ್ ಅಲ್ಲ. ಸಿಗರೇಟ್ ಸೇದಿದ್ದೇನೆ, ಅಪರೂಪಕ್ಕೆ ಪಾರ್ಟಿಗಳಲ್ಲಿ ಎಣ್ಣೆ ಹಾಕಿದ್ದೇನೆ. ಇದೆಲ್ಲಾ ನನ್ನ ಫ್ಯಾಮಿಲಿ, ಫ್ರೆಂಡ್ಸ್‌ಗೂ ಗೊತ್ತು" ಎಂದು ಸುಧಿ ಹೇಳಿದ್ದಾರೆ.
Bigg Boss Kannada 12: ಕಾಡಿ ಬೇಡಿ ಬಿಗ್ ಬಾಸ್ ಮನೆ ಒಳಗೆ ಹೋಗಿರೋದು ಯಾರು? ಜಾಹ್ನವಿಗೆ ಕಿಚ್ಚನ ನೇರ ಪ್ರಶ್ನೆ
50 ಕೋಟಿ ಇದ್ರೂ ಬಿಗ್ ಬಾಸ್‌ಗೆ ಹೋಗೋಕೆ ಆಗಲ್ಲ
"ನಿಮ್ಮತ್ರ ಎಷ್ಟೇ ದುಡ್ಡಿರಲಿ, ಎಷ್ಟೇ ಪ್ರಭಾವಿಯಾಗಿರಲಿ, ಅದರಿಂದ ಬಿಗ್ ಬಾಸ್‌ಗೆ ಹೋಗೋದಕ್ಕೆ ಆಗಲ್ಲ. ನನ್ನ ಹತ್ರ 3 ಲಕ್ಷ ರೂ. ಇದ್ದರೆ ದುಬೈಗೆ ಹೋಗಬಹುದು, 1.50 ಲಕ್ಷ ರೂ. ಇದ್ದರೆ, ಥಾಯ್‌ಲೆಂಡ್‌ಗೆ ಹೋಗಬಹುದು. ನನ್ನ ಹತ್ರ 50 ಕೋಟಿ ರೂ. ಇದ್ರೂ ಬಿಗ್ ಬಾಸ್‌ಗೆ ಹೋಗೋಕೆ ಆಗಲ್ಲ. ನನಗೆ ಆ ಅವಕಾಶ ಸಿಕ್ಕಿತ್ತು. ನಾನು ಹೋಗಿಬಂದಿದ್ದೇನೆ. ನನಗೆ ಖುಷಿ ಇದೆ" ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ.
ಬಿಗ್ ಬಾಸ್‌ನಿಂದ ದೊಡ್ಡ ಹೆಸರು ಸಿಗುತ್ತದೆ
"ತುಂಬಾ ದೊಡ್ಡ ಹೆಸರು ತಂದುಕೊಡುವ ಶೋ ಬಿಗ್ ಬಾಸ್. ಮಲ್ಲಮ್ಮ ಅವರು ಈಗ ಇಡೀ ರಾಜ್ಯಕ್ಕೆ ಗೊತ್ತಾಗಿದ್ದಾರೆ. ಈ ಶೋನಿಂದ ಆಚೆ ಹೋದವರು ಇನ್ನೂ ದೊಡ್ಡ ಹೆಸರು ಮಾಡುತ್ತಾರೆ. ಕ್ಯಾಬ್ ಅಲ್ಲಿ ಓಡಾಡುತ್ತಿದ್ದವರೆಲ್ಲಾ, ಈಗ ಸ್ವಂತ ಕಾರು ತೆಗೆದುಕೊಂಡಿದ್ದಾರೆ. ಕಲರ್ಸ್ ಅವರು ತುಂಬಾ ಒಳ್ಳೆಯ ಸಂಭಾವನೆ ಕೊಡುತ್ತಾರೆ. ದೊಡ್ಡ ಹೆಸರನ್ನು ಕೂಡ ಈ ಶೋ ನೀಡುತ್ತದೆ" ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ.