ಬಿಗ್ ಬಾಸ್ನಲ್ಲಿ (Bigg Boss Kannada 12) ಗಿಲ್ಲಿ ನಟ (Gilli Nata) ವೀಕ್ಷಕರ ಎಂಟರ್ಟೈನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಾಸ್ ಮನೆಯ ಆಚೆ ಕೂಡ ಗಿಲ್ಲಿ ಹವಾ ಜೋರಾಗಿದೆ. ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಎಂಟ್ರಿ ನೀಡಿದ್ದ ರಜತ್ (Rajath) ಕಳೆದ ವಾರ ಮನೆಯಿಂದ ಆಚೆ ಬಂದಿದ್ದಾರೆ. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ (Interview) ರಜತ್ ಮಾತನ್ನಾಡಿದರು. ಗಿಲ್ಲಿ ಎಲ್ಲವನ್ನೂ ನೇರವಾಗಿ ಹೇಳ್ತಾರೆ. ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳಲ್ಲ. ಅದು ಮನೆಯವರಿಗೆ ಡ್ರಾಮಾ ಎನಿಸಬಹುದು ಎಂದು ಹಲವಾರು ವಿಚಾರಗಳನ್ನು ಹಂಚಿಕೊಂಡರು.
ತುಂಬಾ ಟ್ಯಾಲೆಂಟ್ ಮನುಷ್ಯ!
ಹೋದ ಸೀಸನ್ ನಾನು ಹೀಗೆ ಇದ್ದೆ. ಆದರೆ ಈ ಸೀಸನ್‌ನಲ್ಲಿ ಗಿಲ್ಲಿಗೂ ನಂಗೂ ಮ್ಯಾಚ್ ಆಯ್ತು. ಅವನು ಚೆನ್ನಾಗಿ ಹಚ್ಚಿಕೊಂಡಿದ್ದ. ಗಿಲ್ಲಿ ಕೆಲವೊಮ್ಮೆ ರೆಗಿಸೋದು ಕೆಲವೊಮ್ಮೆ ಪರ್ಸನಲ್ ಆಗಿ ಬಿಡುತ್ತಿತ್ತು. ನಾನು ಹೋದಾಗ ಆ ಥರ ಮಾತುಗಳು ಆಡಿಲ್ಲ. ನಾನು ಗಿಲ್ಲಿ ಎದುರು ಹಾಕಿಕೊಳ್ಳೋಕೆ ನಾನು ಒಳಗೆ ಹೋಗಿಲ್ಲ.
ಇದನ್ನೂ ಓದಿ: BBK 12: ʻಆ ವಿಚಾರದಲ್ಲಿ ಅಶ್ವಿನಿ ಗೌಡ ಎಕ್ಸ್‌ಪರ್ಟ್, ರಕ್ಷಿತಾ ಇನ್ನೊಸೆಂಟ್ ಕಿಲಾಡಿʼ; ರಜತ್ ಹಿಂಗ್ಯಾಕೆ ಹೇಳಿದ್ರು?
ನಾನೆಲ್ಲೂ ಅವನನ್ನು ಕಡಿಮೆ ಮಾಡಲು ಹೋಗಿಲ್ಲ. ಅವನು ತುಂಬಾ ಟ್ಯಾಲೆಂಟ್ ಮನುಷ್ಯ. ತುಂಬಾ ಖುಷಿ ಆಗ್ತಾ ಇತ್ತು ಅವನ ಜೊತೆ ಇರೋಕೆ. ಇನ್ನು ಒಳಗಡೆ ಅರ್ಧಕರ್ದ ಜನಕ್ಕೆ ಆಟನೇ ಗೊತ್ತಿಲ್ಲ. ಅಶ್ವಿನಿ ಅವರ ಜೊತೆ ಇರೋಕೆ ಟ್ರೈ ಮಾಡಿದೆ ಆದರೆ ನಂಗೆಆಗಿಲ್ಲ. ಹಲವಾರು ಜೊತೆ ವೈಬ್ ಮ್ಯಾಚ್ ಆಯ್ತು ಎಂದಿದ್ದಾರೆ.
ವಿಶ್ವವಾಣಿ ಸಂದರ್ಶನ ವಿಡಿಯೋ
ನೂರಾರು ರೀತಿಯಲ್ಲಿ ಅರ್ಥ ಮಾಡಿಕೊಳ್ತಾರೆ
ನಾಮಿನೇಶನ್ ಅದೆಲ್ಲ ಇದುವರೆಗೂ ಅಲ್ಲಿ ಯಾರಿಗೂ ಗೊತ್ತಾಗಲ್ಲ. ನಾನು ಯಾವತ್ತೂ ಒಂದು ಸೈಡ್ ಯೋಚನೆ ಮಾಡಲ್ಲ. ತಿಳಿದುಕೊಂಡೆ ಮಾತಾಡ್ತೀನಿ. ಅಶ್ವಿನಿ ವಿಚಾರಕ್ಕೆ ಬಂದರೆ ಅವರು ಹೇಗೆ ಅಂದರೆ ಒಂದು ವಿಚಾರವನ್ನ ನಾವು ಹೇಳಿದ್ವಿ ಅಂದರೆ ನೂರಾರು ರೀತಿಯಲ್ಲಿ ಅರ್ಥ ಮಾಡಿಕೊಳ್ತಾರೆ. ನನಗೆ ಅಂಥವರು ನೋಡಿದ್ರೆ ಮೋದಲೇ ಆಗಲ್ಲ. ನಂದು ಅವರದ್ದು ತುಂಬಾ ದೊಡ್ಡ ಸೀನ್ ಆಗಿತ್ತು. ಎಲ್ಲಿಯೂ ಅದು ನಾನು ಹೇಳಂಗಿಲ್ಲ. ಬಿಗ್ ಬಾಸ್‌ಗೆ ನಾನು ರಿಕ್ವೆಸ್ಟ್ ಮಾಡಿದ್ದೆ ಎಂದರು.
ಇನ್ನು ರಕ್ಷಿತಾ ವಿಚಾರವಾಗಿ ಮಾತನಾಡಿ, ರಕ್ಷಿತಾಗೆ ಕಾವ್ಯ-ಸ್ಪಂದನಾ ಅಂದರೆ ಆಗಲ್ಲ. ಅದು ಗಿಲ್ಲಿ ಕಾರಣಕ್ಕೆ ಅಲ್ಲ. ರಕ್ಷಿತಾ ತೀರಾ ಒಳ್ಳೆಯವಳು. ಆದರೆ ತಲೆ ಕೆಟ್ಟರೆ ಮಾರಿ. ಎಲ್ಲೋ ಕಾವ್ಯ, ಸ್ಪಂದನಾ ಕೂಡ ಟಾರ್ಗೆಟ್ ಮಾಡ್ತಾರೆ. ಧ್ರುವಂತ್ ಮಾತಾಡೋದು ಕಲೆವೊಂದು ಸರಿ ಅನ್ಸಲ್ಲ ನಂಗೆ.
ಇದನ್ನೂ ಓದಿ: Bigg Boss Kannada 12: ಮಕ್ಕಳಿಗೂ ಮಾಳು ಸ್ಟೈಲ್ನಲ್ಲೇ ಹೇರ್ಸ್ಟೈಲ್! ಫ್ಯಾಮಿಲಿ ಸರ್ಪ್ರೈಸ್‌ಗೆ ಕಣ್ಣೀರಾದ ರಘು
ಗಿಲ್ಲಿ ಒಳ್ಳೆ ಸ್ನೇಹಕ್ಕೆ ಗೌರವ ಕೊಡ್ತಾನೆ. ಅವನನ್ನು ನಂಬಿದರೆ ಕೈ ಬಿಡಲ್ಲ. ಒಳಗಡೆ ಅವರಿಗೆ ಹೊರಗಡೆ ಏನಾಗ್ತಿದೆ ಅನ್ನೋದು ಗೊತ್ತಾಗ್ತಿಲ್ಲ. ಗಿಲ್ಲಿ ಚೆನ್ನಾಗಿ ಆಡುತ್ತಿದ್ದಾನೆ. ಫಿಸಕಲ್ ಟಾಸ್ಕ್ ಅಂದರೆ ಗಿಲ್ಲಿ ಯೋಚನೆ ಮಾಡ್ತಾನೆ. ಮೆಂಟಲಿ ಗೇಮ್ ಅವನು ಚೆನ್ನಾಗಿ ಆಡ್ತಾನೆ. ಅವನು ಕ್ಯಾಪ್ಟನ್ ಆದರೆ ನಂಗೆ ತುಂಬಾ ಖುಷಿ ಆಗತ್ತೆ ಎಂದರು.