ವೀಕೆಂಡ್ ಬಂತು ಅಂದರೆ ಕಿಚ್ಚ ಸುದೀಪ್ (Bigg Boss Kannada 12) ಅವರ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಾರೆ. ಚೈತ್ರಾ ಕುಂದಾಪುರ (Chaithra Kundapura) ಅವರ ಉಸ್ತುವಾರಿ ಚರ್ಚೆಗೆ ಕಾರಣ ಆಯಿತು. ಈ ವಾರ ಸುದೀಪ್ ಅವರು ಇದರ ಪಂಚಾಯ್ತಿ ಮಾಡಲಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ (Colors Kannada) ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಇನ್ನೊಂದು ಪ್ರೋಮೋ ಔಟ್ ಆಗಿದೆ. ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮತ್ತು ಚೈತ್ರಾ ಮನೆ ಮಂದಿಗೆ ಫೈಟ್ ಕೊಡುತ್ತಿದ್ದಾರೆ. ರಜತ್ (Rajath) ಇದ್ದವರು ಅಶ್ವಿನಿ ಅವರ ವಿರುದ್ಧ ಕಳೆದ ವಾರ ಸಾಕಷ್ಟು ಮಾತನಾಡಿದ್ದರು. ಈ ಬಗ್ಗೆ ಸುದೀಪ್ ಅವರ ಮುಂದೆ ಅಶ್ವಿನಿ(Ashwini Gowda) ಬೇಸರ ವ್ಯಕ್ತಪಡಿಸಿದ್ದಾರೆ.
ಹೇ ಸುಬ್ಬಿ ಆ ಮುದುಕಿಯನ್ನ ಹೊಡೀತಿನಿ
ಮೊದಲಿಗೆ ಸುದೀಪ್ ಅವರು ಮನೆಯಲ್ಲಿ ರಿಯಾಕ್ಷನ್ ಹೇಗಿದೆ ಅಂತ ಕೇಳಿದ್ದಾರೆ. ಅದಕ್ಕೆ ಚೈತ್ರಾ ಇದ್ದವರು ಸೂರಜ್ ಹಾಗೂ ಅಶ್ವಿನಿ ಅವರ ರಾಶಿಕಾ ಅವರನ್ನ ಕ್ಯಾಪ್ಟನ್ ಅಂತ ಒಪ್ಪಿಕೊಳ್ಳುತ್ತಿಲ್ಲ ಎಂದರು. ರಜತ್ ಕೂಡ, ಅಶ್ವಿನಿ ಅವರು ತುಂಬಾ ಸುಲಭವಾಗಿ ಬಗೆಹರಿಯುವ ವಿಚಾರವನ್ನ ವರ್ಸ್ಟ್ ಮಾಡಿಬಿಟ್ರು ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ವಿಲನ್ ಚಾಲೆಂಜ್ಗೆ ಗಿರ್ ಅಂತಿದೆ ಕಂಟೆಸ್ಟೆಂಟ್ಸ್ ತಲೆ; ಮಾಳು ಹೊಸ ಲುಕ್ ನೋಡ್ರಪ್ಪ!
ಇದು ಅಶ್ವಿನಿ ಅವರಿಗೆ ಕೋಪ ತರಿಸಿದೆ. ರಜತ್ ಯಾಕೆ ಇಷ್ಟು ಸ್ಟುಪಿಡ್ ಆಗಿ ಮಾತಾಡ್ತಾ ಇದ್ದಾರೆ ಗೊತ್ತಿಲ್ಲ. ಸುಮ್ಮಸುಮ್ಮನೆ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ರಜತ್ ಹಾಗೂ ಚೈತ್ರಾ ಇಬ್ಬರೂ. ನನ್ನ ತಂಟೆಗೆ ಬರಬಾರದು. ಹೇ ಸುಬ್ಬಿ ಆ ಮುದುಕಿಯನ್ನ ಹೊಡೀತಿನಿ ಕಣೋ ಅಂತಾರೆ. ಬಿಗ್ ಬಾಸ್ ಮನೆಗೆ ಕಂಟೆಸ್ಟ್‌ಗಳನ್ನ ಕರೇಸಿದ್ದೀರಾ ಅಥವಾ ಬೇರೆ ಯಾವುದಾದರೂ ಎಲಿಮೆಂಟ್ ಕರೆಸಿದ್ದೀರಾ? ಸೀಸನ್12ರಲ್ಲಿ ಯಾರೂ ಇವರಷ್ಟು ಕಳಪೆ ಇಲ್ಲ. ನಾನು ಎದೆ ತಟ್ಟುಕೊಂಡು ಹೇಳ್ತೀನಿ ಎಂದಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಯಾರು ಔಟ್?
ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ. ಆದರೆ ಟ್ವಿಸ್ಟ್ ಏನಪ್ಪ ಅಂದರೆ, ಈ ವಾರ ವೋಟಿಂಗ್ ಲೈನ್ಸ್ ಓಪನ್ ಇಲ್ಲ. ಹೀಗಾಗಿ ಎಲಿಮಿನೇಶನ್ ಖಂಡಿತ ಇರಲ್ಲ. ಆದ್ರೂ ಇಬ್ಬರೂ ಹೊರಗೆ ಬರ್ತಾರೆ ಅನ್ನೋದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಚರ್ಚೆಗಳು ಆಗುತ್ತಿವೆ.
ಈ ವಾರ ಕ್ಯಾಪ್ಟನ್ ಆಗಿ ಅಭಿಷೇಕ್ ಶ್ರೀಕಾಂತ್ - ಸ್ಪಂದನಾ ಸೋಮಣ್ಣ ಆಯ್ಕೆ ಆಗಿದ್ದರು. ಆದರೆ, ಅಭಿಷೇಕ್ ಶ್ರೀಕಾಂತ್ ಔಟ್ ಆದರು. ವಿಲನ್ ಕೊಟ್ಟ ಬಿಗ್ ಟ್ವಿಸ್ಟ್‌ನಿಂದಾಗಿ ಸ್ಪಂದನಾ ಸೋಮಣ್ಣ ಜಾಗಕ್ಕೆ ಚೈತ್ರಾ ಕುಂದಾಪುರ ಬಂದರು. 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಈ ವಾರ ರಜತ್, ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ನಾಮಿನೇಟ್ ಆಗಿದ್ದರು. ಈ ವಾರವು ವೋಟಿಂಗ್ ಲೈನ್ಸ್ ಒಪನ್ ಆಗಿಲ್ಲ. ಹೀಗಾಗಿ ಎಲಿಮಿನೇಶನ್ ನಡೆಯೋದಿಲ್ಲ.
ಇದನ್ನೂ ಓದಿ: Bigg Boss Kannada 12: ವಿಲನ್ ಚಾಲೆಂಜ್ಗೆ ಗಿರ್ ಅಂತಿದೆ ಕಂಟೆಸ್ಟೆಂಟ್ಸ್ ತಲೆ; ಮಾಳು ಹೊಸ ಲುಕ್ ನೋಡ್ರಪ್ಪ!
ಚೈತ್ರಾ ಕುಂದಾಪುರ, ರಜತ್ ಅವರು ವೈಲ್ಡ್‌ಕಾರ್ಡ್ ಸ್ಪರ್ಧಿಗಳಲ್ಲ, ಅತಿಥಿಗಳು, ಇವರೇ ಮನೆಯಿಂದ ಆಚೆ ಹೋಗ್ತಾರೆ ಎಂದು ಚರ್ಚೆಗಳು ಆಗುತ್ತಿವೆ. ಹೀಗಾಗಿ ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ ಅಂತ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ವಾರ ಯಾರನ್ನೂ ಕಳಿಸದೆ, ಮುಂದಿನ ವಾರ ಡಬಲ್ ಎಲಿಮಿನೇಶನ್ ನಡೆಯಲಿದೆ ಎನ್ನಲಾಗಿದೆ.