ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಅಶ್ವಿನಿ ಸೈಲೆಂಟ್‌ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್‌ ಹೇಳಿಕೆಗೆ ಫ್ಯಾನ್ಸ್‌ ಕೆಂಡ

Dhanush: ಮನೆಯಲ್ಲಿ ಸ್ಪರ್ಧಿಗಳು ಗಿಲ್ಲಿ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ವೀಕೆಂಡ್‌ ಮುಗಿದ ಬಳಿಕ ಗಿಲ್ಲಿ ವಿರುದ್ಧ ಅನೇಕ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ಗಿಲ್ಲಿ ಕುಚಿಕು ಕಾವ್ಯ ಬಳಿ ಧನುಷ್‌ ಅವರು ದೂರು ಹೇಳಿದ್ದಾರೆ. ಅಶ್ವಿನಿ ಇದ್ದರೆ ಗಿಲ್ಲಿಗೆ ಮೈಲೇಜ್‌ ಎಂದಿದ್ದಾರೆ. ಸದ್ಯ ಮನೆಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮಾಜಿ ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಈಗ ಬಿಬಿ ರೆಸಾರ್ಟ್‌ ಆಗಿದೆ. ಆ ಮನೆಯೊಳಗೆ ಉಗ್ರಂ ಮಂಜು, ರಜತ್‌, ಮೋಕ್ಷಿತಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಮುಂತಾದವರು ಆಗಮಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಸ್ಪರ್ಧಿಗಳು ಗಿಲ್ಲಿ (Gilli Nata) ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ವೀಕೆಂಡ್‌ ಮುಗಿದ ಬಳಿಕ ಗಿಲ್ಲಿ ವಿರುದ್ಧ ಅನೇಕ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ಗಿಲ್ಲಿ ಕುಚಿಕು ಕಾವ್ಯ (Kavya Shaiva) ಬಳಿ ಧನುಷ್‌ (Dhanush) ಅವರು ದೂರು ಹೇಳಿದ್ದಾರೆ. ಅಶ್ವಿನಿ ಇದ್ದರೆ ಗಿಲ್ಲಿಗೆ ಮೈಲೇಜ್‌ ಎಂದಿದ್ದಾರೆ.

ಧನುಷ್‌ ಹೇಳಿದ್ದೇನು?

`ಗಿಲ್ಲಿನೇ ಕೆದಕಿ ಕೆದಕಿ ಅಶ್ವಿನಿ ಅವರ ಹತ್ತಿರ ಜಗಳ ಮಾಡ್ತಾನೆ. ಅವನಿಗೆ ಸದ್ಯ ಯಾರೂ ಇಲ್ಲ. ಅವನು ಕಟೆಂಟ್‌ಗೆ ಹುಡುಕ್ತಾ ಇದ್ದಾನೆ. ಅಶ್ವಿನಿ ಅವರು ಸೈಲೆಂಟ್‌ ಇರೋದೇ ಗಿಲ್ಲಿಗೆ ಸಮಸ್ಯೆ ಆಗ್ತಿದೆ. ಅಶ್ವಿನಿ ಅವರಿಗೆ ಇದು ಸಮಸ್ಯೆ ಇಲ್ಲ. ಗಿಲ್ಲಿ ಅವರಿಗೇ ಸಮಸ್ಯೆ'.

ಇದನ್ನೂ ಓದಿ: Bigg Boss Kannada 12: ಇದೊಂದು ಕಾರಣಕ್ಕೆ ಅಶ್ವಿನಿ ಹಿಂದೆ ಬಿದ್ದಿದ್ದಾರಂತೆ ಜಾಹ್ನವಿ! ಧ್ರುವಂತ್‌ ಹೊಸ ಆರೋಪ

`ಅದು ಎದ್ದು ಕಾಣಿಸುತ್ತಿದೆ. ಸುದೀಪ್‌ ಅವರು ಆ ಲೈನ್‌ ಚೇಂಜ್‌ ಮಾಡಬೇಕು. ರಘು ಅವರಿಗೆ ಗಿಲ್ಲಿ ಇದ್ದರೆ ಮೈಲೇಜ್‌ ಅಂತ. ಅಶ್ವಿನಿ ಇದ್ದರೆ ಗಿಲ್ಲಿಗೆ ಮೈಲೇಜ್‌' ಎಂದಿದ್ದಾರೆ. ಅಶ್ವಿನಿ ಗೌಡ ಅವರು ವುಮನ್ ಕಾರ್ಡ್ ಪ್ಲೇ ಮಾಡಲು ಹೋಗಿ ಸುದೀಪ್‌ ಅವರ ಹತ್ತಿರ ಉಗಿಸಿಕೊಂಡಿದ್ದರು. ಅಲ್ಲಿಂದ ಅವರು ಸೈಲೆಂಟ್‌ ಆಗಿದ್ದಾರೆ.

ಗಿಲ್ಲಿ ಅವರ ಗೆಲ್ಲುವುದು ಕನ್​ಫರ್ಮ್​. ಅವರಿಗೆ ಯಾರ ಮೈಲೇಜೂ ಬೇಡ. ಅವರು ಇದ್ದರೇನೇ ಬಿಗ್​ಬಾಸ್​ಗೂ ಮೈಲೇಜು, ನಿಮ್ಮೆಲ್ಲರಿಗೂ ಮೈಲೇಜು. ಸುಮ್ಮನೇ ಅವರ ವಿರುದ್ಧ ಮಾತನಾಡಬೇಡಿ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

ಮಾಜಿ ಸ್ಪರ್ಧಿಗಳು ಎಂಟ್ರಿ

ಸದ್ಯ ಮನೆಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮಾಜಿ ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಈಗ ಬಿಬಿ ರೆಸಾರ್ಟ್‌ ಆಗಿದೆ. ಆ ಮನೆಯೊಳಗೆ ಉಗ್ರಂ ಮಂಜು, ರಜತ್‌, ಮೋಕ್ಷಿತಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಮುಂತಾದವರು ಆಗಮಿಸಿದ್ದಾರೆ. ಬಿಗ್‌ ಬಾಸ್‌ ಮನೆಯೊಳಗೆ ಅತಿಥಿಯಾಗಿ ಹೋಗಿರುವ ಉಗ್ರಂ ಮಂಜು ಅವರಿಗೆ ಈಚೆಗೆ ಮದುವೆ ಫಿಕ್ಸ್‌ ಆಗಿದೆ. ಈ ವಿಚಾರವನ್ನು ಬಿಗ್‌ ಬಾಸ್‌ ಅವರು ಹೇಳಿದ್ದಾರೆ.

ಕಲರ್ಸ್‌ ಕನ್ನಡ ಪ್ರೋಮೋ



ಗಿಲ್ಲಿಗೆ ಮಂಜು ವಾರ್ನಿಂಗ್‌

"ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.." ಎಂದು ಬಿಗ್‌ ಬಾಸ್‌ ತಿಳಿಸಿದ್ದಾರೆ. ಆಗ ಎಲ್ಲರೂ ಓಹೋ ಎಂದು ಕಿರುಚಿದ್ದಾರೆ. ಆದರೆ. ಗಿಲ್ಲಿ ನಟ ಮಾತ್ರ, "ಎರಡನೇಯದ್ದ.. ಮೂರನೇಯದ್ದ.." ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?

ಆಗ ಗಿಲ್ಲಿ ಕಡೆ ಮಂಜು ಲುಕ್‌ ಕೊಟ್ಟಿದ್ದಾರೆ. ಪ್ರೋಮೋದಲ್ಲಿರುವ ನೆಕ್ಟ್ಸ್‌ ಡೈಲಾಗ್‌ ಏನಪ್ಪ ಅಂದ್ರೆ, "ಕೆಲವೊಂದು ಪರ್ಸನಲ್‌ಗೆ ಅಂತ ಬಂದುಬಿಟ್ರೆ ನೀನು ಸಪ್ಲೇಯರ್ ಅಲ್ಲ, ನಾನು ಅತಿಥಿನೂ ಅಲ್ಲ.. ಬೇರೆ ಆಗಿಬಿಡ್ತಿವಿ" ಎಂದು ಮಂಜು ವಾರ್ನಿಂಗ್‌ ಗಿಲ್ಲಿಗೆ ಕೊಟ್ಟಿದ್ದಾರೆ.

Yashaswi Devadiga

View all posts by this author