Bigg Boss Kannada 12: ಸೈಲೆಂಟ್ ಆಗಿರೋ ಅಶ್ವಿನಿ ಗೌಡರನ್ನ ಮತ್ತೆ ಕೆಣುಕಿದ ಗಿಲ್ಲಿ! ಏನಿದು ಅಶ್ವಿನಿ 2.0?
Gilli Nata: ನಾಮಿನೇಶನ್ ಮೊದಲು ಜಾಹ್ನವಿ ಹಾಗೂ ಅಶ್ವಿನಿ, ಸ್ಪಂದನಾ ಸೊಪ್ಪು ಬಿಡಿಸಿಕೊಂಡು ಕೂತಿದ್ದರು. ಇದನ್ನು ಗಮನಿಸಿದ ಗಿಲ್ಲಿ, 2.0 ಅಂದರೆ ಇದೇನಾ? ಆಟ ಏನು ಕಾಣಿಸ್ತಾ ಇಲ್ಲ ಅನ್ನೋ ಅರ್ಥದಲ್ಲಿ ಜಾಹ್ನವಿ ಹಾಗೂ ಅಶ್ವಿನಿಗೆ ಕಾಲೆಳೆದರು. ಗಿಲ್ಲಿ ಮಾತುಗಳಿಗೆ ಸಖತ್ ಟ್ರಿಗರ್ ಆಗ ಅಶ್ವಿನಿ ಅವರು, ʻನಿನ್ನನ್ನು ಮೆಚ್ಚಿಸಲು ನಾನು ಇಲ್ಲಿ ಬಂದಿಲ್ಲ. ನನ್ನ ಗೇಮ್, ನನ್ನ ಸ್ಟ್ರಾಟಜಿ ಬಗ್ಗೆ ಗೊತ್ತಿದೆ. ನಾನು ನಿನ್ನ ವಿಚಾರಗಳನ್ನು ಮಾತಾಡಿದಾಗ ಪ್ರತಿ ಸಂದರ್ಭದಲ್ಲೂ ಸಮರ್ಥನೆ ಕೊಡಬೇಕು ಅಂತೇನೂ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ನಾಮಿನೇಶನ್ ಪ್ರಕ್ರಿಯೆಗೂ (Nomination) ಮುಂಚೆ ಅಶ್ವಿನಿ (Ashwini Gowda) ಅವರಿಗೆ ಗಿಲ್ಲಿ ನಟ, 2.0 ಬಗ್ಗೆ ಕಾಲೆಳೆದಿದ್ದಾರೆ. ಇದಾದ ಬಳಿಕ ನಾಮಿನೇಷನ್ ವೇಳೆ ಗಿಲ್ಲಿ ಅವರು ಅಶ್ವಿನಿ ಬಗ್ಗೆ ಮಾತನಾಡಿ, ʻಟಫ್ ಕಾಂಪಿಟೇಟರ್ ಅಂದುಕೊಂಡಿದ್ದೆಮೆಂಟಲಿ ತುಂಬಾನೇ ಸ್ಟ್ರಾಂಗ್ ಇರೋರು ಅಂದುಕೊಂಡಿದ್ದೆ. ಯಾವಾಗ ಸಣ್ಣ ಜಗಳವನ್ನು ದೊಡ್ಡದು ಮಾಡಿ, ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳಿದರೋ ಆಗ ಅವರ ಮೇಲಿನ ಓಪಿನಿಯನ್ ಬದಲಾಯ್ತು ಎಂದು ನೇರವಾಗಿ ಹೇಳಿದ್ದಾರೆ. ಗಿಲ್ಲಿಯ ಪಾಯಿಂಟ್ ಟು ಪಾಯಿಂಟ್ ಮಾತಿಗೆ ಅಶ್ವಿನಿ ಗೌಡ ಅವರು ನಿನ್ನನ್ನು ಮೆಚ್ಚಿಸಲು ಇಲ್ಲಿ ಬಂದಿಲ್ಲ ಎಂದಿದ್ದಾರೆ.
2.0 ಅಂದರೆ ಇದೇನಾ?
ನಾಮಿನೇಶನ್ ಮೊದಲು ಜಾಹ್ನವಿ ಹಾಗೂ ಅಶ್ವಿನಿ, ಸ್ಪಂದನಾ ಸೊಪ್ಪು ಬಿಡಿಸಿಕೊಂಡು ಕೂತಿದ್ದರು. ಇದನ್ನು ಗಮನಿಸಿದ ಗಿಲ್ಲಿ, 2.0 ಅಂದರೆ ಇದೇನಾ? ಆಟ ಏನು ಕಾಣಿಸ್ತಾ ಇಲ್ಲ ಅನ್ನೋ ಅರ್ಥದಲ್ಲಿ ಜಾಹ್ನವಿ ಹಾಗೂ ಅಶ್ವಿನಿಗೆ ಕಾಲೆಳೆದರು. ಆಗ ಜಾಹ್ನವಿ ಕೂಡ ಸ್ಪಂದನಾ ಬಳಿ, ಗಿಲ್ಲಿ ನೇರವಾಗಿ ಅಲ್ಲಿ ಕುಳಿತುಕೊಂಡು ಎಲ್ಲರ ಬಗ್ಗೆ ಹೇಳ್ತಾನೆ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಸ್ಪೆಷಲ್ ಗೆಸ್ಟ್‌ಗಳದ್ದೇ ದರ್ಬಾರ್!
ಇದಾದ ಬಳಿಕ ನಾಮಿನೇಶನ್ ಪ್ರಕ್ರಿಯೆ ವೇಳೆ, ಇದೇ 2.0 ವಿಚಾರವನ್ನು ಗಿಲ್ಲಿ ಪ್ರಸ್ತಾಪಿಸಿದರು. ಅಷ್ಟೇ ಅಲ್ಲ ಅಶ್ವಿನಿ ಅವರಿಗೆ ಗೇಮ್ ಇನ್ನೂ ಅರ್ಥ ಆಗಿಲ್ಲ ಎಂದಿದ್ದಾರೆ.
ವೈರಲ್ ವಿಡಿಯೋ
Nam bagge nav helodu vaadike, ade nam bagge haters matadodu avnige iro bedike 🔥🔥🔥🔥🔥
— ÀŔÜÑ (@ArunKumarJV2000) November 24, 2025
Haters please listen this 😌#BBK12 #Gilli #BBKSeason12 pic.twitter.com/Bp5t2sTfP7
ವೀಕ್ ಮೈಂಡ್ ಇರೋರು ಮಾತ್ರ ಹೀಗೆ ಇರ್ತಾರೆ
ಗಿಲ್ಲಿ ಮಾತನಾಡಿ, `ಅಶ್ವಿನಿ ಅವರ ಹೆಸರು ತೆಗೆದುಕೊಳ್ಳಲು ಮುಖ್ಯ ಕಾರಣ, ಅವರು ಟಫ್ ಕಾಂಪಿಪೇಟರ್ ಅಂದಿಕೊಂಡಿದ್ದೆ. ಆದರೆ ಅವರು ತುಂಬಾ ವೀಕ್. ಅಷ್ಟು ಸಣ್ಣ ವಿಚಾರಕ್ಕೆ ಅಷ್ಟೆಲ್ಲ ಅತ್ತು, ಊಟ ಬಿಡೋ ಅವಶ್ಯಕತೆ ಇರಲಿಲ್ಲ. ಬಾಗಿಲು ತೆಗೆಯಿರಿ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳಿದರೋ ಆಗ ಅವರ ಮೇಲಿನ ಓಪಿನಿಯನ್ ಬದಲಾಯ್ತು.
ವೀಕ್ ಮೈಂಡ್ ಇರೋರು ಮಾತ್ರ ಹೀಗೆ ಇರ್ತಾರೆ. ಕ್ಯಾಪ್ಟನ್ಸಿ ಟಾಸ್ಕ್ ಬರುತ್ತೆ. ಅದರಲ್ಲಿ ನಾನು ಹೇಳುತ್ತೇನೆ. ಅಶ್ವಿನಿ ಮೇಡಂ ಟಾಸ್ಕ್ ಅರ್ಥ ಆಗಿಲ್ಲ ಅಂತ. ಅದನ್ನು ಅವರು ತಿರುಚಿ ಬಿಟ್ಟರು. ಬಾಯಲ್ಲಿ ಏನೇನು ಬರುತ್ತೋ ಅದನ್ನು ನೋಡುವುದಕ್ಕೆ ಹಾಗೆ ಮಾಡಿದೆ' ಅಂತಾರೆ ಎಂದರು.
2.0 ಅಂದ್ರೆ ಇದಲ್ಲ ಮೇಡಮ್!
ʻ2.0 ಆಗಬೇಕು ಅಂತ ಅವರು ಇದ್ದಾರೆ. ಆದರೆ ಅವರ ಪ್ರಕಾರ ಸೈಲೆಂಟ್ ಆಗಿದ್ದು ಮಾಡ್ತೀನಿ ಅನ್ನೋ ಯೋಚನೆ ಅಲ್ಲಿ ಇದ್ದಾರೆ. ಮನೆಯಲ್ಲಿ ಓಡಾಡಿಕೊಂಡು, ಸೈಲೆಂಟ್ ಆಗಿದ್ದು, ಸೊಪ್ಪು ಬಿಡಿಸಿಕೊಂಡು ಇದ್ದು ಬಿಡಬೇಕು ಅಂತ ಹೇಳಿದ್ದಲ್ಲʼ ಎಂದಿದ್ದಾರೆ ಗಿಲ್ಲಿ.
ಇದನ್ನೂ ಓದಿ: Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?
ಗಿಲ್ಲಿ ಮಾತುಗಳಿಗೆ ಸಖತ್ ಟ್ರಿಗರ್ ಆಗ ಅಶ್ವಿನಿ ಅವರು, ʻನಿನ್ನನ್ನು ಮೆಚ್ಚಿಸಲು ನಾನು ಇಲ್ಲಿ ಬಂದಿಲ್ಲ. ನನ್ನ ಗೇಮ್, ನನ್ನ ಸ್ಟ್ರಾಟಜಿ ಬಗ್ಗೆ ಗೊತ್ತಿದೆ. ನಾನು ನಿನ್ನ ವಿಚಾರಗಳನ್ನು ಮಾತಾಡಿದಾಗ ಪ್ರತಿ ಸಂದರ್ಭದಲ್ಲೂ ಸಮರ್ಥನೆ ಕೊಡಬೇಕು ಅಂತೇನೂ ಇಲ್ಲ. ಎಲ್ಲಾ ಮಾತಿನಲ್ಲೂ ನಾನು ಸ್ಪಂದಿಸಬೇಕುʼ ಅಂತೇನೂ ಇಲ್ಲ ಎಂದಿದ್ದಾರೆ. ಸುಮ್ಮನಿದ್ದ ಅಶ್ವಿನಿ ಅವರನ್ನು ಮತ್ತೆ ಕೆಣಕ್ಕಿದ್ದಾರೆ ಗಿಲ್ಲಿ.