ಬಿಗ್ ಬಾಸ್ (Bigg Boss Kannada 12) ಇನ್ನು ಅಂತ್ಯ ಹಾಡಲು ಕೆಲವೇ ದಿನ ಬಾಕಿ ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಟಾಸ್ಕ್‌ಗಳು (Finale Task) ಆರಂಭವಾಗಿವೆ. ಎರಡು ವಾರಗಳು ಬಾಕಿ ಇರುವಾಗ ಕಾವ್ಯಾಳನ್ನು (Kavya) ಉಳಿಸಿಕೊಳ್ಳೋದಕ್ಕೆ ಗಿಲ್ಲಿ ನಟ (Gilli Nata) ಭಾರೀ ಕಸರತ್ತು ಮಾಡುತ್ತಿದ್ದಾರೆ ಎಂದು ಕಮೆಂಟ್ ಬೇರೆ ಮಾಡುತ್ತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ಈ ವಾರ ಗಿಲ್ಲಿ ಕ್ಯಾಪ್ಟನ್ ಕೂಡ ಆಗಿದ್ದಾರೆ. ಟಾಸ್ಕ್‌ಗಳ ಉಸ್ತುವಾರಿ ಅವರದ್ದೇ ಆಗಿದೆ. ಹೀಗಿರುವಾಗ ಕಾವ್ಯ ಅವರನ್ನು ಸೇಫ್ ಮಾಡಲು ನೋಡುತ್ತಿದ್ದಾರೆ ಎನ್ನಲಾಗುತ್ತಿದೆ.
ಫೇವರಿಸಮ್ ಮಾಡ್ತಾ ಇದ್ದಾರಾ ಗಿಲ್ಲಿ?
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸೇರಿಕೊಂಡು ಕಾವ್ಯಾಳನನ್ನು ನಾಮಿನೇಟ್ ಮಾಡಿ ಮನೆಯಿಂದ ಹೊರಗೆ ಹಾಕಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದರೂ ಗಿಲ್ಲಿ ಮಾತ್ರ ಕಾವ್ಯಾಳನ್ನು ಸೇವ್ ಮಾಡುತ್ತಲೇ ಫಿನಾಲೆಗೆ ಕರೆದುಕೊಂಡು ಹೋಗುವ ಭಾರೀ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಇದೀಗ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬೇಡ, ಅವರ ಥರ ಇರೋ ಹುಡುಗ ಬೇಕು; ರಕ್ಷಿತಾ ಪುಟ್ಟಿಗೆ ಆಯ್ತು ಕ್ರಶ್!
ತಮಗೆ ಮೀಸಲಿರುವ ಡಬ್ಬದಲ್ಲಿ ಅತಿ ಹೆಚ್ಚು ನೀರು ಹೊಂದಿರುವ ಮಹಿಳಾ ಸದಸ್ಯೆ ಮುಂದಿನ ಸುತ್ತಿಗೆ ಆಯ್ಕೆ ಆಗುತ್ತಾರೆ ಎಂದು ಬಿಗ್ ಬಾಸ್ ಆದೇಶಿಸಿದ್ದರು. ಅದರಂತೆ ಯಾವ ಬಕೆಟ್‌ನಲ್ಲಿ ಜಾಸ್ತಿ ನೀರು ಇದೆ ಅಂತ ಅಶ್ವಿನಿ ಹಾಗೂ ಗಿಲ್ಲಿ ಹೇಳಬೇಕಿತ್ತು. ಆದರೆ ಗಿಲ್ಲಿ, ಉದ್ದೇಶಪೂರ್ವಕವಾಗಿ ಕಾವ್ಯಾ ವಿನ್ನರ್ ಎಂದು ಘೋಷಿಸಿದ್ದಾರೆ. ಸಹ ಉಸ್ತುವಾರಿ ಆಗಿರುವ ಅಶ್ವಿನಿ ಜೊತೆ ಇದೇ ವಿಷಯಕ್ಕೆ ಜಗಳ ಸಹ ಮಾಡಿದ್ದಾರೆ. ಆದರೆ ಗಿಲ್ಲಿ ಯಾಕಾಗಿ ಹೀಗೆ ಹೇಳಿದ್ರು ಅಂತ ಇಂದಿನ ಎಪಿಸೋಡ್ ನೋಡಲೇ ಬೇಕಿದೆ.
ಗಿಲ್ಲಿ ಫ್ಯಾನ್ಸ್ ಬೇಸರ
ಇನ್ನು ಕಾವ್ಯಾ ಮತ್ತು ಸ್ಪಂದನಾ ಇಬ್ಬರ ಪೈಕಿ ಸ್ಪಂದನಾ ಕಾವ್ಯಾಳಿಗಿಂತ ಸ್ವಲ್ಪ ಹೆಚ್ಚಾಗಿ ನೀರನ್ನು ಸಂಗ್ರಹಿಸಿರುತ್ತಾರೆ. ಇನ್ನು ಯಾರೇ ಉಸ್ತುವಾರಿಗಳಾದರೂ ಸ್ಪಂದನಾ ಬಕೆಟ್‌ನಲ್ಲಿ ಹೆಚ್ಚಿನ ನೀರಿದೆ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ, ಗಿಲ್ಲಿ ನಟ ಮಾತ್ರ ಇದನ್ನು ಒಪ್ಪಿಕೊಳ್ಳುವುದೇ ಇಲ್ಲ.ಈ ಪ್ರೋಮೋವನ್ನು ಇದೀಗ ರಿಲೀಸ್ ಮಾಡಲಾಗಿದ್ದು, ಜನರೆಲ್ಲರೂ ಗಿಲ್ಲಿ ಆಟವನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಕಡೆ ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, ಸೂರಜ್ ಸಿಂಗ್ ಎಲಿಮಿನೇಟ್ ಆದ ಬಳಿಕ ನಟಿ ರಾಶಿಕಾ ತಮ್ಮ ಆಟದ ವೈಖರಿಯನ್ನು ಬದಲಿಸಿದ್ದಾರೆ. ಎಂಟರ್‌ಟೇನ್‌ಮೆಂಟ್ ಮಾಡುತ್ತಿಲ್ಲ ಎಂದು ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿಗೆ ಕಚಗುಳಿ ಇಡುವ ಮೂಲಕ ತಿರುಗೇಟು ನೀಡಿದ್ದು, ಮನೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ರಾಶಿಕಾ, ಸೂರಜ್ ಎಲಿಮಿನೇಟ್ ಆದ ಬಳಿಕ ಅಸಲಿ ಆಟವನ್ನು ಆರಂಭಿಸಿದ್ದು, ಫುಲ್ ಎಂಟರ್‌ಟೇನ್‌ಮೆಂಟ್ ಮಾಡುತ್ತಿದ್ದಾರೆ. ಆದರೆ, ರಾಶಿಕಾಳ ಎಂಟರ್‌ಟೇನ್‌ಮೆಂಟ್‌ಗೆ ರಕ್ಷಿತಾ ಸುಸ್ತು ಆಗಿದ್ದಾರೆ.