ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಟಾಸ್ಕ್ ಅತ್ಯಂತ ಕಠಿಣವಾಗುತ್ತಿದೆ. ಸ್ಪರ್ಧಿಗಳು ಕೆಲವು ವಸ್ತುಗಳನ್ನು ಮನೆಯ ಸದಸ್ಯರ ತಲೆ ಮೇಲೆ ಹಾಕಿ ಕಾರಣವನ್ನು ನೀಡುವ ಟಾಸ್ಕ್ ಕೊಟ್ಟಿದ್ದಾರೆ. ಈ ಟಾಸ್ಕ್ ವೇಳೆ ಸ್ಪರ್ಧಿಗಳ ಮಧ್ಯೆ ಮಾತಿನಚಕಮಕಿ ನಡೆದಿದೆ. ರಾಶಿಕಾ (Rashika) ಅವರನ್ನು ‘ಕಸ’ ಎಂದು ಮಾಳು ಕರೆದಿದ್ದಾರೆ. ಅಷ್ಟೇ ಅಲ್ಲ ರಾಶಿಕಾ ಅವರ ಮೇಲೆ ಕಸ ಚಲ್ಲಿದ್ದಾರೆ. ಧ್ರುವಂತ್ (Dhruvanth) ಮೇಲೆ ಮಾಳು ಅವರು ಸಗಣಿ ಹಾಕಿದ್ದಾರೆ.
ಕ್ಯಾಪ್ಟನ್ ಮಾಡಿದ ಪರಿಣಾಮ
ಈ ಟಾಸ್ಕ್ ಆಗುವ ವೇಳೆ ಸ್ಪರ್ಧಿಗಳು ಒಬ್ಬರಿಗೊಬ್ಬರು ಥೂ ಎಂದೆಲ್ಲ ಹೇಳಿಕೊಂಡಿದ್ದಾರೆ. ಮಾಳು ಅವರು ಧ್ರುವಂತ್ ಅವರಿಗೆ ಸಗಣಿಯನ್ನ ಹಾಕಿದ್ದಾರೆ. ಈ ಬಗ್ಗೆ ಸುಧಿ ಅವರು ಮಾಳು ಅವರಿಗೆ ವ್ಯಂಗ್ಯವಾಗಿ ಮಾತನಾಡಿದರು. ನಿಮ್ಮನ್ನು ಧ್ರುವಂತ್ ಅವರು ಕ್ಯಾಪ್ಟನ್ ಮಾಡಿದ ಪರಿಣಾಮ ಎಂದರು. ಅಷ್ಟೇ ಅಲ್ಲ ಮಾಳು ಅವರಿಗೆ ಆಟವೇ ಅರ್ಥ ಆಗಿಲ್ಲ ಎಂದು ಸುಧಿ ಹೇಳಿದರು.
ಇದನ್ನೂ ಓದಿ: Bigg Boss Kannada 12: ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ! ಧ್ರುವಂತ್‌ಗೆ ಚಳಿ ಬಿಡಿಸಿದ್ರು ರಾಶಿಕಾ, ಕಾವ್ಯ
ಅದಕ್ಕೆ ಮಾಳು ಅವರು ಆಟ ಅರ್ಥ ಮಾಡಿಕೊಳ್ಳದಿರುವಷ್ಟು ಹುಚ್ಚ ನಾನಲ್ಲ ಎಂದರು. ಬಳಿಕ ಬಿಗ್ ಬಾಸ್ ಮನೆಯ ಕಸ ಎಂದು ರಾಶಿಕಾ ಅವರಿಗೆ ಹೇಳಿ, ಕಸ ಚೆಲ್ಲಿದ್ದಾರೆ. ಈ ವೇಳೆ ಥೂ ಎಂದೆಲ್ಲ ಸ್ಪರ್ಧಿಗಳು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದಾರೆ.
ಈ ವೇಳೆ ಗಿಲ್ಲಿ ಅವರು, ‘ಥೂ’ ಎಂದಿದ್ದಾರೆ. ಇದರಿಂದ ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. , ʻಹಳ್ಳಿ ಹುಡುಗನ ಗತ್ತ, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆ ಎಂದಿದ್ದ ಮಾಳು ಅಂತೂ ʻಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಿಯಲ್ ಆಟವನ್ನ ತೋರಿಸುತ್ತಿದ್ದಾರೆ.
ಗಿಲ್ಲಿ ಮೇಲೆ ಧ್ರುವಂತ್ ಗಲಾಟೆ
ಧ್ರುವಂತ್ ಅವರ ಮೇಲೆ ಕೆಲವು ಸ್ಪರ್ಧಿಗಳು ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಧ್ರುವಂತ್ ಕೂಡ ಬೇಕಾಬಿಟ್ಟಿ ಮಾತನಾಡಲು ಆರಂಭಿಸಿದ್ದಾರೆ. ಈಗಾಗಲೇ ಗಿಲ್ಲಿ ಬಗ್ಗೆ ಕೆಲ ಹೇಳಿಕೆ ನೀಡಿದ್ದಾರೆ. ಗಿಲ್ಲಿ ಅವರು ಬನಿಯನ್ ಹಾಕ್ಕೊಂಡು, ಬಡವನಾಗಿ, ಮುಖವಾಡ ಹಾಕಿಕೊಂಡು, ನನ್ನತ್ರ 100 ಕುರಿ ಇದೆ ಅಂತಾರೆ. ಇರೋರು ಹಾಗೇ ಅನ್ನಲ್ಲ. ನೀವು ಸಿರಿವಂತರು ಸರ್. ಇನ್ನು ಬಟ್ಟೆ ವಾಶ್ ಮಾಡದೇ, ಹಾಕದೇ ಕೆರಕ್ಕೊಂಡು ಪೋಟ್ರೇ ಮಾಡ್ತೀರಾ ಎಂದಿದ್ದಾರೆ.
ಗಿಲ್ಲಿ ಬಡವನಂತೆ ತೋರಿಸಿಕೊಳ್ಳುತ್ತಿದ್ದಾನೆ. ಬನಿಯನ್ ಹಾಕಿ ಓಡಾಡುತ್ತಿದ್ದಾನೆ. ಗಿಲ್ಲಿ ನಟನ ಬಳಿ ಇರೋದು ಎಂಜಿ ಹೆಕ್ಟರ್ ಕಾರು. 100 ಕುರಿ ಕೂಡ ಇದೆ. ಆಗ ಗಿಲ್ಲಿ ನಟನ ರಿಯಲ್ ಫೇಸ್ ಗೊತ್ತಾಯ್ತುಎಂದರು ಧ್ರುವಂತ್.
ಬಡವ ಅಂತ ಯಾವಾಗ ಹೇಳಿದ್ದೆ?
ಹೀಗೆ ಹೇಳುತ್ತಲೇ ಗಿಲ್ಲಿ, ನಾನು ಬಡವ ಅಂತ ಯಾವಾಗ ಹೇಳಿದ್ದೆ? ಅಂತ ತಿರುಗೇಟು ನೀಡಿದ್ದಾರೆ. ಬಡವ ಮಾತ್ರ ಬನಿಯನ್ ಹಾಕ್ತಾನಾ? ಬೇರೆ ಯಾರೂ ಹಾಕಲ್ವಾ? ಎಂಜಿ ಹೆಕ್ಟರ್ ಇರೋದು ಹೌದು. ಅದು ಸೆಕೆಂಡ್ ಹ್ಯಾಂಡ್ ತೆಗೆದುಕೊಂಡಿದ್ದು.
ಇದನ್ನೂ ಓದಿ: Bigg Boss Kannada 12: ಧ್ರುವಂತ್ ಇಷ್ಟಪಟ್ಟ ಮಲ್ಲಮ್ಮ, ಚಂದ್ರಪ್ರಭ ಹೋಗಾಯ್ತು, ಉಳಿದವರು ಹುಷಾರ್ ಎಂದ ಗಿಲ್ಲಿ!
100 ಕುರಿ ತಂದು ಫಾರ್ಮ್ ಮಾಡಬೇಕು ಅಂತ ಅಂದುಕೊಂಡಿದ್ದೆ ಆದರೆ ಇನ್ನು ಕುರಿ ತಂದಿಲ್ಲ ಎಂದಿದ್ದಾರೆ. ಅಷ್ಟೆ ಅಲ್ಲ ಮಲ್ಲಮ್ಮ ಜೊತೆಗಿದ್ದು ಮಲ್ಲಮ್ಮ ಅವರನ್ನ ಕಳಿಸಿದ್ರು, ನಂತರ ಚಂದ್ರಪ್ರಭ, ನೋಡಿ ಮುಂದೆ ಅವರ ಜೊತೆ ಇರುವಾಗ ಹುಷಾರಾಗಿರಿ ಎಂದಿದ್ದಾರೆ. ಒಟ್ಟಿನಲ್ಲಿ ಮನೆಯ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.