ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಗ್ರ್ಯಾಂಡ್ ಫಿನಾಲೆಗೆ (Grand Finale) ಕೌಂಡ್ ಡೌನ್ ಶುರು ಆಗಿದೆ. ಸ್ವಲ್ಪ ಸಮಯದಲ್ಲೇ ಶೋ ಪ್ರಾರಂಭ ಆಗುತ್ತೆ. ಗಿಲ್ಲಿ ಕ್ರೇಜ್ ಅಂತೂ ಸಿಕ್ಕಾಪಟ್ಟೆ ಶುರು ಆಗಿದೆ. ವಿನ್ನರ್ (Winner) ಘೋಷಣೆಗೂ ಮುಂಚೆ ಗಿಲ್ಲಿ ಹುಟ್ಟೂರಲ್ಲಿ ಸಂಭ್ರಮ ಶುರು ಆಗಿದೆ. ಗಿಲ್ಲಿಯ ಹುಟ್ಟೂರು ದಡದಪುರದಲ್ಲಿ ಗೆಲುವಿನ ನಂತರದ ಅದ್ಧೂರಿ ಮೆರವಣಿಗೆಗೆ ಸಿದ್ಧತೆಗಳು ನಡೆದಿವೆ. ಹುಟ್ಟೂರಾದ ಮಳವಳ್ಳಿ (Malvalli) ತಾಲೂಕಿನ ದಡದಪುರ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಗ್ರಾಮದ ತುಂಬಾ ಗಿಲ್ಲಿಯ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಈ ವಿಡಿಯೋಗಳು ಭಾರಿ ವೈರಲ್ (Viral) ಆಗಿವೆ.
ಶುಭ ಹಾರೈಕೆ
ಮಮತೆಯ ಮಡಿಲು ವತಿಯಿಂದ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಗಿಲ್ಲಿಯ ಫೇಮಸ್ ಡೈಲಾಗ್‌ಗಳನ್ನೇ ಬ್ಯಾನರ್‌ನಲ್ಲಿ ಬರೆಸಿರುವ ಗೆಳೆಯರು 'ಗೆದ್ದು ಬಾ ಗೆಳೆಯ ಎಂದು ಶುಭ ಹಾರೈಸುತ್ತಿದ್ದಾರೆ. . ಗಿಲ್ಲಿ ಗೆದ್ದು ಬಂದ ನಂತರ ಮದ್ದೂರಿನಿಂದ ದಡದಪುರದವರೆಗೆ ಅದ್ದೂರಿ ಎತ್ತಿನಗಾಡಿ ಮೆರವಣಿಗೆ ಮಾಡಲು ತಯಾರಿ ನಡೆದಿದೆ.
ಈ ವಿಡಿಯೋಗಳು ಭರ್ಜರಿ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಒಬ್ಬ ಸ್ಪರ್ಧಿಗೆ ಈ ಬಾರಿ ದಾಖಲೆಯ ವೋಟಿಂಗ್ ಆಗಿದೆ ಎನ್ನುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಸದ್ಯ ಎಲ್ಲರ ಕಣ್ಣು ಗಿಲ್ಲಿ ಮೇಲಿದೆ.
ಗಿಲ್ಲಿನೇ ವಿನ್
ಶಿವರಾಜ್‌ಕುಮಾರ್ ಹಾಗೂ ಗಿಲ್ಲಿ ನಟನ ಪರಿಚಯ ʻಜೀ ಕನ್ನಡʼದ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ರಿಯಾಲಿಟಿ ಶೋನಲ್ಲೇ ಆಗಿತ್ತು. ಆ ವೇದಿಕೆಯಲ್ಲಿ ಗಿಲ್ಲಿಯ ಕಾಮಿಡಿ, ನೃತ್ಯ, ಎಂಟರ್‌ಟೈನ್‌ಮೆಂಟ್ ಸಾಮರ್ಥ್ಯ ನೋಡಿ ಶಿವಣ್ಣ, ʻಟ್ರೂ ಹಾನೆಸ್ಟ್ ಎಂಟರ್‌ಟೈನರ್ʼ ಎಂದು ಹಾಡಿ ಹೊಗಳಿದ್ದರು.
ಇದನ್ನೂ ಓದಿ: Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ತಲೆಕೆಡಿಸಿಕೊಳ್ಳೋಬೇಡಿ, ನಿಮ್ಮ ಜೀವನ ಮೇಲೆ ಗಮನ ಹರಿಸಿ ; ಕಿಚ್ಚ ಸುದೀಪ್
ಅಷ್ಟೇ ಅಲ್ಲ, ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ಬೇಕು ಅಂತಲೂ ಶಿವಣ್ಣ ಹೇಳಿದ್ದರು. ಶಿವಣ್ಣನೇ ಗಿಲ್ಲಿನೇ ವಿನ್ ಆಗೋದು ಅಂತ ಹೇಳಿದ್ದಾರೆ.