ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಧ್ರುವಂತ್ (Dhruvanth) ಅವರ ಧ್ವನಿ ಜೋರಾಗಿದೆ. ಧ್ರುವಂತ್ ಅವರು ಈಗಾಗಲೇ ರಕ್ಷಿತಾ (Rakshitha) ಹಾಗೂ ಗಿಲ್ಲಿ (gilli) ಮೇಲೆ ವಿಷಕಾರುತ್ತಿದ್ದಾರೆ. ಇದೀಗ ರಾಶಿಕಾ (Rashika) ಹಾಗೂ ಕಾವ್ಯ ಅವರು ಧ್ರುವಂತ್ ಮೇಲೆ ಕೂಗಾಡಿದ್ದಾರೆ. ಧ್ರುವಂತ್ ಹೇಳಿದ್ದಾದ್ರೂ ಏನು?
ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ
ರಾಶಿಕಾ ಅವರು ನನ್ನತ್ರ ಬಂದ್ರು, ಆಮೇಲೆ ಅಭಿಷೇಕ್ ಹತ್ರ ಹೋದರು. ಆದ್ರೆ ವರ್ಕ್ ಆಗಲಿಲ್ಲ. ನಂತರ ಸೂರಜ್ ಹತ್ತಿರ ಹೋದರು ಎಂದು ಕಾವ್ಯ ಹೇಳಿದರು. ಅದು ರಾಶಿಕಾ ಅವರಿಗೆ ಕೋಪ ತರಿಸಿದೆ.
‘ಹೆಣ್ಮಕ್ಕಳ ಜೊತೆ ಮಾತಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಧ್ರುವಂತ್ ಹೇಳಿದ್ದಾರೆ. ‘ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ’ಎಂದು ಕಾವ್ಯ ಅವರು ತಿರುಗೇಟು ನೀಡಿದ್ದಾರೆ. ರಾಶಿಕಾ ಬಗ್ಗೆ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಕಾವ್ಯ ಬಳಿ ಹೋಗಿ ಧ್ರುವಂತ್ ನೀಡಿದ ಹೇಳಿಕೆ ದೊಡ್ಡ ಜಗಳಕ್ಕೆ ಕಾರಣ ಆಗಿದೆ.
ರಕ್ಷಿತಾ ಗಿಲ್ಲಿ ಮೇಲೂ ವಿಷಕಾರಿದ ಧ್ರುವಂತ್
ಕೆಲವು ದಿನಗಳ ಹಿಂದೆಯಷ್ಟೇ ರಕ್ಷಿತಾ ಬಗ್ಗೆ ಧ್ರುವಂತ್ ಆರೋಪ ಮಾಡಿದ್ದರು. `ಅಡುಗೆ ಮಾಡ್ತಿನಿ ಅಂತ ಮುಂದೆ ಬರ್ತಾಳೆ. ಪಾತ್ರೆ ತೊಳೀತಾಳೆ, ಆದರೆ ಅದು ಸರಿ ಆಗಿರಲ್ಲ. ಅವಳು ತುಳುವನ್ನು ಸಹ ಸರಿಯಾಗಿ ಮಾತನಾಡೋದಿಲ್ಲ. ಕನ್ನಡನೂ ಸರಿಯಾಗಿ ಮಾತನಾಡೋದಿಲ್ಲ' ಎಂದು ಆರೋಪಿಸಿದ್ದರು.
ಧ್ರುವಂತ್‍ಗೆ ಗೊತ್ತಿರೋ ವಿಷ್ಯ ನಿಮಗೂ ಗೊತ್ತುಂಟಾ ಗಾಯ್ಸ್?
ಇದೀಗ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಈ ವೇಳೆ ಧ್ರುವಂತ್ ಅವರು ಗಿಲ್ಲಿ ಹಾಗೂ ರಕ್ಷಿತಾ ಬಗ್ಗೆ ಹೇಳಿದ್ದು ಹೀಗೆ.
ಗಿಲ್ಲಿ ಅವರು ಬನಿಯನ್ ಹಾಕ್ಕೊಂಡು ತಾನು ಬಡವನಾಗಿ, ಮುಖವಾಡ ಹಾಕಿಕೊಂಡು, ನನ್ನತ್ರ 100 ಕುರಿ ಇದೆ ಅಂತಾರೆ. ಇರೋರು ಹಾಗೇ ಅನ್ನಲ್ಲ. ನೀವು ಸಿರಿವಂತರು ಸರ್. ಇನ್ನು ಬಟ್ಟೆ ವಾಶ್ ಮಾಡದೇ, ಹಾಕದೇ ಕೆರಕ್ಕೊಂಡು ಪೋಟ್ರೇ ಮಾಡ್ತೀರಾ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕೊನೆಗೂ ರಕ್ಷಿತಾರ ಈ ವಿಚಾರಗಳ ಬಗ್ಗೆ ಮಾತೇ ಆಡಲಿಲ್ಲ ಕಿಚ್ಚ!
ನಾಟಕೀಯ ಫೇಕ್ ಮುಖವಾಡ
ರಕ್ಷಿತಾ ವಿರುದ್ಧ ಧ್ರುವಂತ್ ಮಾತನಾಡಿ, ನಾನು ಕೂಡ ಮಂಗಳೂರಿನವನು. ಎಂತ ಗೊತ್ತುಂಟ ಗಾಯ್ಸ್ ಅನ್ನೋದೆಲ್ಲ ನಾಟಕ. ಶನಿವಾರ ಮಾತ್ರ ಅವರಿಗೆ ಕನ್ನಡ ಬರಲ್ಲ. ಅದೇನಾದ್ರೂ ಜಗಳಕ್ಕೆ ನಿಂತರೆ ಯಾವುದೇ ಭಾಷೆಯ ಸಮಸ್ಯೆ ಇರಲ್ಲ. ಇದೇ ರಕ್ಷಿತಾ ಅವರ ನಾಟಕೀಯ ಫೇಕ್ ಮುಖವಾಡ ಎಂದಿದ್ದಾರೆ. ಇನ್ನು ಧ್ರುವಂತ್ ಅವರ ಈ ನಡೆಗೆ ಧೃವಂತ್ ಗೆ ಬುದ್ದಿ ಬರಲ್ಲ. ಸುದೀಪ್ ಸರ್ ಹೇಳಿದ್ದು ಅರ್ಥ ಆಗಲ್ಲ ಎಂದು ಕಮೆಂಟ್ ಮಾಡಿದ್ದಾರೆ ನೆಟ್ಟಿಗರು.