ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮಾತಿನ ಚಕಮಕಿ ಜೋರಾಗುತ್ತಿದೆ. ಅಶ್ವಿನಿ, ರಘು, ಗಿಲ್ಲಿದು ಒಂದು ಕಡೆ ಆದ್ರೆ, ರಿಷಾ (Risha) ಹಾಗೂ ಮಾಳು ಅವರ ಗಲಾಟೆ ಇನ್ನೊಂದು ಕಡೆ. ಮಾಳು (Malu) ಮನೆಯಲ್ಲಿ ಯಾರೊಂದಿಗೂ ಜಗಳ ಮಾಡದೇ ತಮ್ಮ ಪಾಡಿಗೋ ಇರು ವ್ಯಕ್ತಿ. ಆದರೆ ಈಗ ಮಾಳು ಕಿರುಚಾಡಿದ್ದಾರೆ. ‘ಏಯ್, ಥೂ, ಹೋಗೊ, ಹೋಗೆʼ ಈ ರೀತಿಯ ಪದಗಳನ್ನು ಇಬ್ಬರೂ ಬಳಸಿದಿದ್ದಾರೆ.
ಮಾಳು ಕಿರುಚಾಡಿದ್ದೇ ತಪ್ಪಾಯ್ತಾ?
ಕಿಚನ್ ಏರಿಯಾದಲ್ಲಿ ಮಾಳು, ರಘು , ರಕ್ಷಿತಾ ಇದ್ದರು. ರಿಷಾ ಸುಮ್ಮನೆ ನಕ್ಕಿದ್ದಾರೆ.ಇದಕ್ಕೆ ಮಾಳು ಅವರು, ʻಸುಮ್ಮಸುಮ್ಮನೇ ನಗೋರಿಗೆ ಹುಚ್ಚುರು ಅಂತಾರೆʼ ಎಂದಿದ್ದಾರೆ. ಇದು ರಿಷಾ ಅವರನ್ನ ಕೆರಳಿಸಿದೆ. ʻನಿಮ್ಮ ಈ ವರ್ತನೆ ಮನೆಯಲ್ಲಿ ಇಟ್ಟುಕೊಳ್ಳಿʼ ಅಂತ ಮಾಳು ಅವರಿಗೆ ರಿಷಾ ಕೂಗಾಡಿಕೊಂಡು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ‘ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ’ ಅಂತ ಅಶ್ವಿನಿಗೆ ಖಡಕ್ ಆಗಿ ಹೇಳಿದ ಗಿಲ್ಲಿ
ಕಲರ್ಸ್ ಕನ್ನಡ ಪ್ರೋಮೋ
ʻಇದೇನು ನಿಮ್ಮ ಮನೇನಾ? ನೀವ್ಯಾರು ಅದನ್ನ ಹೇಳೋಕೆ? ಬೇಕಾ ನೀವ್ ಹೋಗ್ತಾ ಇರಿ? ನೀವೇನು ಲಾಸ್ಟ್ ವಾರ್ನಿಂಗ್ ಕೊಡೋದುʼ ಎಂದು ರಿಷಾ ಮತ್ತೆ ಕೌಂಟರ್ ಕೊಟ್ಟಿದ್ದಾರೆ. ಮಾಳು ಅವರ ಪಿತ್ತ ನೆತ್ತಿಗೇರಿದೆ. ʻಇಲ್ಲಿಂದ ಸುಮ್ಮನೆ ನಡೆʼ ಎಂದು ಕಿರುಚಾಡಿದ್ದಾರೆ. ರಿಷಾ ಅವರು ಈ ಬಗ್ಗೆ ಅಭಿಷೇಕ್ ಜೊತೆಗೂ ಚರ್ಚಿಸಿದ್ದಾರೆ. ʻಮೊದಲಿಂದಲು ನನ್ನ ಕಂಡರೆ ಮಾಳು ಅವರಿಗೆ ಆಗಲ್ಲʼ ಅಂತ ಹೇಳಿಕೊಂಡಿದ್ದಾರೆ ರಿಷಾ. ರಿಷಾ, ಬಂದಾಗಿನಿಂದಲೂ ವಾರಕ್ಕೊಬ್ಬರಂತೆ ಜಗಳ ಮಾಡುತ್ತಿದ್ದಾರೆ. ಈ ಬಾರಿ ಮಾಳು ವಿರುದ್ಧ ಜಗಳ ಮಾಡಿದ್ದಾರೆ.
ಕ್ಯಾಪ್ಟನ್ ಆಗಿದ್ದಾಗಲೂ ಇಬ್ಬರ ಮಧ್ಯೆ ಇತ್ತು ವೈಮನಸ್ಸು
ಇನ್ನು ಮಾಳು ಅವರು ಕ್ಯಾಪ್ಟನ್ ಆದ ಸಂದರ್ಭದಲ್ಲಿ ರಿಷಾ ಹಾಗೂ ಅವರಿ ಮಧ್ಯೆ ಜಗಳವೂ ಆಗಿತ್ತು. ಬಾತ್‌ರೂಮ್ ತೊಳಿ ಎಂದು ರಿಷಾಗೆ ಮಾಳು ಹೇಳಿದ್ದಾರೆ. ಆದರೆ, ನಾನು ಮಾಡಲ್ಲ ಅಂತ ರಿಷಾ ಹಠ ಹಿಡಿದಿದ್ದಾರೆ.
ಅವತ್ತು ರಿಷಾಗೆ ಮಾಳು ಬಾತ್‌ರೂಮ್ ಕ್ಲೀನಿಂಗ್‌ಗೆ ಹಾಕಿದಾಗ, “ನನ್ನನ್ನ ಪರ್ಸನಲ್ ಆಗಿ ಟಾರ್ಗೆಟ್ ಮಾಡಿ ಮಾಳು ಈ ಕೆಲಸ ಕೊಟ್ಟಿದ್ದಾರೆ. ನಾನು ಬಾತ್‌ರೂಮ್ ತೊಳಿಯಲ್ಲ ಅಂತ ರಿಷಾ ಅತ್ತು ಹೈಡ್ರಾಮಾ ಮಾಡಿದ್ದರು.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಬಗ್ಗೆಯೇ ನೆಗೆಟಿವ್ ಕಮೆಂಟ್; ಧ್ರುವಂತ್ ಡಬಲ್ ಗೇಮ್!
ಮಾಳು ನಿಪನಾಳ ಮಾತನಾಡೋದಿಲ್ಲ, ಮಾತೇ ಬರಲ್ಲ ಎಂದುಕೊಂಡಿದ್ದರು. ಆದರೆ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ವೀಕ್ಷಕರ ಮುಂದೆ ಭರ್ಜರಿಯಾಗಿ ಮಾತನಾಡಿದ್ದರು.