ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಅಶ್ವಿನಿ ಬಗ್ಗೆಯೇ ನೆಗೆಟಿವ್‌ ಕಮೆಂಟ್‌; ಧ್ರುವಂತ್ ಡಬಲ್‌ ಗೇಮ್‌!

Dhruvanth Bigg Boss: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿತ್ತು. ಒಂದು ಗಿಲ್ಲಿ ತಂಡ ಆದರೆ ಇನ್ನೊಂದು ಅಶ್ವಿನಿ ಗೌಡ. ಆದರೆ ಧ್ರುವಂತ್‌ ಅವರಿಗೆ ಆಟ ಆಡಲು ಅವಕಾಶ ನೀಡಲು ಅಶ್ವಿನಿ ಅವರು ಹಿಂದೇಟು ಹಾಕಿದ್ದರು.ಬಳಿಕ ಹೇಗೋ ವಾದ ಮಾಡಿ, ಆಟವನ್ನೂ ಆಡಿ, ಗೆದ್ದು ತೋರಿಸಿದ್ದರು. ಆದರೆ ನಿನ್ನೆಯ ಸಂಚಿಕೆಯಲ್ಲಿ ಕಿಚನ್‌ ಏರಿಯಾದಲ್ಲಿ ರಘು, ಧ್ರುವಂತ್‌ ಮಾತನಾಡಿಕೊಂಡಿದ್ದಾರೆ. ʻನನಗೆ ಅವಕಾಶ ಕೊಡ್ತಿರಲಿಲ್ಲ, ಅಶ್ವಿನಿ ಮೇಡಂ ತಾನು ಹೇಳಿದ್ದೇ ಆಗಬೇಕು ಅಂತ ಅಂತಾರೆ” ಎಂದಿದ್ದಾರೆ.

ಅಶ್ವಿನಿ ಬಗ್ಗೆಯೇ ನೆಗೆಟಿವ್‌ ಕಮೆಂಟ್‌; ಧ್ರುವಂತ್ ಡಬಲ್‌ ಗೇಮ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 21, 2025 11:14 AM

ಈ ವಾರ ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿತ್ತು. ಒಂದು ಗಿಲ್ಲಿ (Gilli) ತಂಡ ಆದರೆ ಇನ್ನೊಂದು ಅಶ್ವಿನಿ ಗೌಡ (Ashwini Gowda). ಆದರೆ ಧ್ರುವಂತ್‌ ಅವರಿಗೆ ಆಟ ಆಡಲು ಅವಕಾಶ ನೀಡಲು ಅಶ್ವಿನಿ ಅವರು ಹಿಂದೇಟು ಹಾಕಿದ್ದರು. ಇದು ಧ್ರುವಂತ್‌ಗೆ (Dhruvanth) ಇದು ಇಷ್ಟವಾಗಲಿಲ್ಲ. ಧನುಷ್‌ ಬದಲು ನನ್ನನ್ನೇ ಕಳುಹಿಸಿ ಎಂದು ಅಶ್ವಿನಿ ಗೌಡ ಮೇಲೆ ಒತ್ತಡ ತಂದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು. ಬಳಿಕ ಹೇಗೋ ವಾದ ಮಾಡಿ, ಆಟವನ್ನೂ ಆಡಿ, ಗೆದ್ದು ತೋರಿಸಿದ್ದರು. ಆದರೆ ನಿನ್ನೆಯ ಸಂಚಿಕೆಯಲ್ಲಿ ಕಿಚನ್‌ ಏರಿಯಾದಲ್ಲಿ ರಘು, ಧ್ರುವಂತ್‌ ಮಾತನಾಡಿಕೊಂಡಿದ್ದಾರೆ. ʻನನಗೆ ಅವಕಾಶ ಕೊಡ್ತಿರಲಿಲ್ಲ, ಅಶ್ವಿನಿ ಮೇಡಂ ತಾನು ಹೇಳಿದ್ದೇ ಆಗಬೇಕು ಅಂತ ಅಂತಾರೆ” ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ‘ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ’ ಅಂತ ಅಶ್ವಿನಿಗೆ ಖಡಕ್‌ ಆಗಿ ಹೇಳಿದ ಗಿಲ್ಲಿ

ಏನು ನಡೆಯಿತು ಅಂತ ಗೊತ್ತಿಲ್ಲ ಎಂದ ಧ್ರುವಂತ್‌

ಅಶ್ವಿನಿ ಹಾಗೂ ರಘು ವಾದ ತಾರಕಕ್ಕೇರಿತ್ತು. ಈ ಬಗ್ಗೆ ಧ್ರುವಂತ್‌ ಸರಿಯಾಗಿ ಗಮನಿಸಿಲ್ಲ ಎಂದಿದ್ದಾರೆ. ಹಾಗೇ ಅಶ್ವಿನಿ ಗೌಡ ಮುಂದೆ ಹೋಗಿ ತಾನು ಅವರ ಟೀಂ ಎಂದು ಮಾತನಾಡುವ ಧ್ರುವಂತ್‌, ಹಿಂದಿನಿಂದ ಅವರ ಬಗ್ಗೆ ಮಾತನಾಡುತ್ತಾರೆ. ಆ ಬಳಿಕ ಅಶ್ವಿನಿ ಗೌಡ ಮುಂದೆ ಹೋಗಿ “ಏನು ನಡೆಯಿತು ಅಂತ ಗೊತ್ತಿಲ್ಲ” ಎಂದಿದ್ದಾರೆ.

ಅಷ್ಟೇ ಅಲ್ಲ ಗಿಲ್ಲಿ ಟೀಂನಲ್ಲಿಯೂ ಆಟ ಆಡಿದ್ದಾರೆ. ಈ ಬಗ್ಗೆ ಅಶ್ವಿನಿ ಅವರು ಜಾಹ್ನವಿ ಅವರ ಬಳಿ ಅಸಮಾಧಾನ ಹೊರ ಹಾಕಿದರು. ನಮ್ಮ ಜೊತೆ ಇದ್ದುಕೊಂಡು ಹಿಂದೆಯಿಂದ ಚೂರಿ ಹಾಕೋದು ಹೀಗೆ ಎಂದು ಮಾತನಾಡಿದ್ದಾರೆ.

ಈ ಹಿಂದೆ ಅವಕಾಶ ಕೊಡಿ ಎಂದು ಅಶ್ವಿನಿಗೆ ಮನವಿ ಮಾಡಿದ್ದ ಧ್ರುವಂತ್‌

ದಯವಿಟ್ಟು ನನ್ನ ಡಮ್ಮಿ ಮಾಡಬೇಡಿ. ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ. ಧನುಷ್‌ ನಿನ್ನೆನೂ ಆಟ ಆಡಿದ್ದಾರೆ. ಎಲ್ಲರಿಗೂ ಅವಕಾಶ ನೀಡಿ. ನಾನು ಆಡ್ತೀನಿ, ಯಾಕೆ ನೀವು ಎಲ್ಲರಿಗೂ ಸಮಾನವಾಗಿ ಅವಕಾಶ ನೀಡುವುದಿಲ್ಲ. ನಾನು ಮನವಿ ಮಾಡುತ್ತಿದ್ದೇನೆ. ನನಗೆ ಚಾನ್ಸ್‌ ನೀಡಿ. ನೀವು ಯಾವುದೇ ಫೀಡ್‌ ಬ್ಯಾಕ್‌ನ ತಗೋಳೋದಿಲ್ಲ. ಯಾಕೆ ಕೂಗಾಡ್ತಿರಿ? ಯಾಕೆ ಕೋಪ ಮಾಡ್ಕೋತಿರಿ? ಟೀಮ್‌ ಅಂತಾರೆ, ಅವರದ್ದೇ ಮಾಡ್ತಾರೆ" ಎಂದು ಬೇಸರ ಮಾಡಿಕೊಂಡಿದ್ದರು.

ಇದನ್ನೂ ಓದಿ: Bigg Boss Kannada 12: ಎಲ್ಲರ ಲೆಕ್ಕಾಚಾರ ತಲೆ ಕೆಳಗೆ ಮಾಡಿದ ಗಿಲ್ಲಿ! ಕ್ಯಾಪ್ಟನ್ಸಿ ರೇಸ್‌ಗೆ ರಾಶಿಕಾ ಆಯ್ಕೆ

ಧ್ರುವಂತ್‌ ಮಾತುಗಳನ್ನು ಕೇಳಿದಮೇಲೆ ಅಶ್ವಿನಿ ಗೌಡ ಕೋಪ ಮಾಡಿಕೊಂಡರು. ಅಂತಿಮವಾಗಿ ಧನುಷ್‌ ಅವರ ಬದಲು ಧ್ರುವಂತ್‌ಗೆ ಆಟ ಆಡುವ ಚಾನ್ಸ್‌ ನೀಡಿದರು. ಆಟ ಆಡುವುದಕ್ಕೆ ಹೋದ ಧ್ರುವಂತ್‌ ಉತ್ತಮ ಪ್ರದರ್ಶನ ನೀಡಿದರು. ಕೊನೆಗೆ ಆ ಗೇಮ್‌ ಅನ್ನು ಧ್ರುವಂತ್‌ ಅತ್ಯುತ್ತಮವಾಗಿ ಆಡಿ ಗೆಲ್ಲಿಸಿಕೊಟ್ಟರು. ಎಲ್ಲರೂ ಧ್ರುವಂತ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎದುರಾಳಿ ತಂಡದ ಗಿಲ್ಲಿ ನಟ ಕೂಡ ಈ ಚಾನ್ಸ್‌ ಅನ್ನು ಬಳಸಿಕೊಂಡು, ಅಶ್ವಿನಿಗೆ ಕಾಲೆಳೆದರು.