ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಕಾಕ್ರೋಚ್ ಸುಧಿ (cockroach sudhi) ಅವರು ಎಲಿಮಿನೇಟ್ (Eliminate) ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ ಎನ್ನುವುದರ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು. ಆಗ ಕೇಳಿ ಬಂದ ಹೆಸರೇ ಸುಧಿ. ಅಂತೂ ವೀಕ್ಷಕರು ಊಹಿಸಿದ್ದು ಸತ್ಯವಾಗಿದೆ. ಕಳೆದ ವಾರ ಕಾಕ್ರೂಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ (Special power) ಬಳಸಿದ್ದರು. ಆ ಅಧಿಕಾರ ಬಳಸುವ ಮೂಲಕ ಬಿಗ್ಬಾಸ್ ಮನೆಯಲ್ಲೇ ಉಳಿದುಕೊಂಡರು. ಆದರೆ ಈ ವಾರ ಕಡಿಮೆ ವೋಟ್ (Vote) ಬಂದ ಕಾರಣ ಮನೆಯಿಂದ ಔಟ್ ಆಗಿದ್ದಾರೆ.
ನೇರವಾಗಿ ನಾಮಿನೇಟ್ ಆಗಿದ್ದ ಸುಧಿ
ಮನೆಯ ಕ್ಯಾಪ್ಟನ್ ಮಾಳು ನಿಪನಾಳ ಅವರು ಕಾಕ್ರೋಚ್ ಸುಧಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಎರಡು ತಂಡಗಳಾಗಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ಗಳನ್ನು ನೀಡಲಾಗಿತ್ತು. ಮೊದಲು ನಾಮಿನೇಟೆಡ್ ತಂಡದಲ್ಲಿ ಇದ್ದ ಸುಧಿ ಅವರಿಗೆ ಬಚಾವ್ ಆಗುವ ಅವಕಾಶ ಸಿಕ್ಕಿತ್ತು.
ಇದನ್ನೂ ಓದಿ: Bigg Boss Kannada 12: ಸುದೀಪ್ ಅವರನ್ನೇ ಇಮಿಟೇಟ್ ಮಾಡಿದ ಗಿಲ್ಲಿ! ಬಿದ್ದು ಬಿದ್ದು ನಕ್ಕ ಕಿಚ್ಚ
ಆದರೆ ಎರಡನೇ ಸುತ್ತಿನ ಆಟದಲ್ಲಿ ಎಲ್ಲ ಸದಸ್ಯರು ಒಮ್ಮತದ ನಿರ್ಧಾರದಿಂದ ಒಬ್ಬರನ್ನು ಸೇಫ್ ಹಾಗೂ ಇನ್ನೊಬ್ಬರನ್ನು ನಾಮಿನೇಟ್ ಮಾಡಲು ವಿಫಲರಾದರು. ಕ್ಯಾಪ್ಟನ್ ಮಾಳು ನಿಪನಾಳ ಅವರು ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದಾಗ ಕಾಕ್ರೋಚ್ ಸುಧಿ ಹೆಸರು ತೆಗೆದುಕೊಂಡಿದ್ದರು.
ರಕ್ಷಿತಾಗೆ ಸೆಡೆ ಎಂದಿದ್ದ ಸುಧಿ
ಕ್ಲೀನಿಂಗ್ ವಿಚಾರ ಬಂದಾಗ, ರಕ್ಷಿತಾ ಶೆಟ್ಟಿ ಮತ್ತು ಕಾಕ್ರೋಚ್ ಸುಧಿ ನಡುವೆ ಒಂದಷ್ಟು ವಾದ-ಪ್ರತಿವಾದ ನಡೆದಿತ್ತು. ಮಾತಿನ ಭರದಲ್ಲಿ, ''ಅವಳ್ಯಾವಳೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ ಎಂದಿದ್ದರು ಸುಧಿ. ಇದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಸುದೀಪ್ ಅವರು ವೀಕೆಂಡ್‌ನಲ್ಲಿ ಈ ಬಗ್ಗೆ ಸುಧಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಆ ಬಳಿಕ ತಲೆಬಗ್ಗಿಸಿಕೊಂಡು, ‘ಕ್ಷಮಿಸಿ, ಕ್ಷಮಿಸಿ’ ಎಂದು ಸುಧಿ ಹೇಳಿದ್ದರು.
ಮಿನಿ ಫಿನಾಲೆ ವಿನ್ನರ್
ಈ ಸೀಸನ್‌ನ ಮಿನಿ ಫಿನಾಲೆಯನ್ನ ಗೆದ್ದು ಬೀಗಿದ್ದರು ಸುಧಿ. ಅಶ್ವಿನಿ ಗೌಡ, ಮಾಳು ನಿಪನಾಳ, ಕಾಕ್ರೋಚ್ ಸುಧಿ ಹಾಗೂ ರಾಶಿಕಾ ಶೆಟ್ಟಿ ಫೈನಲಿಸ್ಟ್‌ಗಳಾಗಿದ್ದರು. ಮಿನಿ ಫಿನಾಲೆಗೆ ಮುನ್ನ ಈ ನಾಲ್ವರಿಗೂ ಒಂದು ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಅನ್ನು ಅಚ್ಚುಕಟ್ಟಾಗಿ ಕಂಪ್ಲೀಟ್ ಮಾಡಿ ʻಬಿಗ್ ಬಾಸ್ ಕನ್ನಡ ಸೀಸನ್ 12ʼರ ಮೊದಲ ಫಿನಾಲೆಯ ವಿನ್ನರ್ ಆಗಿದ್ದರು ಕಾಕ್ರೋಚ್ ಸುಧಿ.
ಸೂಪರ್ ಪವರ್ ಸುಧಿ
ಮಿನಿ ಫಿನಾಲೆ ಗೆದ್ದ ಸುಧಿ, ಒಂದು ಬಾರಿಗೆ ನಾಮಿನೇಷನ್‌ನಿಂದ ಸ್ವತಃ ಇಮ್ಯೂನಿಟಿ ಪಡೆಯಬಹುದು ಅಥವಾ ಬೇರೊಬ್ಬ ಸ್ಪರ್ಧಿಯನ್ನು ಕೂಡ ಸೇವ್ ಮಾಡಬಹುದು. ಈ ಸೂಪರ್ ಪವರ್ ಕೂಡ ತಮ್ಮದಾಗಿಸಿಕೊಂಡಿದ್ದರು ಸುಧಿ. ಆದರೀಗ ಸುಧಿ ಔಟ್ ಆಗಿದ್ದಾರೆ.
ನಿನ್ನೆಯಷ್ಟೇ ಅಶ್ವಿನಿ ಗೌಡ ಹಾಗೂ ರಕ್ಷಿತಾ ಸೇಫ್ ಆಗಿದ್ದರು. ರಘು, ರಿಷಾ, ಕಾಕ್ರೋಚ್ ಸುಧಿ ಹಾಗೂ ಜಾಹ್ನವಿ ಮಧ್ಯೆ ಯಾರು ಔಟ್ ಆಗ್ತಾರೆ ಅನ್ನೋದೇ ಕುತೂಹಲ ವೀಕ್ಷಕರಲ್ಲಿ ಇದ್ದಿತ್ತು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯ ಯಾರ ಜರ್ನಿ ಎಂಡ್? ಈ ಸ್ಪರ್ಧಿಯೇ ಔಟ್?
ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿ ಕಾಕ್ರೊಚ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ಇವರು ಕಾಕ್ರೋಚ್ ಸುಧಿ ಎಂದೇ ಜನಪ್ರಿಯರಾಗಿದ್ದಾರೆ. ದುನಿಯ ವಿಜಿತ ಸಲಗ, ಭೀಮ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಧಿ ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.