ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ಮನೆಯ ಯಾರ ಜರ್ನಿ ಎಂಡ್‌? ಈ ಸ್ಪರ್ಧಿಯೇ ಔಟ್‌?

BBK 12: ನಿನ್ನೆಯಷ್ಟೇ ಅಶ್ವಿನಿ ಗೌಡ ಹಾಗೂ ರಕ್ಷಿತಾ ಸೇಫ್‌ ಆಗಿದ್ದಾರೆ. ಇದೀಗ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ರಘು, ರಿಷಾ, ಕಾಕ್ರೋಚ್‌ ಸುಧಿ ಹಾಗೂ ಜಾಹ್ನವಿ ಮಧ್ಯೆ ಯಾರು ಔಟ್‌ ಆಗ್ತಾರೆ ಅನ್ನೋದೇ ಕುತೂಹಲ. ರಘು ಅವರು ರಘು ಅತ್ಯುತ್ತಮವಾಗಿ ಆಟ ಆಡುತ್ತಿದ್ದು, ಮೂರೇ ವಾರದಲ್ಲಿ ಎರಡು ಬಾರಿ ಅವರು ಕ್ಯಾಪ್ಟನ್‌ ಆಗಿ ಆಯ್ಕೆ ಆಗಿರುವುದು ವಿಶೇಷ. ಹೀಗಾಗಿ ಅವರು ಮನೆಯಿಂದ ಔಟ್‌ ಆಗೋ ಸಾಧ್ಯತೆ ಕಡಿಮೆ ಇದೆ. ಹಾಗಾದ್ರೆ ಔಟ್‌ ಆಗೋದು ಯಾರು?

ಬಿಗ್‌ ಬಾಸ್‌ ಮನೆಯ ಯಾರ ಜರ್ನಿ ಎಂಡ್‌? ಈ ಸ್ಪರ್ಧಿಯೇ ಔಟ್‌?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 16, 2025 2:33 PM

ಬಿಗ್‌ ಬಾಸ್‌ ಸೀಸನ್‌ 12ರಂದು (Bigg Boss Kannada 12) ಈ ವಾರ ಒಟ್ಟು 8 ಮಂದಿ ನಾಮಿನೇಟ್‌ ಆಗಿದ್ದರು. ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್‌ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈ ವಾರ ನಾಮಿನೇಟ್‌ ಆಗಿದ್ದಾರೆ. ಇದರಲ್ಲಿ ಬಹುತೇಕರನ್ನು ನಾಮಿನೇಟ್‌ (Nominate) ಮಾಡಿರುವುದು ಕ್ಯಾಪ್ಟನ್‌ ಆಗಿದ್ದ ಮಾಳು ನಿಪನಾಳ್.‌ ನಿನ್ನೆಯಷ್ಟೇ ಅಶ್ವಿನಿ ಗೌಡ ಹಾಗೂ ರಕ್ಷಿತಾ ಸೇಫ್‌ ಆಗಿದ್ದಾರೆ. ಇದೀಗ ವಾಹಿನಿ ಹೊಸ ಪ್ರೋಮೋ (New Promo) ಹಂಚಿಕೊಂಡಿದೆ. ರಘು, ರಿಷಾ, ಕಾಕ್ರೋಚ್‌ ಸುಧಿ ಹಾಗೂ ಜಾಹ್ನವಿ ಮಧ್ಯೆ ಯಾರು ಔಟ್‌ ಆಗ್ತಾರೆ ಅನ್ನೋದೇ ಕುತೂಹಲ.

ಎಲಿನೇಟ್‌ ಆಗೋ ಸ್ಪರ್ಧಿ?

`ನಾಲ್ಕು ಮಂದಿ ಸೂಟ್‌ಕೇಸ್‌ ತೆಗೆದುಕೊಂಡು ಬಾಗಿಲ ಹತ್ತಿರ ಬಿನ್ನಿ. ಡೋರ್‌ ಓಪನ್‌ ಆಗತ್ತೆ. ಅದರಲ್ಲಿ ಒಬ್ಬರು ಮನೆಗೆ ಹೋಗ್ತಾರೆ ಅಂತ ಸುದೀಪ್‌ʼ ಅಂದಿದ್ದಾರೆ. ಈ ವೇಳೆ ಸ್ಪರ್ಧಿಗಳು ತಮ್ಮ ಕೆಲವೊಂದು ಅಭಿಪ್ರಾಯಗಳನ್ನೂ ಹಂಚಿಕೊಂಡಿದ್ದರು. ಸುಧಿ ಅವರು ಈ ವೇಳೆ ʻಯಾರೂ ಜಿದ್ದಿಗೆ ಆಡಬೇಡಿʼ ಎಂದಿದ್ದಾರೆ. ವರದಿಯ ಪ್ರಕಾರ ಕಾಕ್ರೋಚ್‌ ಸುಧಿ ಅವರೇ ಈ ವಾರ ಎಲಿನೇಟ್‌ ಆಗೋ ಸ್ಪರ್ಧಿ ಎನ್ನಲಾಗಿದೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆ ಛತ್ರ ಅಲ್ಲ; ರಾಶಿಕಾ -ರಿಷಾಗೆ ಕಿಚ್ಚ ಸುದೀಪ್‌ ಎಚ್ಚರಿಕೆ

ವೋಟ್‌ ಸಿಕ್ಕರೆ ಸೇಫ್‌

ರಘು ಅವರು ಅತ್ಯುತ್ತಮವಾಗಿ ಆಟ ಆಡುತ್ತಿದ್ದು, ಮೂರೇ ವಾರದಲ್ಲಿ ಎರಡು ಬಾರಿ ಅವರು ಕ್ಯಾಪ್ಟನ್‌ ಆಗಿ ಆಯ್ಕೆ ಆಗಿರುವುದು ವಿಶೇಷ. ಹೀಗಾಗಿ ಅವರು ಮನೆಯಿಂದ ಔಟ್‌ ಆಗೋ ಸಾಧ್ಯತೆ ಕಡಿಮೆ ಇದೆ. ಬಿಗ್‌ ಬಾಸ್‌ ಮನೆಯಲ್ಲಿ ಹಲ್ಲೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ರಿಷಾ ಗೌಡ ಅವರು ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕಿಚ್ಚ ಸುದೀಪ್‌ ಅವರು ಮನೆಯ ಸದಸ್ಯರ ಮೂಲಕ ವೋಟಿಂಗ್‌ ಮಾಡಿಸಿದ್ದರು. ರಿಷಾ ಉಳಿದುಕೊಂಡಿದ್ದರೂ ಕೂಡ ಒಂದು ದಿನ ಜೈಲು ಶಿಕ್ಷೆ ಮತ್ತು ನೇರವಾಗಿ ನಾಮಿನೇಟ್‌ ಆಗುವ ಶಿಕ್ಷೆಯನ್ನು ಪಡೆದುಕೊಂಡಿದ್ದರು. ಈ ವಾರ ಏನಾದರೂ ಅವರಿಗೆ ವೀಕ್ಷಕರಿಂದ ಉತ್ತಮ ಸಂಖ್ಯೆಯ ವೋಟ್‌ ಸಿಕ್ಕರೆ ಸೇಫ್‌ ಆಗ್ತಾರೆ.

ಕಾಕ್ರೋಚ್‌ ಸುಧಿ ಔಟ್‌?

ಟಾಸ್ಕ್‌ಗಳಲ್ಲಿ ಅದ್ಭುತವಾಗಿ ಆಟವಾಡುತ್ತಾ ಪ್ರೇಕ್ಷಕರನ್ನು ರಂಜಿಸಿದ್ದ ಕಾಕ್ರೋಚ್‌ ಸುಧಿ ಮನೆಯಿಂದ ಹೊರಬಿದ್ದಿದ್ದಾರೆ ಎನ್ನುವ ಪೋಸ್ಟ್‌ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಲ್ಲವಾದ್ರೂ, ನಿಜವಾಗಿಯೂ ಕಾಕ್ರೋಚ್‌ ಸುಧಿ ಈ ವಾರ ಮನೆಯಿಂದ ಹೊರಬಂದ್ರಾ? ಇಲ್ವಾ? ಅನ್ನೋದನ್ನ ಇನ್ನು ಮುಂದಷ್ಟೇ ಕಾದು ನೋಡಬೇಕಿದೆ.

ಹಿಂದಿನ ವಾರವಷ್ಟೇ ಕಾಕ್ರೋಚ್‌ ಸುಧಿ ಡೇಂಜರ್ಸ್‌ ಝೋನ್‌ನಲ್ಲಿ ಇದ್ದರು. ಆ ಸಮಯದಲ್ಲಿ ಕಾಕ್ರೂಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿದರು. ಆ ಅಧಿಕಾರ ಬಳಸುವ ಮೂಲಕ ಬಿಗ್​​ಬಾಸ್ ಮನೆಯಲ್ಲೇ ಉಳಿದುಕೊಂಡರು. ಆದರೀಗ ಈ ವಾರ ವೋಟ್‌ ಮಾತ್ರ ಅವರಿಗೆ ಆಧಾರವಾಗಿದೆ.

ಸುಧೀರ್ ಬಾಲರಾಜ್!

ಇವರ ನಿಜವಾದ ಹೆಸರು ಸುಧೀರ್ ಬಾಲರಾಜ್. ಇವರು ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿ ಕಾಕ್ರೊಚ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ಇವರು ಕಾಕ್ರೋಚ್ ಸುಧಿ ಎಂದೇ ಜನಪ್ರಿಯರಾಗಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸುದೀಪ್​​ ಅವರನ್ನೇ ಇಮಿಟೇಟ್ ಮಾಡಿದ ಗಿಲ್ಲಿ! ಬಿದ್ದು ಬಿದ್ದು ನಕ್ಕ ಕಿಚ್ಚ

ದುನಿಯ ವಿಜಿತ ಸಲಗ, ಭೀಮ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಧಿ ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹೀರೋ ಆಗಿಯೂ ಮಿಂಚಿದ್ದಾರೆ. ಇತ್ತೀಚಿಗಷ್ಟೇ ಕಾಕ್ರೋಚ್ ಸುಧಿ ಅವರು ಹೀರೋ ಆಗಿ ನಟಿಸುತ್ತಿರುವ ಹೊಸ ಸಿನಿಮಾ ಸೆಟ್ಟೇರಿತ್ತು. ಆ ಸಿನಿಮಾಗೆ ಚೈಲ್ಡು ಎಂದು ಶೀರ್ಷಿಕೆ ಇಡಲಾಗಿತ್ತು. ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದರು.