ಬಿಗ್ ಬಾಸ್ ಸೀಸನ್ 12 (Bigg Boss Kannada 1) ಮುಗಿದು ಹಲವು ದಿನಗಳ ಕಳೆದರೂ ಇನ್ನೂ ಅದರ ಹವಾ ನಿಂತಿಲ್ಲ. ಆಗಾಗ ಸ್ಪರ್ಧಿಗಳು ಸಂದರ್ಶನ ಮೂಲಕ ದರ್ಶನ ಮಾಡುತ್ತಲೇ ಇದ್ದಾರೆ. ಗಿಲ್ಲಿ (Gilli Nata) ಕಾಮಿಡಿಗೆ ವೀಕ್ಷಕರು ಫಿದಾ ಆಗಿದ್ದರು. ಇದೀಗ ಮತ್ತೆ ಬಿಗ್‌ಬಾಸ್ ಮನೆ ಸ್ಪರ್ಧಿಗಳೆಲ್ಲಾ ಒಂದ್ಕಡೆ ಸೇರಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದ ಹೆಸರು ‘ದೊಡ್ಮನೆ ಹಬ್ಬ (Dodmane Habba). ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.
ಸ್ಪರ್ಧಿಗಳ ರಿಯೂನಿಯನ್
'ದೊಡ್ಮನೆ ಹಬ್ಬ' ಹೆಸರಿನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ರಿಯೂನಿಯನ್ ನಡೆದಿದೆ. ಗಿಲ್ಲಿ, ರಕ್ಷಿತಾ, ಕಾವ್ಯಾ, ಅಶ್ವಿನಿ ಗೌಡ ಹಾಗೂ ರಘು ಎಲ್ಲರೂ ಮತ್ತೊಮ್ಮೆ ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ. ಗಿಲ್ಲಿ ಕಾಮಿಡಿ ಪಂಚ್‌ಗಳ ಮೂಲಕ ಗಮನ ಸೆಳೆದಿದ್ದಾರೆ.
ಈ ಶೋ ಫೆಬ್ರವರಿ 14ರ ಸಂಜೆ 6ಕ್ಕೆ ಪ್ರಸಾರ ಕಾಣಲಿದೆ. ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಅಶ್ವಿನಿ ಹಾಗೂ ಗಿಲ್ಲಿ ನಟ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೊದಲು ಗಿಲ್ಲಿ ನಟ ಕಪ್ ಎತ್ತಿದ ಬಳಿಕ ಅಶ್ವಿನಿ ಗೌಡ ಸಾಕಷ್ಟು ಮಾತನಾಡಿದ್ದರು.
ಇದನ್ನೂ ಓದಿ: Rakshasa Web Series: ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ; ಬರ್ತಿದೆ ಕ್ರೈಮ್ ಸೈಕಲಾಜಿಕಲ್ ʻರಾಕ್ಷಸʼ ಸಿರೀಸ್
ಸುಷ್ಮಾ ರಾವ್ ಕಾರ್ಯಕ್ರಮ ನಿರೂಪಣೆ
ಸ್ಪರ್ಧಿಗಳೆಲ್ಲಾ ಒಂದ್ಕಡೆ ಸೇರಿ ಫನ್ ಗೇಮ್ಸ್ ಆಡಿದ್ದಾರೆ. ಬಿಗ್‌ಬಾಸ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂದು ಮೆಲುಕು ಹಾಕಿದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ಸುಷ್ಮಾ ರಾವ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.
ರಘು, ಅಶ್ವಿನಿ ಗೌಡ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಸ್ಪರ್ಧಿಗಳ ಜೊತೆಗೆ ಅವರ ಫ್ಯಾಮಿಲಿ ಸದಸ್ಯರು ಕೂಡ ವೇದಿಕೆ ಏರಿದ್ದಾರೆ. ರಕ್ಷಿತಾ ಮಾತಿಗೆ "ಇದು ನಾಮಿನೇಷನ್ ಅಲ್ಲ" ಎಂದು ಗಿಲ್ಲಿ ಕಾಲೆಳೆದಿದ್ದಾರೆ.ಸೂರಜ್, ರಾಶಿಕಾ ಜೋಡಿಯಾಗಿ ಗೇಮ್ಸ್ ಆಡಿದ್ದಾರೆ. . ಗಿಲ್ಲಿಯನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾಯುವಂತಾಗಿದೆ.
ಬಿಗ್‌ಬಾಸ್ ವಿನ್ನರ್ ಗಿಲ್ಲಿ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಟ್ರೋಫಿ ಗೆದ್ದು ಬಂದ ದಿನದಿಂದ ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸಭೆ ಸಮಾರಂಭಗಳಿಗೆ ಅತಿಥಿಗಳಾಗಿ ಹೋಗುತ್ತಿದ್ದಾರೆ. ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: Ghooskhor Pandat row: ‘ಘೂಸ್‌ಖೋರ್ ಪಂಡತ್’ವಿವಾದ: ಮನೋಜ್ ಬಾಜಪೇಯಿ, ನೀರಜ್ ಪಾಂಡೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ
ಒಂದು ಕ್ಷಣ ಕೂಡ ಪುರಸೊತ್ತು ಎನ್ನುವ ಎನ್ನುವಂತಾಗಿದೆ. ಗಿಲ್ಲಿ ನಮ್ಮನ್ನು ಭೇಟಿ ಮಾಡ್ತಿಲ್ಲ ಎಂದು ಅಭಿಮಾನಿಗಳು ಹೇಳಿದ್ದು ಆಯ್ತು. ಈಗ ನಮ್ಮ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ಬಂದಿಲ್ಲ ಎಂದು ನಿರ್ಮಾಪಕರು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.