ಬಿಗ್ ಬಾಸ್ (Bigg Boss Kannada 12) ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ (Sudeep) ಅವರು ಸ್ಪರ್ಧಿಗಳಿಗೆ ಬುದ್ಧಿವಾದ ಜೊತೆಗೆ ಯಾರೆಲ್ಲ ಡೇಂಜರ್ಸ್ ಝೋನ್‌ನಲ್ಲಿ ಇದ್ದಾರೆ ಅಂತ ಹಿಂಟ್ ಕೂಡ ಕೊಡ್ತಾರೆ. ಈ ವಾರ ಕೂಡ ಒಂದು ಟಾಸ್ಕ್ (Task) ಮೂಲಕ ಈ ಬಗ್ಗೆ ಸ್ಪರ್ಧಿಗಳಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಫ್ಯಾನ್ಸ್, ಅಂದರೆ ವೀಕ್ಷಕರು ಬರೆದ ಲೆಟರ್‌ವನ್ನು ಓದಿಸಿದ್ದಾರೆ. ಪದ್ಯದ ಮೂಲಕವೇ ಯಾರು ಮನೆಯಲ್ಲಿ ಇರೋಕೆ ಅರ್ಹರು, ಯಾರು ಔಟ್ ಆಗೋದು ಫಿಕ್ಸ್ ಅಂತ ಬರೆದಿದ್ದಾರೆ. ಮಜವಾಗಿ ಪದ್ಯ ಇದ್ದರೂ, ಡೇಂಜರ್ಸ್ ಝೋನ್‌ನಲ್ಲಿರೋ ಸ್ಪರ್ಧಿಗಳನ್ನ ನೇರವಾಗಿ ಬರೆದಿದ್ದಾರೆ.
ಆಚೆ ಹೋಗೋದು ಪಕ್ಕಾ!
ಈ ಲೆಟರ್‌ವನ್ನು ಕಿಚ್ಚ ಸುದೀಪ್ ಅವರು ಗಿಲ್ಲಿಯ ಬಳಿ ಓದಿಸಿದರು. `ಮೊದಲಿಗೆ ಮಾತಾಡಿ ಮಾತಾಡಿ ಬೇರೆಯವರಿಗೆ ಮಾಡ್ತಾ ಇರ್ತಾರೆ ಸೈಕು, ಅದಿಕ್ಕೆ ಮನೇಲಿ ಯಾರೂ ಮಾಡ್ತಿಲ್ಲ ಲೈಕು! ಡಮಾಲ್ ಡುಮಲ್ ಡಕ್ಕಾ, ಮನೇಲಿ ಆಚೆ ಹೋಗೋದು ಪಕ್ಕಾ' ಅಂತ ಅಶ್ವಿನಿಗೆ ಬರ್ದಿದ್ದಾರೆ.
ಇನ್ನು ಕಾವ್ಯಾಗೆ, `ಕಾವು ಕಾವು ಕಾವು..ನೀನು ಅಣ್ಣ ಅಂದು ಗಿಲ್ಲಿಗೆ ಏಕೆ ಮಾಡ್ತೀಯಾ ನೋವು? ಡಮಾಲ್ ಡುಮಲ್ ಡಕ್ಕಾ, ನೀನು ಇಲ್ಲೇ ಇರ್ತೀಯಾ ಪಕ್ಕಾ'ಎಂದಿದ್ದಾರೆ. ಈ ವೇಳೆ ಸುದೀಪ್ ಮಾತನಾಡಿ, `ಫ್ಯಾನ್ಸ್ ಹೇಳಿದ್ದು ಒಂದೇ ಮಾತು, ಯಾರದು ಓದುತ್ತಿರೋ ಬಿಡ್ತೀರೋ ಗೊತ್ತಿಲ್ಲ. ಆದರೆ ಧ್ರುವಂತ್ ಅವರ ಬಗ್ಗೆ ಬರೆದಿರೋದು ಮಾತ್ರ ಮಿಸ್ ಮಾಡಬೇಡಿ ಅಂತ ಅದನ್ನ ಓದಿ' ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಣ್ಣೀರಿಡುತ್ತಾ ಬಿಗ್ ಬಾಸ್ ಮನೆಯಿಂದ ಹೊರಟೇ ಬಿಟ್ಟ ಚಂದ್ರಪ್ರಭ!
ಸ್ವಲ್ಪ ಹೊತ್ತಲೇ ಬಾಗಿಲ ಹತ್ತಿರ ಧ್ರುವಂತ್
ಧ್ರುವಂತ್ ಬಗ್ಗೆ , `ಸಿಕ್ಕಿದವರಿಗೆ ತಲೆಗೆ ಬಿಡ್ತಾನೆ ಡ್ರಿಲ್ಲಿಂಗ್ಗು, ಅದನ್ನ ಕೇಳೋಕೆ ಎಲ್ಲರಿಗೂ ಬೋರಿಂಗು, ಮಾತು ಎತ್ತಿದ್ರೆ ಕ್ಯಾಮೆರಾ ಮುಂದೆ ನಿಂತುಕೊಳ್ತಾನೆ. ಇನ್ನು ಸ್ವಲ್ಪ ಹೊತ್ತಲೇ ಬಾಗಿಲ ಹತ್ತಿರ ನಿಂತುಕೊಳ್ತಾನೆ. ಡಮಾಲ್ ಡುಮಲ್ ಡಕ್ಕಾ ಇವತ್ತು ಆಚೆ ಹೋಗೋದು ಪಕ್ಕಾ' ಎಂದಿದೆ.
ಧ್ರುವಂತ್ ಅವರ ಆಟದ ವೈಖರಿ ಕಂಡು ನೆಟ್ಟಿಗರೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿ ಜೊತೆಗೂ ಧ್ರುವಂತ್ ಅವರು ಅತಿರೇಕದ ವರ್ತನೆ ತೋರಿದ್ದರು.
ಬಿಗ್ ಬಾಸ್ ಮನೆಯಿಂದ ಹೊರಟೇ ಬಿಟ್ಟ ಚಂದ್ರಪ್ರಭ!
ಅಭಿ, ರಿಷಾ, ಮಾಳು, ರಘು, ಕಾವ್ಯಾ ಹಾಗೂ ಜಾನ್ವಿ ಅವರು ಪತ್ರ ಪಡೆದು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಅತ್ತ, ಧನು, ಸೂರಜ್, ಸ್ಪಂದನಾ, ಧ್ರುವ್, ಚಂದ್ರಪ್ರಭ, ಕಾಕ್ರೋಚ್ ಸುಧಿ, ರಕ್ಷಿತಾ, ಗಿಲ್ಲಿ ಹಾಗೂ ಅಶ್ವಿನಿ ಗೌಡ ಪತ್ರ ಸಿಗದೆ ನಾಮಿನೇಟ್ ಆಗಿದ್ದರು. ನಿನ್ನೆ ಅಶ್ವಿನಿ, ಧನುಷ್, ಗಿಲ್ಲಿ, ರಕ್ಷಿತಾ ಸೇವ್ ಆಗಿದ್ದರು.
ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾನ ಮನೆಯಿಂದ ಕಳಿಸೋ ಸಾಧ್ಯತೆ ಇದೆ .ಇನ್ನು ಚಂದ್ರಪ್ರಭ ಅವರಿಗೆ ಧನುಷ್ ಅವರು ಊಸರವಳ್ಳಿ ಬೋರ್ಡ್ ನೀಡಿದ್ದಾರೆ. ಬೇರೆ ತರಹವೇ ಕಾರಣವನ್ನು ಬೇರೆಯವರಿಗೆ ನೀಡುತ್ತಾರೆ ಎಂದರು. ಇದಾದ ಬಳಿಕ ಕಣ್ಣೀರಿಡುತ್ತಾ ಚಂದ್ರಪ್ರಭ ಅವರು ಮನೆಯಿಂದ ಆಚೆ ಹೋಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ಡೋರ್ ಕೂಡ ಓಪನ್ ಆಗಿದೆ. ಚಂದ್ರಪ್ರಭ ಅವರ ಈ ನಡೆಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.