ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಲಕ್ಕೇ ಇಲ್ಲ ಎನ್ನುತ್ತಿದ್ದ ಧನುಷ್‌ಗೆ ಕೊನೆಗೂ ಒಲಿದು ಬಂತು ಕ್ಯಾಪ್ಟನ್ ಪಟ್ಟ

ಈ ವಾರ ಬಿಗ್‌ ಬಾಸ್‌ ಮಜವಾದ ಟಾಸ್ಕ್‌ವನ್ನ ನೀಡಿದ್ದರು. ಇಡೀ ಬಿಗ್‌ ಬಾಸ್‌ ಮನೆ ಬಿಬಿ ಕಾಲೇಜು ಆಗಿತ್ತು. ಈ ಟಾಸ್ಕ್‌ನಲ್ಲಿ ಕ್ಯಾಪ್ಟನ್ಸಿ ಓಟಕ್ಕೆ ಬರಲು ಟಾಸ್ಕ್‌ವೊಂದನ್ನ ನೀಡಿದ್ದರು. ಅಭಿಷೇಕ್‌ಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ ಮಿಸ್‌ ಆಯ್ತು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ನ (Bigg Boss Kannada 12) ಎರಡನೇ ಕ್ಯಾಪ್ಟನ್‌ (Captain) ಅಂತೂ ರಿವೀಲ್‌ ಆಗಿದ್ದಾಗಿದೆ. ಮೊದಲ ಬಾರಿಗೆ ಕ್ಯಾಪ್ಟನ್ ಆದವರು ಮ್ಯೂಟೆಂಟ್ ರಘು. ಇದೀಗ ಎರಡನೇ ಕ್ಯಾಪ್ಟನ್‌ ಆಗಿ ಧನುಷ್‌ (Dhanush) ಅವರು ಹೊರಹೊಮ್ಮಿದ್ದಾರೆ. ಲಕ್‌ ಇಲ್ಲ ಇಲ್ಲ ಅಂತ ಸದಾ ಹೇಳುತ್ತಿದ್ದ ಧನುಷ್‌ಗೆ ಅಂತೂ ಅದೃಷ್ಟ ಲಕ್ಷ್ಮೀ ಒಲಿದಿದ್ದಾಳೆ.

ಟಾಸ್ಕ್‌ ಏನು?

ಈ ವಾರ ಬಿಗ್‌ ಬಾಸ್‌ ಮಜವಾದ ಟಾಸ್ಕ್‌ವನ್ನ ನೀಡಿದ್ದರು. ಇಡೀ ಬಿಗ್‌ ಬಾಸ್‌ ಮನೆ ಬಿಬಿ ಕಾಲೇಜು ಆಗಿತ್ತು. ಕ್ಯಾಪ್ಟನ್ಸಿ ಓಟಕ್ಕೆ ಬರಲು ಟಾಸ್ಕ್‌ವೊಂದನ್ನ ನೀಡಿದ್ದರು ಬಿಗ್‌ ಬಾಸ್‌. ಈ ರೇಸ್‌ನಲ್ಲಿ ಇದ್ದಿದ್ದು ಕಾವ್ಯ ಶೈವ, ಅಭಿಷೇಕ್, ಧನುಷ್ ಮತ್ತು ಜಾಹ್ನವಿ. ಕೊನೆಗೂ ಧನುಷ್‌ ಸ್ಟೂಡೆಂಟ್ ಆಫ್ ದಿ ವೀಕ್ ಎಂದು ಅನೌನ್ಸ್‌ ಮಾಡಲಾಯ್ತು. ಆದರೆ ಈ ವೇಳೆ ರಕ್ಷಿತಾ ಟಾಸ್ಕ್‌ ನಿಭಾಯಿಸಿ ವೀಕ್ಷಕರ ಗಮನ ಸೆಳೆದರು. ಅದರ ಮಧ್ಯೆ ಸ್ವಲ್ಪ ಧ್ರುವ್‌ ಅವರ ಆಟ ಕೂಡ ಇಂಟ್ರಸ್ಟಿಂಗ್‌ ಆಗಿ ಕಂಡಿತ್ತು. ಆದರೆ ಅಭಿಷೇಕ್‌ಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ ಮಿಸ್‌ ಆಯ್ತು.

Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ



ರಘು v/s ಧನುಷ್‌

ಇದಾದ ಬಳಿಕ ಧನುಷ್‌ ಹಾಗೂ ರಾಘು ನಡುವೆ ಕ್ಯಾಪ್ಟನ್‌ ಆಗಲು ಸ್ಪರ್ಧೆ ನಡೆಯಿತು. ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಚಾನ್ಸ್‌ ಉಳಿದ ಸ್ಪರ್ಧಿಗಳಿಗೆ ನೀಡಿದ್ದರು. ಅದರಂತೆ ತಮ್ಮ ಇಚ್ಛೆಯ ಸ್ಪರ್ಧಿಯನ್ನು ಮನೆಯ ಸದಸ್ಯರು ಆಯ್ಕೆ ಮಾಡಿದರು. ರಘು ಅವರನ್ನು ಗಿಲ್ಲಿ ಮತ್ತು ಮಲ್ಲಮ್ಮ ಮಾತ್ರ ಸೆಲೆಕ್ಟ್‌ ಮಾಡಿದ್ದರು. ಉಳಿದ 13 ಸ್ಪರ್ಧಿಗಳು ಧನುಷ್‌ ಅವರನ್ನು ಆಯ್ಕೆ ಮಾಡಿದರು. ಅಂತಿಮವಾಗಿ ಹೆಚ್ಚು ವೋಟ್‌ ಪಡೆದು ಧನುಷ್‌ ಈ ವಾರ ಮನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ.

ಧನುಷ್‌ ಪರ ಈ ಸ್ಪರ್ಧಿಗಳು ವೋಟ್‌

ಕಾವ್ಯ ಶೈವ, ಸೂರಜ್ ಸಿಂಗ್, ರಕ್ಷಿತಾ ಶೆಟ್ಟಿ, ಕಾಕ್ರೋಚ್ ಸುಧಿ, ರಿಷಾ, ರಾಶಿಕಾ ಶೆಟ್ಟಿ, ಮಾಳು ನಿಪನಾಳ್, ಚಂದ್ರಪ್ರಭ, ಸ್ಪಂದನಾ, ಅಶ್ವಿನಿ ಗೌಡ, ಜಾಹ್ನವಿ, ಧನುಷ್‌ಗೆ ವೋಟ್‌ ಹಾಕಿದರು. ಅದರಲ್ಲೂ ಗಿಲ್ಲಿ ಮಾತ್ರ ರಘು ಅವರಿಗೆ ವೋಟ್‌ ಹಾಕಿ , ಕಳೆದ ವಾರ ಕ್ಯಾಪ್ಟನ್ ಆಗಿ ಮನೆಯನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಕ್ಯಾಪ್ಟನ್ಸಿಯನ್ನು ಚೆನ್ನಾಗಿ ನಿಭಾಯಿಸಿದರು ಎಂದು ಕಾರಣ ನೀಡಿದರು.

ಈಗಾಗಲೇ ಶೋ 30 ದಿನ ಪೂರೈಸಿದೆ. ಇತ್ತೀಚೆಗೆ ನಡೆದ ಬಿಬಿ ಕಾಲೇಜ್ ಫೆಸ್ಟ್‌ನಲ್ಲಿ ಡ್ಯಾನ್ಸ್, ಸ್ಕಿಟ್ ಮಾಡಿ ಸ್ಪರ್ಧಿಗಳು ರಂಜಿಸಿದ್ದಾರೆ. ಕಳೆದ ವಾರ ದೀಪಾವಳಿ ಸಂಭ್ರಮದಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ರಾಶಿಕಾ, ದೃವಂತ್, ಮಲ್ಲಮ್ಮ, ಮಾಳು, ಅಶ್ವಿನಿ ಗೌಡ, ಗಿಲ್ಲಿ, ರಿಷಾ, ಧನುಷ್ ನಾಮಿನೇಟ್ ಆಗಿದ್ದಾರೆ.



BBK 12: ಈ ವಾರದ ಕಳಪೆ ಧ್ರುವಂತ್: ಸ್ಪರ್ಧಿಗಳು ಕೊಟ್ಟ ಕಾರಣ ಏನು ನೋಡಿ

ಇವತ್ತಿನ ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿದ್ದಾರೆ. ಈ ವಾರ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಾದ ಟಾಪಿಕ್‌ಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಹಾಗೇ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ. ನಿಷ್ಠಾವಂತಹ ಸ್ಟೂಡೆಂಟ್ ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ. ಅಲ್ಲದೆ ವಾರದ ಆರಂಭದಲ್ಲೇ ಬಿಗ್ ಬಾಸ್ ಕಾಲೇಜ್​ನಿಂದ ಚಂದ್ರಪ್ರಭ ಜೊತೆಗೆ ಇವರೂ ಡಿಬಾರ್ ಆದರು. ಇದೀಗ ವಾರದ ಕೊನೆಯಲ್ಲಿ ಕಳಪೆ ಪಟ್ಟ ತೊಟ್ಟು ಜೈಲು ಸೇರಿಕೊಂಡಿದ್ದಾರೆ.

ಕಳೆದ ವಾರ ಇವರಿಗೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಿತ್ತು. ಆದರೆ, ಧ್ರುವ್ ಅದನ್ನು ನನಗೆ ಬೇಡ ಅಂತ ರಿಟರ್ನ್ ಮಾಡಿದ್ದರು. ಹೀಗಾಗಿ ಅವರು ನಮ್ಮ ನಿರ್ಧಾರಕ್ಕೆ ಅವರು ಬೆಲೆ ಕೊಡಲಿಲ್ಲ ಎಂದು ಕಾವ್ಯಾ ಮತ್ತು ಚಂದ್ರಪ್ರಭ ಹೇಳಿದ್ದಾರೆ.

Yashaswi Devadiga

View all posts by this author