ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ರೂಲ್ಸ್‌ ಬ್ರೇಕ್‌ ಮಾಡಿದ್ರೂ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಕೊನೇ ʻಕ್ಯಾಪ್ಟನ್‌ʼ ಆದ ಧನುಷ್;‌ ಗಿಲ್ಲಿ ಮುಂದೆ ಸೋತ ಅಶ್ವಿನಿ ಗೌಡ! ಏನಿದು ಟ್ವಿಸ್ಟ್?

Bigg Boss Kannada 12: ಈ ಬಾರಿ ಬಿಗ್‌ ಬಾಸ್‌ ಕನ್ನಡ 12ರ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘನೆಯಾಗಿದ್ದರಿಂದ, ಅಂತಿಮ ತೀರ್ಪನ್ನು ಬಿಗ್ ಬಾಸ್ ಸ್ಪರ್ಧಿಗಳ ವಿವೇಚನೆಗೆ ಬಿಟ್ಟಿದ್ದರು. ವೋಟಿಂಗ್ ಪ್ರಕ್ರಿಯೆಯಲ್ಲಿ ಧನುಷ್ ಅವರಿಗೆ ಹೆಚ್ಚಿನ ಬೆಂಬಲ ಸಿಕ್ಕಿದ್ದರಿಂದ ಅವರು ಈ ಸೀಸನ್‌ನ ಕೊನೆಯ ಕ್ಯಾಪ್ಟನ್ ಎನಿಸಿಕೊಂಡರು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಲ್ಲದೆ, ಈ ಸೀಸನ್‌ನ ಕೊನೆಯ ಕ್ಯಾಪ್ಟನ್‌ ಆಯ್ಕೆಯೂ ನಡೆದಿದೆ. ಆದರೆ ಅದರಲ್ಲೊಂದಿಷ್ಟು ಟ್ವಿಸ್ಟ್‌ಗಳು ಇದ್ದಿದ್ದು ಮಾತ್ರ ಸತ್ಯ! ಹೌದು, ಬಿಗ್‌ ಬಾಸ್‌ ಮನೆಯ ಈ ಸಲದ ಕೊನೆಯ ಕ್ಯಾಪ್ಟನ್‌ ಆಗಿ ಧನುಷ್‌ ಅವರು ಆಯ್ಕೆ ಆಗಿದ್ದಾರೆ.

ಈ ಬಾರಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌

ಹೌದು, ಬಿಗ್‌ ಬಾಸ್‌ 12ರ ಕೊನೆಯ ಕ್ಯಾಪ್ಟನ್‌ ಆಯ್ಕೆ ಮಾಡಲು ನಡೆಸಿದ ಕ್ಯಾಪ್ಟನ್ಸಿ ರೇಸ್‌ನಲ್ಲಿ ಧನುಷ್‌ ಮತ್ತು ಅಶ್ವಿನಿ ಗೌಡ ಮಾತ್ರ ಉಳಿದುಕೊಂಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಧನುಷ್‌ ವಿನ್ ಕೂಡ ಆಗಿದ್ದರು. ಆ ಮೂಲಕ ಈ ಸೀಸನ್‌ನ ಕೊನೆಯ ಕ್ಯಾಪ್ಟನ್‌ ಎಂಬ ಖುಷಿಯಲ್ಲಿದ್ದರು. ಆದರೆ ಅಲ್ಲೊಂದು ಎಡವಟ್ಟು ಆಗಿತ್ತು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರೂಲ್ಸ್‌ ಬ್ರೇಕ್‌ ಮಾಡಲಾಗಿತ್ತು. ಧನುಷ್‌ ಗೊತ್ತಿದ್ದೋ ಗೊತ್ತಿಲ್ಲದೇಯೋ, ರೂಲ್ಸ್‌ ಬ್ರೇಕ್‌ ಮಾಡಿದ್ದರಿಂದ, ಅದೊಂದು ವಿಚಾರ ಚರ್ಚೆಗೆ ಬಂತು. ಕೊನೆಗೆ ಇದನ್ನು ಸ್ಪರ್ಧಿಗಳೇ ಕುಳಿತು, ಸಮಾಲೋಚಿಸಿ ಬಗೆಹರಿಸಿಕೊಳ್ಳಿ ಎಂದು ಬಿಗ್‌ ಬಾಸ್‌ ಹೇಳಿದರು.

BBK 12: 'ಬಿಗ್‌ ಬಾಸ್‌' ಮನೆಯ ಕೊನೆಯ ಕ್ಯಾಪ್ಟನ್‌ ಯಾರು? ಕೊನೇ ಕ್ಷಣದಲ್ಲಿ ಧನುಷ್‌ಗೆ ಬಿಗ್‌ ಶಾಕ್!‌ ಕಾರಣವೇನು?

ಸ್ಪರ್ಧಿಗಳ ಬಳಿ ಮನವಿ ಮಾಡಿಕೊಂಡ ಅಶ್ವಿನಿ

ಆಟದಲ್ಲಿ ರೂಲ್ಸ್‌ ಬ್ರೇಕ್‌ ಆಗಿದ್ದರಿಂದ ಮನೆಯ ಕ್ಯಾಪ್ಟನ್‌ ಅನ್ನು ಆಯ್ಕೆ ಮಾಡುವ ಅಧಿಕಾರ ಸ್ಪರ್ಧಿಗಳಿಗೆ ಸಿಕ್ಕಿತ್ತು. ಅಂತಿಮವಾಗಿ ಅಶ್ವಿನಿ ಮತ್ತು ಧನುಷ್‌ ಅವರು ಸ್ಪರ್ಧಿಗಳ ಬಳಿ ಮನವಿ ಮಾಡಿಕೊಂಡರು. ಅಸಲಿಗೆ, ಟಾಸ್ಕ್‌ ಆಡುವಾಗಲೇ, "ಈ ಮನೆಯಲ್ಲಿ ನಾನು ಸೋಲಬೇಕು ಅಂತ ಬಯಸುವವರು ತುಂಬಾ ಜನರಿದ್ದಾರೆ" ಎಂಬ ಮಾತು ಅಶ್ವಿನಿ ಬಾಯಿಂದಲೇ ಬಂದಿತ್ತು. ಇನ್ನೂ ಅಧಿಕಾರ ಸಿಕ್ಕಾಗ ಅವರ ಪರವಾಗಿ ವೋಟ್‌ ಹಾಕ್ತಾರಾ? ಅಶ್ವಿನಿ ಅಂದುಕೊಂಡಂತೆಯೇ ಆಯ್ತು. ಧನುಷ್ ಪರವಾಗಿ ಕಾವ್ಯ ಶೈವ, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ ಅವರು ವೋಟ್ ಮಾಡಿದರು.

Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್‌ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್‌

ಅತ್ತ ಅಶ್ವಿನಿ ಪರವಾಗಿ ರಕ್ಷಿತಾ ಶೆಟ್ಟಿ, ರಘು ಮತ್ತು ಧ್ರುವಂತ್ ವೋಟ್‌ ಹಾಕಿದರು. ಜಾಸ್ತಿ ವೋಟ್‌ ಪಡೆದುಕೊಂಡ ಧನುಷ್‌ ಮನೆಯ ಕೊನೆಯ ಕ್ಯಾಪ್ಟನ್‌ ಆದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರೂಲ್ಸ್‌ ಬ್ರೇಕ್‌ ಆಗಿದ್ದರೂ, ಸ್ಪರ್ಧಿಗಳ ನಿರ್ಧಾರ ಮತ್ತು ಬೆಂಬಲದಿಂದಾಗಿ ಧನುಷ್‌ ಗೆಲ್ಲುವಂತೆ ಆಯಿತು. ಇದರಿಂದಾಗಿ ಅಶ್ವಿನಿಗೆ ತೀವ್ರ ಬೇಸರ ಉಂಟಾಯಿತು.

ಗಿಲ್ಲಿ ಎದುರು ಸೋತ ಅಶ್ವಿನಿ

ಹೌದು, ಕಳೆದ ವಾರ ಗಿಲ್ಲಿ ನಟ ಅವರು ಕ್ಯಾಪ್ಟನ್‌ ಆಗಿದ್ದರು. ಕೆಲಸದ ವಿಚಾರವಾಗಿ ಅಶ್ವಿನಿಗೆ ಗಿಲ್ಲಿ ಆರ್ಡರ್‌ ಮಾಡಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಶ್ವಿನಿ ಗೌಡ, "ಕ್ಯಾಪ್ಟನ್ ಎಂದರೆ ನಿಂಗೇನು ಕೋಡು ಇರೋದಿಲ್ಲ" ಎಂದಿದ್ದರು ಅಶ್ವಿನಿ. ಅದಕ್ಕೆ ಕೌಂಟರ್‌ ಕೊಟ್ಟಿದ್ದ ಗಿಲ್ಲಿ ನಟ, "ಮೊದಲು ನೀನು ಕ್ಯಾಪ್ಟನ್ ಆಗಿ ತೋರಿಸು, ಆಮೇಲೆ ಮಾತಾಡುವಿಯಂತೆ" ಎಂದು ಚಾಲೆಂಜ್‌ ಮಾಡಿದ್ದರು. ಆದರೆ ಇದೀಗ ಈ ಸೀಸನ್‌ನ ಕೊನೆಯ ಕ್ಯಾಪ್ಟನ್‌ ಪಟ್ಟವೂ ಧನುಷ್‌ಗೆ ಸಿಕ್ಕಿದ್ದರಿಂದ ಅಶ್ವಿನಿಗೆ ಕ್ಯಾಪ್ಟನ್‌ ಆಗುವ ಯಾವ ಚಾನ್ಸ್‌ ಕೂಡ ಇಲ್ಲ! ಆ ಮೂಲಕ ಗಿಲ್ಲಿ ಹಾಕಿದ್ದ ಚಾಲೆಂಜ್‌ನಲ್ಲಿ ಅಶ್ವಿನಿ ಸೋತಿದ್ದಾರೆ.